Udupi District; ಅಕ್ರಮ ಸಕ್ರಮ: ಉಡುಪಿಯ 24,470 ಅರ್ಜಿ ವಿಲೇವಾರಿ
Team Udayavani, Dec 11, 2024, 1:29 AM IST
ಕಾಪು: ಉಡುಪಿ ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ನಮೂನೆ 50, 53ರಲ್ಲಿ ಸ್ವೀಕೃತವಾಗಿರುವ ಅರ್ಜಿಗಳಲ್ಲಿ 24,470ನ್ನು ಸಕ್ರಮಗೊಳಿಸಲಾಗಿದೆ. ಬಾಕಿಯಿರುವ ಅರ್ಜಿಗಳಲ್ಲಿ ಅರ್ಹವಾದವುಗಳನ್ನು ಸಮಿತಿಯಲ್ಲಿ ಮಂಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಸಕ್ತ ವರ್ಷದಲ್ಲಿ ನಮೂನೆ 53ರಲ್ಲಿ ಹಾಗೂ ನಮೂನೆ 57 ರಲ್ಲಿ ಸ್ವೀಕೃತವಾಗಿದ್ದ ಒಟ್ಟು 269 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಗರ್ ಹುಕುಂ ಕಮಿಟಿ ಯಲ್ಲಿ ಸದರಿ ಕಡತವನ್ನು ಇತ್ಯರ್ಥಗೊಳಿಸಲು ಯಾವುದೇ ತಾಂತ್ರಿಕ ತೊಡಕುಗಳಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.