ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ಗೆ ಅದ್ದೂರಿ ಚಾಲನೆ

150ಕ್ಕೂ ಮಿಕ್ಕಿ ಕಲಾ ತಂಡಗಳ ಆಕರ್ಷಕ ಪ್ರದರ್ಶನ ; ಸಾಂಸ್ಕೃತಿಕ ರಥಕ್ಕೆ ರಥಾರತಿ ಸಲ್ಲಿಕೆ

Team Udayavani, Dec 11, 2024, 1:44 AM IST

ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ಗೆ ಅದ್ದೂರಿ ಚಾಲನೆ

ವಿದ್ಯಾಗಿರಿ/ಮೂಡುಬಿದಿರೆ: ನಾಡಿನ ಸುಮನಸುಗಳಲ್ಲಿ ಸಾಮೂಹಿಕ ನೆಲೆಯಲ್ಲಿ ನವೋನ್ಮೆàಷದ ಭಾವಗಳನ್ನು ಬಿತ್ತಿ ನವೋಲ್ಲಾಸ ಮೂಡಿಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ನ 30ರ ಆವೃತ್ತಿಗೆ ಮಂಗಳವಾರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮುನ್ನುಡಿ ಬರೆಯಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಜತೆಯಲ್ಲೇ ಕೃಷಿ, ಕರಕುಶಲ, ಫಲಪುಷ್ಪ, ಆಹಾರ ಸಹಿತ 8 ಮೇಳಗಳನ್ನು ಒಳಗೊಂಡು ಡಿ. 15ರ ವರೆಗೆ ನಡೆಯಲಿದೆ.

ವಿರಾಸತ್‌ ಎಂದರೆ ವಿಶಾಲ ದೃಷ್ಟಿಕೋನ: ಡಾ| ಹೆಗ್ಗಡೆ
ವಿರಾಸತ್‌ಗೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ವಿರಾಸತ್‌ ಎಂದರೆ ವಿಶಾಲ ದೃಷ್ಟಿಕೋನ, ಇಲ್ಲಿ ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವಾಗಿ ವಿರಾಸತ್‌ ಮೂಡಿಬಂದಿದೆ ಎಂದರು.

ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜತೆಯಾಗಿ ಮೇಳೈಸಿದ, ಹೃದಯಗಳನ್ನು ಒಗ್ಗೂಡಿ ಸುವ ಕಾರ್ಯಕ್ರಮ ಎಂದರು.

ಎಲ್ಲರಿಗೂ ಸಂತೋಷ ನೀಡುವ ವ್ಯಕ್ತಿತ್ವವೇ ಆಳ್ವ, ಅವರು ಜನರೆಲ್ಲರ ಪಂಚೇಂದ್ರಿಯಗಳಿಗೆ ಉಣಬಡಿಸುವ ದೃಷ್ಟಿ ಉಳ್ಳವರು, ಇಂತಹ ವ್ಯಕ್ತಿತ್ವ ನಾಡಿನಾದ್ಯಂತ ಹೆಚ್ಚಲಿ. ವಿದ್ಯಾಗಿರಿಯ ಎಲ್ಲೆಡೆ ಹಸುರು, ಹೂವು ಅರಳಿದೆ. ಅದರಂತೆಯೇ ನಮ್ಮೆಲ್ಲರ ಮನಸ್ಸುಗಳೂ ಅರಳಲಿ ಎಂದರು.

ಆಳ್ವಾಸ್‌ ವಜ್ರ ಕಿರೀಟೆ: ಪ್ರಕಾಶ್‌ ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಜಿ.ಆರ್‌.ಗ್ರೂಪ್‌ ಅಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ ಮಾತನಾಡಿ, ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ 30 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 3 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಒದಗಿಸಲಾಗುತ್ತಿದೆ. ಇಷ್ಟು ದೊಡ್ಡ ವಿದ್ಯಾ ಸಾಮ್ರಾಜ್ಯ ಕಟ್ಟಿರುವುದು ಡಾ| ಮೋಹನ್‌ ಆಳ್ವರ ಸಾಧನೆ. ಆಳ್ವಾಸ್‌ ವಿದ್ಯಾಸಂಸ್ಥೆ ಕರಾವಳಿಗೆ ವಜ್ರ ಕಿರೀಟ ಎಂದು ಶ್ಲಾಘಿಸಿದರು.

ಆಳ್ವರಿಂದಾಗಿ ಜೈನ ಕಾಶಿ ಎನಿಸಿದ್ದ ಮೂಡುಬಿದಿರೆ ಇಂದು ವಿದ್ಯಾಕಾಶಿ ಯಾಗಿ, ದೇಶದ ಸಾಂಸ್ಕೃತಿಕತೆಯನ್ನು ಬಿಂಬಿಸುವ ಕ್ಷೇತ್ರವಾಗಿ ಬೆಳೆದಿದೆ. ಮೇಲಾಗಿ 30 ವರ್ಷಗಳಿಂದ ವಿರಾಸತ್‌ ಕಾರ್ಯಕ್ರಮ ನಡೆಸುತ್ತಿರುವುದು ಮತ್ತೂಂದು ಹಿರಿಮೆ. ಈ ನೆಲದಲ್ಲಿ ವಿರಾಸತ್‌ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಬಣ್ಣಿಸಿದರು.

ಊರಿನ ಕಾರ್ಯಕ್ರಮ ಈಗ ರಾಷ್ಟ್ರೀಯ ಹಬ್ಬ: ಆಳ್ವ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅವರು ಪ್ರಸ್ತಾವಿಸಿ, ಎರಡು ದಶಕಗಳ ಹಿಂದೆ ಮೂಡುಬಿದಿರೆ ಊರಿಗಷ್ಟೇ ಸೀಮಿತ ವಾಗಿದ್ದ ವಿರಾಸತ್‌ ಇಂದು ರಾಷ್ಟ್ರೀಯ ಹಬ್ಬವಾಗಿದೆ. 500 ವಿದ್ಯಾರ್ಥಿಗಳು ವೀಕ್ಷಿಸುತ್ತಿದ್ದ ಹಬ್ಬಕ್ಕೆ ಈಗ 50 ಸಾವಿರ ಜನ ಬರುತ್ತಿದ್ದಾರೆ ಎಂದರು.

ಅಂಚೆ ಲಕೋಟೆ ಬಿಡುಗಡೆ
ಆಳ್ವಾಸ್‌ ವಿರಾಸತ್‌ 30ನೇ ವರ್ಷದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಹೊರತಂದಿರುವ “ಆಳ್ವಾಸ್‌ ಸಾಂಸ್ಕೃತಿಕ ವೈಭವ’ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದಂಪತಿ, ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌, ಭಾರತ್‌ ಸ್ಕೌಟ್ಸ್‌ ಗೈಡ್ಸ್‌ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಮುಂಬಯಿ ಹೇರಂಭಾ ಇಂಡಸ್ಟ್ರೀಸ್‌ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ಆಳ್ವ, ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆನುವಂಶಿಕ ಮೊಕ್ತೇಸರ ಲಕ್ಷ್ಮಿ ನಾರಾಯಣ ಆಸ್ರಣ್ಣ, ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ್‌ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್‌ ಪಿಯು ಕಾಲೇಜಿನ ಡೀನ್‌ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇಂದಿನ ಕಾರ್ಯಕ್ರಮ
ಆಳ್ವಾಸ್‌ ವಿರಾಸತ್‌ 2024ರ ಎರಡನೇ ದಿನವಾದ ಡಿ.11ರಂದು ಸಂಜೆ 5.45ರಿಂದ 6.30ರ ವರೆಗೆ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರಿಗೆ ಆಳ್ವಾಸ್‌ ವಿರಾಸತ್‌ 2024 ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಂಜೆ 6.30ರಿಂದ 7.30ರ ವರೆಗೆ ಪಂ| ವೆಂಕಟೇಶ್‌ ಕುಮಾರ್‌ ಮತ್ತು ಬಳಗದಿಂದ ಹಿಂದೂಸ್ಥಾನಿ ಗಾಯನ. ರಾತ್ರಿ 7.45ರಿಂದ 9ರ ವರೆಗೆ ರಂಗ್‌ಮಲ್ಹರ್‌ ದಿ ಫೋಕ್‌ ಆರ್ಟ್‌ ಅವರಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ. ರಾತ್ರಿ 9ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ.

ಕಣ್ಮನ ಸೆಳೆದ ಸಾಂಸ್ಕೃತಿಕ ವೈಭವದ ಮೆರವಣಿಗೆ
ಮೂಡುಬಿದಿರೆ: ವಿರಾಸತ್‌ಗೆ ನಾಂದಿಯಾಗಿ 150ರಷ್ಟು ಸಾಂಸ್ಕೃತಿಕ ತಂಡಗಳಿಂದ ನಡೆದ ಭವ್ಯ ಸಾಂಸ್ಕೃತಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ರಥ ಹಾಗೂ ಅದಕ್ಕೆ ಆರತಿಯ ಗೌರವವು ಬೆರಗು, ಭಕ್ತಿಯ ಸಮ್ಮಿಳಿತ ಭಾವನೆ ಮೂಡಿಸಿತು.

ದೇಶದ ಸಾಂಪ್ರದಾಯಿಕ, ಆಧುನಿಕ ಶೈಲಿ ಎರಡನ್ನೂ ಮೇಳೈಸಿ ಕೊಂಡು ಸೃಜನಶೀಲತೆಗೆ ಸಾಕ್ಷಿಯಾಗಿ ದೇಶದ ಉದ್ದಗಲದಿಂದ ಆಗಮಿ ಸಿದ ಕಲಾವಿದರ ಪ್ರದರ್ಶನ ನೆರೆದವ ರನ್ನು ನಿಬ್ಬೆರಗಾಗಿಸಿತು. ದೇಶದ ಸಮೃದ್ಧ ಸಾಂಸ್ಕೃತಿಕ ವೈವಿಧ್ಯಕ್ಕೆ ನಿದರ್ಶನವಾಗಿದ್ದ ಸುದೀರ್ಘ‌ ಮೆರವಣಿಗೆಯನ್ನು ವನಜಾಕ್ಷಿ ಶ್ರೀಪತಿ ಭಟ್‌ ಬಯಲುರಂಗ ಮಂದಿರದಲ್ಲಿ ಸೇರಿದ್ದ ಮಂದಿ ಕಣ್ತುಂಬಿಕೊಅಡರು.

ಶೋಭಾಯಾತ್ರೆಯ ಕೊನೆಯಲ್ಲಿ ನಡೆದದ್ದು ಸಾಂಸ್ಕೃತಿಕ ರಥದ ಸಂಚಲನೆ. ಶಂಖ, ಕೊಂಬು, ಕಹಳೆಯ ತಂಡಗಳು ಮುನ್ನಡೆಯುತ್ತಾ ಬಂದರೆ ಕಲಶ ಹೊತ್ತ ಮಹಿಳೆಯರು, ವಿಪ್ರರ ವೇದಘೋಷ, ಪಂಢರಾಪುರದ ಭಜನ ತಂಡ, ಹರೇರಾಮ ಹರೇಕೃಷ್ಣ ಭಜನ ತಂಡ ಸಾಗಿ ಬಂತು. ವೇದಿಕೆಯ ಬಲಭಾಗದಿಂದ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ಶ್ರೀರಾಮ ಹಾಗೂ ಶ್ರೀ ಕೃಷ್ಣ ದೇವರ ಮೆರವಣಿಗೆಯೊಂದಿಗೆ ವಿರಾಸತ್‌ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು.

ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರ ಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.

ಹರಿದ್ವಾರದಿಂದ ಬಂದ ವಿಪುಲ್‌ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಧೂಪಾರತಿ, ಹಾಗೂ ಮುಖ್ಯ ಆರತಿ ಬೆಳಗುವ ಮೂಲಕ ಸೇರಿದವರಲ್ಲಿ ಭಕ್ತಿಗೌರವದ ಪುಳಕ ಮೂಡಿಸಿದರು.

ಪಾರಂಪರಿಕ ಸೊಗಡು, ಸೃಜನಶೀಲತೆ, ವರ್ಣರಂಜಿತ ನಡೆ… ಈ ಮೂಲಕ ಸೇರಿದ್ದ 148 ತಂಡಗಳು ವೇದಿಕೆಯ ಮುಂದೆ ತಮ್ಮ ವಿಷಯ ವೈವಿಧ್ಯಗಳನ್ನು ಪ್ರದರ್ಶಿಸಿದವು. ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾ ನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಕೊಂಡೆವೂರು, ಮಾಣಿಲ ಮೋಹನ ದಾಸ ಸ್ವಾಮೀಜಿ ಹಾಗೂ ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಲಕ್ಷಿ$¾à ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಚೆಂಡೆ, ಜಗ್ಗಲಿಗೆ, ಡೊಳ್ಳು, ನಾಸಿಕ್‌ ಬ್ಯಾಂಡ್‌ ಮತ್ತಿತರ ವಾದ್ಯಗಳ ಮೇಳಕ್ಕೆ ಸೇರಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದರು. ಹುಲಿ ಕುಣಿತಕ್ಕಂತೂ ಆಸಕ್ತರು ಕುಳಿತಲ್ಲೇ ನಲಿದರು.

ಜಾನಪದ, ಸಂಪ್ರದಾಯ, ಪುರಾಣ ಹಿನ್ನೆಲೆಯ ಯಕ್ಷಗಾನ, ಕಹಳೆ, ಕೊಡೆಗಳು, ಪೂರ್ಣಕುಂಭ, ನಾಗಸ್ವರ, ನಂದಿಧ್ವಜ, ಪೂಜಾಕುಣಿತ, ಆಂಜನೇಯ ವಾನರಸೇನೆ, ತಟ್ಟಿ ರಾಯ, ಮರಗಾಲು, ಕೇರಳದ ತೆಯ್ಯಂ, ಆಧುನಿಕತೆಯ ಮೂಸೆಯಲ್ಲ ರಳಿದ ಘಟೋತ್ಕಜ, ಕಿಂಗ್‌ ಕಾಂಗ್‌, ಮೀನು, ವಿಚಿತ್ರ ಮಾನವ, ಜೋಡಿ ಜಿಂಕೆ, ಶಿವ-ಆಘೋರಿಗಳು, ಅರ್ಧ ನಾರೀಶ್ವರ, ವಾರ್‌ಕ್ರಾಫ್ಟ್ , ಆಳ್ವಾಸ್‌ ವಿದ್ಯಾರ್ಥಿಗಳ ಶ್ರೀಲಂಕಾ ಜಾನಪದ ವೇಷ, ಏಂಜೆಲ್ಸ್, ಸಾಂತಾಕ್ಲಾಸ್‌, ಕಾರ್ಟೂನ್ ಗಳು ಇತ್ಯಾದಿ ಮನರಂಜಿಸಿದವು.

ಚಿತ್ರ: ಸತೀಶ್‌ ಇರಾ

ಟಾಪ್ ನ್ಯೂಸ್

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

9

Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್‌ ಅವ್ಯವಸ್ಥೆ

8

Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!

6

Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.