Mangaluru: ಶುಭ ಸುದ್ದಿ… ಹೊಸ ವರ್ಷಕ್ಕೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ
ಮಂಗಳೂರು-ಹೊಸದಿಲ್ಲಿ, ಮಂಗಳೂರು - ಪುಣೆ ನಡುವೆಯೂ ನೇರ ವಿಮಾನ
Team Udayavani, Dec 11, 2024, 7:59 PM IST
ಮಂಗಳೂರು: ಹೊಸ ವರ್ಷದ ಕೊಡುಗೆಯಾಗಿ ಮಂಗಳೂರಿನಿಂದ ಸಿಂಗಾಪುರ ನಡುವಣ ನೇರ ವಿಮಾನ ಹಾರಾಟಕ್ಕೆ ಏರ್ ಇಂಡಿಯ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ಮುಂದಾಗಿದೆ. ಜ.21 ರಿಂದ ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಚರಣೆ ನಡೆಸಲಿದೆ. ಅದೇ ರೀತಿ ಮಂಗಳೂರು-ಹೊಸದಿಲ್ಲಿ, ಮಂಗಳೂರು – ಪುಣೆ ನಡುವೆಯೂ ನೇರ ವಿಮಾನ ಹಾರಾಡಲಿದೆ.
ಈ ಕುರಿತು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಟ್ವೀಟ್ ಮಾಡಿ ಸಿಂಗಾಪುದಲ್ಲಿ ನೆಲೆಸಿರುವ ಮಂಗಳೂರಿಗರಿಗೆ ತಮ್ಮ ಊರುಗಳಿಗೆ ಬರಲು ಮತ್ತು ಮಂಗಳೂರಿನಲ್ಲಿ ಹೂಡಿಕೆಗೆ ಈ ಸೌಕರ್ಯ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆ್ಯಕ್ಟ್ ಈಸ್ಟ್ ಪಾಲಿಸಿ ಜೋಡಣೆ ಮತ್ತು ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವಂತಿದೆ. ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಬೇಕೆಂಬ ಬೇಡಿಕೆ ಇತ್ತು. ಈ ಕುರಿತಂತೆ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇದೀಗ ನೇರ ವಿಮಾನ ಸಂಪರ್ಕಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ವಿಮಾನ ಯಾನ ಆರಂಭಿಸುವುದರೊಂದಿಗೆ ಆಗ್ನೇಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸಿದಂತಾಗಿದೆ. ಈವರೆಗೆ ಮಧ್ಯಪ್ರಾಚ್ಯ ಮತ್ತು ಸೌದಿಗೆ ವಿಮಾನ ಸೇವೆ ಇತ್ತು.
ಮಂಗಳೂರು-ಹೊಸದಿಲ್ಲಿ
2025ರ ಫೆ.1ರಿಂದ ಮಂಗಳೂರಿನಿಂದ ಹೊಸದಿಲ್ಲಿಗೆ ಪ್ರತಿದಿನ ನಾನ್ ಸ್ಟಾಪ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಆರಂಭವಾಗಲಿದೆ. ಪ್ರತಿ ಶನಿವಾರ ಮಂಗಳೂರು- ಪುಣೆ ನಡುವೆ ಎರಡು ನೇರ ವಿಮಾನಯಾನ ಸೌಲಭ್ಯ ಕೂಡ ಆರಂಭಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ.
ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ವಿಮಾನ ದೆಹಲಿಗೆ 9.35ಕ್ಕೆ ತಲುಪುತ್ತದೆ. ಅದೇ ರೀತಿ ದೆಹಲಿಯಿಂದ 6.40ಕ್ಕೆ ಹೊರಡುವ ವಿಮಾನ ಮಂಗಳೂರಿಗೆ 9.35ಕ್ಕೆ ತಲುಪಲಿದೆ.
ಮಂಗಳೂರಿನಿಂದ ಪುಣೆಗೆ ಶನಿವಾರ ಬೆಳಗ್ಗೆ 8 ಗಂಟೆಗೆ ಹೊರಡುವ ವಿಮಾನ 9.25ಕ್ಕೆ ಪುಣೆ ತಲುಪಲಿದೆ. ಪುಣೆಯಿಂದ 9.55ಕ್ಕೆ ಹೊರಟು 11.40ಕ್ಕೆ ಮಂಗಳೂರು ತಲುಪಲಿದೆ. ಅದೇ ರೀತಿ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಟು 8 ಗಂಟೆಗೆ ಪುಣೆ ತಲುಪಲಿದೆ. ಪುಣೆಯಿಂದ ರಾತ್ರಿ 8.35ಕ್ಕೆ ಹೊರಟು 10.05ಕ್ಕೆ ಮಂಗಳೂರು ತಲುಪಲಿದೆ.
ಇದನ್ನೂ ಓದಿ: ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗ ನೈರುತ್ಯ ರೈಲ್ವೆಯಡಿ ಕಾರ್ಯನಿರ್ವಹಿಸಲು ಪ್ರಸ್ತಾಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ
Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ
Ullala ಸೋಮೇಶ್ವರ ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹ*ತ್ಯೆ
ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗ ನೈರುತ್ಯ ರೈಲ್ವೆಯಡಿ ಕಾರ್ಯನಿರ್ವಹಿಸಲು ಪ್ರಸ್ತಾಪ
Bolar: ಬೋಳಾರ ಸರಕಾರಿ ಶಾಲೆ ಕೈತೋಟದಲ್ಲಿ 8 ಕೆಜಿ ಭತ್ತದ ಬೆಳೆ!
MUST WATCH
ಹೊಸ ಸೇರ್ಪಡೆ
Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ
Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ
Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ
Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ಫ್ಲೈಓವರ್ ಆಗಲಿ: ರಮೇಶ್ ಕಾಂಚನ್
Ullala ಸೋಮೇಶ್ವರ ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.