Puttur: ಹೊಸ ವರ್ಷಕ್ಕೆ ತಾಲೂಕು ಶಿಕ್ಷಣ ಸೌಧ ಬಳಕೆಗೆಗೆ ಸಿದ್ಧ
ಬ್ರಿಟಿಷ್ ಕಾಲದ ಕಟ್ಟಡ ಕೆಡವಿ ಹೊಸ ನಿರ್ಮಾಣ
Team Udayavani, Dec 11, 2024, 12:58 PM IST
ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನ ನೂತನ ತಾಲೂಕು ಶಿಕ್ಷಣ ಸೌಧ ಹೊಸ ವರ್ಷದ ಮೊದಲ ತಿಂಗಳಲ್ಲಿ ಕಾರ್ಯಾರಂಭಕ್ಕೆ ಅಣಿಗೊ ಳ್ಳುವ ನಿಟ್ಟಿನಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ.
ಇಲ್ಲಿ ಸುಮಾರು 1938ರಲ್ಲಿ ನಿರ್ಮಾಣ ಆಗಿರಬಹುದಾದ ಹಳೆ ಕಟ್ಟಡದಲ್ಲಿ ಬಿಇಒ ಕಚೇರಿ ಕಾರ್ಯ ನಿರ್ವಹಿಸುತಿತ್ತು. ಪುತ್ತೂರು, ಕಡಬ ತಾಲೂಕಿನ 23 ಸರಕಾರಿ ಪ್ರೌಢಶಾಲೆಗಳು, 181 ಸರಕಾರಿ ಪ್ರಾ. ಶಾಲೆಗಳು, 22 ಅನುದಾನಿತ ಪ್ರೌಢ ಶಾಲೆಗಳು, 13 ಅನುದಾನಿತ ಪ್ರಾಥಮಿಕ ಶಾಲೆಗಳು, 36 ಅನುದಾನ ರಹಿತ ಪ್ರೌಢಶಾಲೆಗಳು ಹಾಗೂ 39 ಅನುದಾನರಹಿತ ಪ್ರಾಥಮಿಕ ಶಾಲೆಗಳ ಕೇಂದ್ರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇತ್ತೀಚೆಗಿನ ದಿನದಲ್ಲಿ ಒಂದು ರೀತಿಯಲ್ಲಿ ಸಮಸ್ಯೆಯ ಗೂಡಾಗಿತ್ತು.
80 ಲಕ್ಷ ರೂ.ಅನುದಾನ
ಹಿಂದಿನ ಶಾಸಕ ಮಠಂದೂರು ಅವಧಿ ಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಕೀರ್ಣ (ತಾಲೂಕು ಶಿಕ್ಷಣ ಸೌಧ) ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ 80 ಲಕ್ಷ ರೂ. ಬಿಡುಗಡೆಗೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲೇ ನೆಲ್ಲಿಕಟ್ಟೆ ಶಿಕ್ಷಣ ಸಂಪನ್ಮೂಲ ಕೇಂದ್ರದ ಹಿಂಭಾಗದ ಸರಕಾರಿ ಶಾಲೆಯ ಜಮೀನಿನ ಒಂದು ಪಾರ್ಶ್ವದಲ್ಲಿ ನೂತನ ಶಿಕ್ಷಣ ಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿತ್ತು. 3 ಮಹಡಿಗಳ ಶಿಕ್ಷಣ ಸೌಧದ ನಕಾಶೆ ರೂಪಿಸಲಾಗಿತ್ತು. ಇದರಲ್ಲಿ ಬಿಇಒ ಕಚೇರಿ, ಬಿಆರ್ಸಿ ಕಚೇರಿಗಳು, ತರಬೇತಿ ಕೊಠಡಿ, ಸಭಾಂಗಣ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 80 ಲಕ್ಷ ರೂ.ನಲ್ಲಿ ನೆಲ ಮಹಡಿ ಮಾತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಶಾಸಕರು ಬದಲಾದರು ಜಾಗವೂ ಬದಲಾಯಿತು
ಚುನಾವಣೆಯ ಅನಂತರ ಪುತ್ತೂರಿಗೆ ಹೊಸ ಶಾಸಕರು ಬಂದರು. ಶಾಸಕ ಅಶೋಕ್ ಕುಮಾರ್ ಅವರು ತನ್ನ ಯೋಜನೆಯ ಪ್ರಕಾರ ನೆಲ್ಲಿಕಟ್ಟೆಯಲ್ಲಿ ನಿರ್ಮಾಣವಾಗಬೇಕಿದ್ದ ಬಿಇಒ ಕಚೇರಿಯನ್ನು ಹಳೆಯ ಬಿಇಒ ಕಚೇರಿ ಇದ್ದ ಸ್ಥಳಕ್ಕೆ ಬದಲಾಯಿಸಿದರು. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ಡಾ|ಶಿವರಾಮ ಕಾರಂತ ಪ್ರೌಢಶಾಲೆಯ ಕಟ್ಟಡಕ್ಕೆ ಬಿಇಒ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಹಳೆಯ ಬಿಇಒ ಕಟ್ಟಡವನ್ನು ಕೆಡವಲಾಯಿತು. ಅಲ್ಲಿ ಹೊಸ ಕಟ್ಟಡಕ್ಕೆ ಮತ್ತೂಮ್ಮೆ ಶಿಲಾನ್ಯಾಸ ನಡೆಸಲಾಯಿತು. ಆರಂಭಿಕ ಯೋಜನೆಯಂತೆ 80 ಲಕ್ಷ ರೂ.ಬಜೆಟ್ನಲ್ಲಿ ನೆಲ ಮಹಡಿ ನಿರ್ಮಾಣಗೊಂಡು ಉದ್ಘಾಟನೆ ನೆರವೇರಿಸಿ ಅನಂತರ ಅನುದಾನ ಲಭ್ಯವಾದಂತೆ ಉಳಿದ 2 ಅಂತಸ್ತು ನಿರ್ಮಾಣದ ಯೋಜನೆಯು ಇಲ್ಲಿದೆ.
ಬಹು ವರ್ಷದ ಬೇಡಿಕೆಯಂತೆ ಬಿಇಒ ಕಚೇರಿಗ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ತಾಲೂಕಿನಲ್ಲಿ ಸರಕಾರಿ ಕಚೇರಿಗಳಿಗೆ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಅಶೋಕ್ ಕುಮಾರ್ ರೈ, ಶಾಸಕ, ಪುತ್ತೂರು
ಬಿಇಒ ಕಚೇರಿ ಕಟ್ಟಡ ನಿರ್ಮಾಣ ಪ್ರಗತಿಯ ಲ್ಲಿದೆ. ಡಿಸೆಂಬರ್ ವೇಳೆ ಕಟ್ಟಡದ ಬಹುತೇಕ ಕೆಲಸ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ತಿಳಿಸಿದ್ದಾರೆ.
– ಲೋಕೇಶ್ ಎಸ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.