Hunasur: ಗೊಮ್ಮಟಗಿರಿಯಲ್ಲಿ ಮೂರು ದಿನಗಳ ಕಾಲ ಬಾಹುಬಲಿ ಮಸ್ತಕಾಭಿಷೇಕ
Team Udayavani, Dec 11, 2024, 10:07 PM IST
ಹುಣಸೂರು: ಜೈನರ ಆರಾಧ್ಯ ದೈವ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಯ ಬೆಟ್ಟದೂರು (ಗೊಮ್ಮಟಗಿರಿ) ಗ್ರಾಮದಲ್ಲಿನ ಗೊಮಟೇಶ್ವರ ಮೂರ್ತಿಗೆ 16ಅಡಿ ಎತ್ತರದ ಏಕಶಿಲೆಯ ಗೊಮ್ಮಟಮೂರ್ತಿಗೆ ಡಿ.12ರಿಂದ 15ರವರೆಗೆ 75ನೇ ವರ್ಷದ ಅಮೃತ ಮಹೋತ್ಸವ ಮಹಾ ಮಸ್ತಕಾಭಿಷೇಕ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ:
ಆರ್ಯಿಕಾ 105ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕನಕಗಿರಿ ಜೈನಮಠದ ಪೀಠಾಧಿಪರಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಾಲ್ಕು ದಿನಗಳ ಕಾಲ ಪೂಜಾ ಕಾರ್ಯ ಹಾಗೂ ಮಹಾ ಮಸ್ತಕಾಭಿಷೇಕ ನಡೆಯಲಿದೆ.
ಡಿ.12ರಂದು ಬೆಳಿಗ್ಗೆ 6ಕ್ಕೆ ಮಂಗಳಾಷ್ಟಕರ, ಮಹಾಮಂತ್ರ ಪಠಣೆ, ನಾಂದಿ ಮಂಗಲ, 7.30ಕ್ಕೆ ಜಲಮಂದಿರದಲ್ಲಿ ನಿತ್ಯಪೂಜೆ, ಪಂಚಾಮೃತಾಭಿಷೇಕ, ಬೆಳಿಗ್ಗೆ 11ರಿಂದ 24ತೀರ್ಥಂಕರರ ಕೂಟಗಳಲ್ಲಿ ಸಾಮೂಹಿಕ ಪೂಜೆ, ಮಧ್ಯಾಹ್ನ 12ರಿಂದ ಬೆಟ್ಟದಲ್ಲಿ ನವಗ್ರಹ ಆರಾಧನೆ, ಭಗವಾನ್ ಬಾಹು ಬಲಿ ಸ್ವಾಮಿಗೆ ಎಣ್ಣೆ ಮಜ್ಜನ, ಶ್ರೀ ಬ್ರಹ್ಮದೇವರಿಗೆ ಷೋಡಶೋಪಚಾರ ಪೂಜೆ ನೆರವೇರಲಿದೆ.
ಡಿ.13ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದವರಿಂದ ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಕಾರ್ಯಕ್ರಮವನ್ನು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಿ.ವೀರೇಂದ್ರ ಹೆಗ್ಗಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.14ರಂದು ಬೆಳಿಗ್ಗೆ 10.30ಕ್ಕೆ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ಸಚಿವರಾದ ಕೃಷ್ಣಭೈರೇಗೌಡ, ಈಶ್ವರ ಖಂಡ್ರೆ ಮತ್ತಿತರರು ಭಾಗವಹಿಸಲಿದ್ದಾರೆ.
ಡಿ.15ರಂದು ಬೆಳಿಗ್ಗೆ 11ಕ್ಕೆ ಸಮಸ್ತ ಭಟ್ಟಾರಕರ ಉಪಸ್ಥಿತಿಯಲ್ಲಿ ಮಹಾ ಮಸ್ತಕಾಭಿಷೇಕ ಹಾಗೂ ಬೃಹತ್ ಸಮವಸರಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಡಿ.13ರಿಂದ 15ರವರೆಗೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇರಲಿದೆ ಎಂದು ಶ್ರೀ ಗೊಮ್ಮಟಗಿರಿ ಸೇವಾ ಸಮಿತಿ ಅಧ್ಯಕ್ಷ ಎಸ್.ಡಿ.ಮನ್ಮಥರಾಜ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣಗೆ ಮರಣೋತ್ತರ “ಕರ್ನಾಟಕ ರತ್ನ’ ನೀಡಿ: ಅಶೋಕ್
ಬೆಳಗಾವಿ ಘಟನೆ: ಹೋರಾಟಗಾರರ ವಿರುದ್ದದ ಎಲ್ಲ ಪ್ರಕರಣ ರದ್ಧುಪಡಿಸಬೇಕು: ವಚನಾನಂದ ಸ್ವಾಮೀಜಿ
Madikeri: ವಧುವಿನ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
Sagara: ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು
Shivamogga: ಕಾರು- ಬೈಕ್ ನಡುವೆ ಅಪಘಾತ… ಓರ್ವ ಸ್ಥಳದಲ್ಲೇ ಸಾ*ವು, ಇನ್ನೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.