Hyperloop: ಭವಿಷ್ಯದ ಸಾರಿಗೆ ಹೈ ಪರ್‌ ಲೂಪ್‌ !


Team Udayavani, Dec 12, 2024, 7:30 AM IST

Hyperloop: ಭವಿಷ್ಯದ ಸಾರಿಗೆ ಹೈ ಪರ್‌ ಲೂಪ್‌ !

ದೇಶದ ಮೊದಲ ಹೈಪರ್‌ಲೂಪ್‌ ಪರೀಕ್ಷಾ ಮಾರ್ಗ ಸಿದ್ಧಪಡಿಸಿದ ಮದ್ರಾಸ್‌ ಐಐಟಿ, ಭಾರತೀಯ ರೈಲ್ವೇ ವಿಮಾನಕ್ಕಿಂತಲೂ ಹೆಚ್ಚಿನ ವೇಗದ ಸಾರಿಗೆ ಸೌಲಭ್ಯ ಒದಗಿಸುವ ಈ ಸೇವೆ ಅಷ್ಟೇ ವೆಚ್ಚದಾಯಕವೂ ಹೌದು!

ಭವಿಷ್ಯದ ಸಾರಿಗೆ ಎನಿಸಿರುವ “ಹೈಪರ್‌ಲೂಪ್‌’ ಮತ್ತೆ ಸುದ್ದಿಯಲ್ಲಿದೆ. ಕೆಲವು ಕಂಪೆನಿಗಳ ಜತೆಗೂಡಿ ಐಐಟಿ ಮದ್ರಾಸ್‌ 410 ಮೀ. ಉದ್ದದ ಹೈಪರ್‌ಲೂಪ್‌ ಮಾರ್ಗವನ್ನು ಸಿದ್ಧಪಡಿಸಿದ್ದರಿಂದ ಈ ಕುರಿತು ಕುತೂಹಲ ಇನ್ನೂ ಹೆಚ್ಚಾಗಿದೆ. ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಪರಿಕಲ್ಪನೆಯ ಈ ಸಾರಿಗೆಯು ಎಷ್ಟು ಪ್ರಯೋಜನ ಹೊಂದಿದೆಯೋ ಅಷ್ಟೇ ತೊಂದರೆ ಹಾಗೂ ಸವಾಲುಗಳನ್ನೂ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆಯ ಮತ್ತು ಅದರ ಸಾಧಕ-ಬಾಧಕಗಳ ಮಾಹಿತಿ ಇಲ್ಲಿದೆ.

ಹೈ ಪರ್‌ ಲೂಪ್‌ ಎಂಬುದು ಅತ್ಯಂತ ವೇಗದ ಸಾರಿಗೆ ಸಂಪರ್ಕವಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೃಹತ್‌ ಕೊಳವೆಗಳನ್ನು ನಿರ್ಮಿಸಿ, ಅಯಸ್ಕಾಂತೀಯ ಬಲದೊಂದಿಗೆ ಸಣ್ಣ ಸಣ್ಣ ಪಾಡ್‌ಗಳಲ್ಲಿ ಜನರು ಅಥವಾ ಸರಕನ್ನು ಅತ್ಯಂತ ವೇಗದಲ್ಲಿ ಚಲಿಸುವಂತೆ ಮಾಡುವುದೇ ಹೈಪರ್‌ಲೂಪ್‌ ರೈಲು ಸಾರಿಗೆಯಾಗಿದೆ. ಸಾಮಾನ್ಯವಾಗಿ ಗಾಳಿಯ ಒತ್ತಡ ಹಾಗೂ ಹೆಚ್ಚಿನ ಘರ್ಷಣೆಯಿಂದಾಗಿ ವೇಗವು ಕಡಿಮೆಯಾಗುತ್ತದೆ. ಆದರೆ ಹೈಪರ್‌ಲೂಪ್‌ ಕೊಳವೆಗಳು ನಿರ್ವಾತವಾಗಿರುವುದರಿಂದ ಪಾಡ್‌ಗಳ ಚಲನೆಗೆ ಗಾಳಿಯ ಪ್ರತಿರೋಧ ಇರುವುದಿಲ್ಲ. ಪರಿಣಾಮ ಈ ಪಾಡ್‌ಗಳನ್ನು ಗಂಟೆಗೆ ಗರಿಷ್ಠ 1,100 ಕಿ.ಮೀ. ವೇಗದಲ್ಲಿ ಚಲಿಸುವಂತೆ ಮಾಡಬಹುದು. ಅಂದರೆ ಇದು, ಬುಲೆಟ್‌ ರೈಲು ಅಥವಾ ವಿಮಾನ ವೇಗಕ್ಕಿಂತಲೂ ಹೆಚ್ಚಾಗಿರುತ್ತದೆ. ವಿಮಾನ ಗಂಟೆಗೆ 880ರಿಂದ 926 ಕಿ.ಮೀ. ವೇಗದಲ್ಲಿ ಚಲಿಸಿದರೆ, ಬುಲೆಟ್‌ ರೈಲು ಗಂಟೆಗೆ ಗರಿಷ್ಠ 500 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.

ಉದ್ಯಮಿ ಎಲಾನ್‌ ಮಸ್ಕ್ ಪರಿಕಲ್ಪನೆ
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ 2013ರಲ್ಲಿ ಮೊದಲ ಬಾರಿಗೆ ಈ ಹೈಪರ್‌ಲೂಪ್‌ ರೈಲು ಸಾರಿಗೆಯ ಪರಿಕಲ್ಪನೆಯನ್ನು ಹಂಚಿಕೊಂಡರು. ಹೈಪರ್‌ಲೂಪ್‌ ಸಾರಿಗೆಯನ್ನು ವಿಮಾನ, ಕಾರು, ರೈಲು ಮತ್ತು ನೌಕೆ ಬಳಿಕದ 5ನೇ ಸಾರಿಗೆ ಎಂದು ಅವರು ಕರೆದಿದ್ದಾರೆ. ಎಲಾನ್‌ ಮಸ್ಕ್ ಅವರ ಒಡೆತನದ ಸ್ಪೇಸ್‌ಎಕ್ಸ್‌ ಕಂಪೆನಿಯ ಬಳಿಕ, ವರ್ಜಿನ್‌ ಗ್ರೂಪ್‌ ಈ ಹೊಸ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಾಧರಿತ ಸಾರಿಗೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ, ಯಶಸ್ವಿ ಪರೀಕ್ಷೆಯನ್ನೂ ಕೈಗೊಂಡಿದೆ.

ನಿರ್ವಾತದಲ್ಲಿ ಸಾಗುವ ಸಾರಿಗೆ ಹೈಪರ್‌ಲೂಪ್‌
ಹೈಪರ್‌ಲೂಪ್‌ ಸಾರಿಗೆ ಕೊಳವೆಗಳು, ಪಾಡ್‌ಗಳು ಮತ್ತು ಟರ್ಮಿನಲ್‌ಗ‌ಳು… ಹೀಗೆ ಮೂರು ಪ್ರಮುಖ ಘಟಕಗಳನ್ನು ಹೊಂದಿವೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ಯಾಪುÕಲ್‌ ಅಥವಾ ಪಾಡ್‌ಗಳನ್ನು ಭಾಗಶಃ ನಿರ್ವಾತವಾಗಿರುವ ಕೊಳವೆಗಳಲ್ಲಿ ಅಳವಡಿಸಲಾಗಿರುತ್ತದೆ. ಈ ಪಾಡ್‌ಗಳು ಮುಂದೆ ಏರ್‌ ಕಂಪ್ರಸ್ಸರ್‌ ಮತ್ತು ಹಿಂದೆ ಬ್ಯಾಟರಿ ಸಾಧನ ಘಟಕಗಳಿರುತ್ತವೆ. ಕೊಳವೆಗುಂಟ ಅಳವಡಿಸಿರುವ ಇಂಡಕ್ಷನ್‌ ಮೋಟಾರ್‌ಗಳು ಪಾಡ್‌ಗಳ ವೇಗವನ್ನು ನಿಯಂತ್ರಿಸುತ್ತವೆ. ಎಲೆಕ್ಟ್ರಾನಿಕ್‌ ಬೆಂಬಲಿತ ವೇಗವರ್ಧನೆ ವ್ಯವಸ್ಥೆ ಮತ್ತು ಬ್ರೇಕಿಂಗ್‌ ಮೂಲಕ ವೇಗವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಭಾರತದಲ್ಲಿ ಇದಕ್ಕೆ ಎಷ್ಟು
ವೆಚ್ಚ ತಗಲಬಹುದು?
ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೈಪರ್‌ಲೂಪ್‌ ರೈಲು ವ್ಯವಸ್ಥೆಯು ಅತ್ಯಂತ ದುಬಾರಿಯಾಗಿರಲಿದೆ. ಕೆಲವು ಅಂದಾಜುಗಳ ಪ್ರಕಾರ ಭಾರತ ದಲ್ಲಿ ಪ್ರತೀ ಕಿ.ಮೀ. ಹೈಪರ್‌ಲೂಪ್‌ ಮಾರ್ಗಕ್ಕೆ 150 ಕೋಟಿ ರೂ. ವೆಚ್ಚವಾ ಗಲಿದೆ. ಅಂದರೆ ಮುಂಬಯಿ ಮತ್ತು ಪುಣೆ ನಡುವೆ ಹೈಪರ್‌ಲೂಪ್‌ ನಿರ್ಮಾಣಕ್ಕೆ ಅಂದಾಜು 22,500 ಕೋಟಿ ರೂ. ವೆಚ್ಚವಾಗ ಬಹುದು. ಅದೇ ರೀತಿ ಬೆಂಗಳೂರು-ಚೆನ್ನೈ ನಡುವಿನ ಹೈಪರ್‌ಲೂಪ್‌ಗೆ ಅಂದಾಜು 52,000 ಕೋಟಿ ರೂ. ಬೇಕಾಗಬಹುದು! ಇದು ಕೇವಲ ಅಂದಾಜು ಲೆಕ್ಕವಷ್ಟೆ.

ಭಾರತದಲ್ಲಿ ಎಲ್ಲೆಲ್ಲಿವೆ
ಹೈಪರ್‌ಲೂಪ್‌?
ಮುಂಬಯಿಯಿಂದ ಪುಣೆ ನಡುವೆ ಹೈಪರ್‌ಲೂಪ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಪರ್‌ಲೂಪ್‌ ಒನ್‌ 2018ರಲ್ಲಿ ಮಹಾರಾಷ್ಟ್ರ ಸರಕಾರ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಇದು ಸಾಧ್ಯವಾದರೆ 3.30 ಗಂಟೆ ಪ್ರಯಾಣವು 20 ನಿಮಿಷಕ್ಕೆ ಇಳಿಕೆಯಾಗಲಿದೆ! ಇದಲ್ಲದೆ, ಮುಂಬಯಿ ಮತ್ತು ದಿಲ್ಲಿ ನಡುವೆಯೂ ಹೈಪರ್‌ಲೂಪ್‌ ರೈಲು ಮಾರ್ಗ ನಿರ್ಮಾಣ ಬಗ್ಗೆಯೂ ಮಾತುಕತೆಗಳು ನಡೆದಿವೆ.

ಬೆಂಗಳೂರು-ಚೆನ್ನೈ
ಹೈಪರ್‌ಲೂಪ್‌ ರೈಲು
ಬೆಂಗಳೂರು ಮತ್ತು ಚೆನ್ನೈ ನಡುವೆಯೂ ಹೈಪರ್‌ಲೂಪ್‌ ರೈಲು ಸಂಚಾರದ ಬಗ್ಗೆ ಸುದ್ದಿಗಳಿವೆ. ಒಂದೊಮ್ಮೆ ಇದು ಸಾಧ್ಯವಾದರೆ 350 ಕಿ.ಮೀ. ಪ್ರಯಾಣವನ್ನು ಕೇವಲ 30 ನಿಮಿಷದಲ್ಲಿ ಪೂರೈಸಬ­ಹುದು. ಮುಂದಿನ 10 ವರ್ಷಗಳಲ್ಲಿ ಹೈಪರ್‌ಲೂಪ್‌ ರೈಲು ಸಂಚಾರ ಸಾಧ್ಯವಾಗಬಹುದು ಎನ್ನಲಾಗುತ್ತಿದೆ.

ದರ ವಿಮಾನದಷ್ಟೇ ದುಬಾರಿ
ಈಗಾಗಲೇ ಹೇಳಿದಂತೆ ಹೈಪರ್‌ಲೂಪ್‌ ರೈಲು ವಿಮಾನ ಹಾಗೂ ಬುಲೆಟ್‌ ಟ್ರೈನ್‌ಗಿಂತಲೂ ವೇಗದಲ್ಲಿ ಚಲಿಸಲಿದೆ. ಹಾಗಾಗಿ ಹೈಪರ್‌ಲೂಪ್‌ ರೈಲಿನ ಸಂಚಾರ ಶುಲ್ಕವೂ ಅಷ್ಟೇ ದುಬಾರಿಯೂ ಆಗಲಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಮುಂಬಯಿ ಮತ್ತು ಪುಣೆ ನಡುವಿನ ಹೈಪರ್‌ಲೂಪ್‌ ರೈಲು ದರ ವಿಮಾನ ಪ್ರಯಾಣ ದರದಷ್ಟೇ ಇರಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ವ್ಯಕ್ತಿಯೊಬ್ಬರಿಗೆ 10 ಸಾವಿರ ರೂ. ಆಗಬಹುದು. ವಾಸ್ತವದಲ್ಲಿ ಹೈಪರ್‌ಲೂಪ್‌ ರೈಲು ಸಂಚಾರ ಆರಂಭಿಸುವ ಹೊತ್ತಿಗೆ ಈ ಟಿಕೆಟ್‌ ಶುಲ್ಕ ಇನ್ನೂ ಹೆಚ್ಚಾಗಬಹುದು!

ಅನುಕೂಲಗಳೇನು?
1. ಹೈಪರ್‌ಲೂಪ್‌ ಸಾರಿಗೆಯು 2 ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಯಾಕೆಂದರೆ, ಹೈಪರ್‌ಲೂಪ್‌ ವಿಮಾನದ ವೇಗಕ್ಕಿಂತಲೂ ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಚೆನ್ನೈ-ಬೆಂಗಳೂರು ನಡುವೆ ಹೈಪರ್‌ಲೂಪ್‌ ರೈಲು ಸಾಧ್ಯವಾದರೆ ಗರಿಷ್ಠ 30 ನಿಮಿಷದಲ್ಲಿ ತಲುಪಬಹುದು.

2. ಸಾಂಪ್ರದಾಯಿಕ ಸಾರಿಗೆಗಳಿಗೆ ಹೋಲಿಸಿದರೆ ಹೈಪರ್‌ಲೂಪ್‌ ಸಾರಿಗೆಯಲ್ಲಿ ಇಂಧನ ದಕ್ಷತೆಯೇ ಹೆಚ್ಚು. ಯಾಕೆಂದರೆ, ನಿರ್ವಾತ ಪ್ರದೇಶದಲ್ಲಿ ಚಲಿಸುವುದರಿಂದ ಪರಿಣಾಮಕಾರಿ ಇಂಧನ ಬಳಕೆ ಜತೆಗೆ, ಮರುಬಳಸಬಹು­ದಾದ ಇಂಧನಗಳನ್ನು ಬಳಸಿಕೊಳ್ಳಲಾಗುತ್ತದೆ.

3. ಸಾಂಪ್ರದಾಯಿಕ ಸಾರಿಗೆಗಳಾದ ಹೆದ್ದಾರಿ ಅಥವಾ ರೈಲು ಮಾರ್ಗಗಳಿಗೆ ಹೋಲಿಸಿದರೆ ಹೈಪರ್‌ಲೂಪ್‌ ನಿರ್ವಹಣೆಗೆ ಕಡಿಮೆ ಮೂಲಸೌಕರ್ಯಗಳು ಸಾಕು. ಇದರಿಂದ ಪರಿಸರದ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದಾಗಿದೆ.

ಸವಾಲುಗಳೂ ಕಡಿಮೆ ಇಲ್ಲ
1. ವಿಶೇಷ ಎಂದರೆ ಹೈಪರ್‌ಲೂಪ್‌ ತಂತ್ರಜ್ಞಾನ ಕಾರ್ಯಸಾಧ್ಯತೆಯೇ ಭಾರೀ ಸವಾಲು. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿರುವ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಬಹಳಷ್ಟು ಎಂಜಿನಿಯರಿಂಗ್‌ ಸವಾಲುಗಳು ಈ ಯೋಜನೆಯನ್ನು ಕಾಡುತ್ತಿವೆ. ವಿಶೇಷವಾಗಿ ಸುರಕ್ಷೆ ಮತ್ತು ವಿಶ್ವಾಸಾರ್ಹತೆಯ ವ್ಯವಸ್ಥೆ ನಿರ್ಮಾಣ ಇನ್ನೂ ಸಾಧ್ಯವಾಗುತ್ತಿಲ್ಲ.

2. ಸಾಂಪ್ರದಾಯಿಕ ರೈಲು ಅಥವಾ ಹೆದ್ದಾರಿಗಳ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕೆ ಹೋಲಿಸಿದರೆ ಹೈಪರ್‌ಲೂಪ್‌ ಅತ್ಯಂತ ದುಬಾರಿಯಾಗಿದೆ. ಹಾಗಾಗಿ ಈ ವ್ಯವಸ್ಥೆಯನ್ನು ಸ್ಥಾಪಿಸಬೇಕಿದ್ದರೆ ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ.

3.ಹೈಪರ್‌ಲೂಪ್‌ ಸಾರಿಗೆಗೆ ಸಂಬಂಧಿಸಿದಂತೆ ಸರಕಾರ ಮತ್ತು ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಸದ್ಯದಲ್ಲಿ ಸಾಕಷ್ಟು ಸವಾಲಿನ ಕೆಲಸವಾಗಿದೆ. ಭೂಮಿ ವಶ ಪಡಿಸಿಕೊಳ್ಳು­ವುದ­ರಿಂದ ಹಿಡಿದು ಸಾಕಷ್ಟು ಕ್ರಮಗಳನ್ನು ಕೈಗೊಳ್ಳ­ಬೇ­ಕಿದೆ. ಈ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಕ್ರಮಿಸಬೇಕಿದೆ.

ಎಲ್ಲೆಲ್ಲಿ ಉದ್ದೇಶಿತ ಹೈಪರ್‌ಲೂಪ್‌?
ಅಮೆರಿಕ: ಶಿಕಾಗೋ-ಕೊಲಂಬಸ್‌-
ಪಿಟ್ಸ್‌ಬರ್ಗ್‌. ಡಲ್ಲಾಸ್‌-ಹ್ಯೂಸ್ಟನ್‌. ಮಿಯಾಮಿ-ಒರ್ಲಾಂಡೋ
ಕೆನಡಾ: ಟೊರೊಂಟೋ- ಒಟ್ಟಾವ-ಮಾಂಟ್ರಿಯಲ್‌
ಮೆಕ್ಸಿಕೋ: ಮೆಕ್ಸಿಕೋ ಸಿಟಿ-ಗ್ವಾಡ್‌ಲಜರ್‌
ಇಂಗ್ಲೆಂಡ್‌: ಎಡಿನ್‌ಬರ್ಗ್‌-ಲಂಡನ್‌. ಗ್ಲಾಸೊ-ಲಿವರ್‌ಪೂಲ್‌.
ಚೀನ: ಬೀಜಿಂಗ್‌-ವುಹಾನ್‌
ಯುಎಇ: ದುಬಾೖ- ಅಬುಧಾಬಿ

-ಮಲ್ಲಿಕಾರ್ಜುನ ತಿಪ್ಪಾರ

ಟಾಪ್ ನ್ಯೂಸ್

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Champions Trophy: Australia squad announced with surprise selection

Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

IPL 2025: Shreyas Iyer to captain Punjab Kings

IPL 2025: ಪಂಜಾಬ್‌ ಕಿಂಗ್ಸ್‌ ಗೆ ಶ್ರೇಯಸ್‌ ಅಯ್ಯರ್‌ ನಾಯಕ

ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ

ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha

Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ

National Youth Day: Swami Vivekananda, the guide of the young generation

National Youth Day: ಯುವ ಪೀಳಿಗೆಯ ಮಾರ್ಗದರ್ಶಿ ಸ್ವಾಮಿ ವಿವೇಕಾನಂದ

NK-MOdi

Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

3

Editorial: ಕುಡಿಯುವ ನೀರಿನ ಪರಿಶುದ್ಧತೆಯ ಪ್ರಶ್ನೆ ಬಾರದಿರಲಿ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

2

Bantwal: ಜಕ್ರಿಬೆಟ್ಟು ಬ್ಯಾರೇಜ್‌ಗೆ ಶೀಘ್ರ ಗೇಟ್‌!

Champions Trophy: Australia squad announced with surprise selection

Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

1

Editorial: ಪಂಚಾಯತ್‌ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.