Sabarimala: ಭಕ್ತರ ಸಂಖ್ಯೆ 15 ಲಕ್ಷದಷ್ಟು ಹೆಚ್ಚಾಗುವ ನಿರೀಕ್ಷೆ
Team Udayavani, Dec 11, 2024, 7:50 AM IST
ಶಬರಿಮಲೆ: ದಿನದಿಂದ ದಿನಕ್ಕೆ ಇತರ ರಾಜ್ಯಗಳ ಭಕ್ತರ ಒಳಹರಿವಿನಲ್ಲಿ ತೀವ್ರ ಹೆಚ್ಚಳದಿಂದ ಹಿಂದಿನ ತೀರ್ಥಯಾತ್ರೆಗೆ ಹೋಲಿಸಿದರೆ ಕೇರಳದ ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಸುಮಾರು 15 ಲಕ್ಷದಷ್ಟು ಹೆಚ್ಚಳವಾಗಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಂದಾಜಿಸಿದೆ.
ಹೆಚ್ಚಿನ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ನೀಲಕಲ್‌ನಿಂದ ಸನ್ನಿಧಾನದವರೆಗೆ ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.
ದಟ್ಟಣೆಯನ್ನು ಕಡಿಮೆ ಮಾಡಲು ಪಂಪಾ ಮತ್ತು ನೀಲಕಲ್‌ನಲ್ಲಿ ಹೆಚ್ಚುವರಿ ಪಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಟ್ರಾವಂಕೂರು ದೇವಸ್ವಂ ಮಂಡಳಿ ಮುಖ್ಯಸ್ಥ ಪಿ.ಎಸ್.ಪ್ರಶಾಂತ್ ಹೇಳಿದ್ದಾರೆ.
ಕಳೆದ ವರ್ಷ ಎರಡು ತಿಂಗಳ ಅವಧಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಇದರಿಂದ 357 ಕೋಟಿ ರೂ.ಗಳಷ್ಟು ಆದಾಯ ಬಂದಿತ್ತು. ಹಿರಿಯ ಮಹಿಳೆಯರು ಮತ್ತು ಮಕ್ಕಳಿಗಾಗಿ ಸೌಲಭ್ಯ ಕೇಂದ್ರವನ್ನು ಪಂಪಾದಲ್ಲಿ ತೆರೆಯಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.