ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ
Team Udayavani, Dec 11, 2024, 11:50 PM IST
ಪರ್ತ್: ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಅಮೋಘ ಶತಕದ ಬಳಿಕ ಒಮ್ಮೆಲೇ ಮಂಕಾದ ಭಾರತ, ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ಕೈಯಲ್ಲಿ ವೈಟ್‌ವಾಶ್ ಅನುಭವಿಸಿದೆ. ಸರಣಿಯ ಮೂರೂ ಪಂದ್ಯಗಳನ್ನು ಗೆದ್ದ ಕಾಂಗರೂ ಪಡೆ ತನ್ನ ಪ್ರಭುತ್ವವನ್ನು ಮತ್ತೂಮ್ಮೆ ಸಾಬೀತುಪಡಿಸಿದೆ.
ಬುಧವಾರ ಪರ್ತ್‌ನಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯ 83 ರನ್ನುಗಳ ಅಂತರದಿಂದ ಜಯಿಸಿತು. ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಆಕರ್ಷಕ ಶತಕ (110), ಆ್ಯಶ್ಲಿ ಗಾರ್ಡನರ್ (50) ಮತ್ತು ನಾಯಕಿ ಟಹ್ಲಿಯಾ ಮೆಕ್‌ಗ್ರಾತ್ (ಅಜೇಯ 56) ಅವರ ಅರ್ಧ ಶತಕದ ಸಾಹಸದಿಂದ ಆಸೀಸ್ 6 ವಿಕೆಟಿಗೆ 298 ರನ್ ಪೇರಿಸಿತು. ಭಾರತ 45.1 ಓವರ್‌ಗಳಲ್ಲಿ 215ಕ್ಕೆ ಸರ್ವಪತನ ಕಂಡಿತು.
ಮಂಧನಾ 9ನೇ ಶತಕ
ಭಾರತದ ಸರದಿಯಲ್ಲಿ ಸ್ಮತಿ ಮಂಧನಾ ಅವರದು ಏಕಾಂಗಿ ಹೋರಾಟ ವಾಗಿತ್ತು. 36ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಮಂಧನಾ 105 ರನ್ನುಗಳ ಕೊಡುಗೆ ಸಲ್ಲಿಸಿದರು. 109 ಎಸೆತಗಳ ಈ ಬ್ಯಾಟಿಂಗ್ ವೇಳೆ 14 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಇದು ಅವರ 9ನೇ ಏಕದಿನ ಶತಕ.
ಮಂಧನಾ ಮತ್ತು ಹಲೀìನ್ ದೇವಲ್ (39) 2ನೇ ವಿಕೆಟಿಗೆ 118 ರನ್ ಪೇರಿಸಿ ಹೋರಾಟಕ್ಕೆ ಚಾಲನೆ ನೀಡಿದ್ದರು. ಅನಂತರ ಮಂಧನಾಗೆ ಇನ್ನೊಂದು ಕಡೆಯಿಂದ ಬೆಂಬಲ ಲಭಿಸ ಲಿಲ್ಲ. ಒಂದು ಹಂತದಲ್ಲಿ ಭಾರತ 2ಕ್ಕೆ 165 ರನ್ ಬಾರಿಸಿ ಗೆಲುವಿ ನತ್ತ ಮುಖ ಮಾಡಿತ್ತು. ಆದರೆ ಈ ಮೊತ್ತ ದಲ್ಲಿ ನಾಯಕಿ ಕೌರ್ (12) ವಿಕೆಟ್ ಬಿದ್ದೊಡನೆ ಪಂದ್ಯದ ಚಿತ್ರಣ ಒಮ್ಮೆಲೇ ಬದಲಾಯಿತು. ಸ್ಕೋರ್ 189ಕ್ಕೆ ಏರಿದಾಗ ಮಂಧನಾ ವಿಕೆಟ್ ಉರುಳಿತು. ಆ್ಯಶ್ಲಿ ಗಾರ್ಡನರ್ ಎಸೆತದಲ್ಲಿ ಬೌಲ್ಡ್ ಆದರು. ಅದೇ ಓವರ್ ನಲ್ಲಿ ದೀಪ್ತಿ ಶರ್ಮ (0) ಕೂಡ ಔಟಾ ದರು. ಮುಂದಿನ ಓವರ್‌ನಲ್ಲಿ ಜೆಮಿಮಾ ರೋಡ್ರಿಗಸ್ (16) ವಿಕೆಟ್ ಬಿತ್ತು. ಪಂದ್ಯ ಭಾರತದ ಕೈಯಿಂದ ಜಾರಿತು.
ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆ್ಯಶ್ನಿ ಗಾರ್ಡನರ್ 5 ವಿಕೆಟ್ ಬೇಟೆ ಯಾಡಿ ಭಾರತದ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಾರ್ಡನರ್ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು.
ಅನ್ನಾಬೆಲ್ ಆಸರೆ
ಆಸ್ಟ್ರೇಲಿಯ 78ಕ್ಕೆ 4 ವಿಕೆಟ್ ಉರು ಳಿಸಿ ಕೊಂಡಾಗ ಅನ್ನಾಬೆಲ್ ಸದರ್ ಲ್ಯಾಂಡ್ ನೆರವಿಗೆ ನಿಂತರು. ಅವ ರಿಗೆ ಗಾರ್ಡನರ್ ಮತ್ತು ಮೆಕ್‌ಗ್ರಾತ್ ಅಮೋಘ ಬೆಂಬಲವಿತ್ತರು. ಆಸೀಸ್ ಮೊತ್ತ ಮುನ್ನೂರರ ಗಡಿ ಸಮೀಪಿಸಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-6 ವಿಕೆಟಿಗೆ 298 (ಅನ್ನಾಬೆಲ್ 110, ಗಾರ್ಡನರ್ 50, ಮೆಕ್‌ಗ್ರಾತ್ ಔಟಾ ಗದೆ 56, ಅರುಂಧತಿ 26ಕ್ಕೆ 4). ಭಾರತ-45.1 ಓವರ್ ಗಳಲ್ಲಿ 215 (ಮಂಧನಾ 105, ಹಲೀìನ್ 39, ಗಾರ್ಡನರ್ 30ಕ್ಕೆ 5, ಶಟ್ 26ಕ್ಕೆ 2, ಅಲಾನಾ 27ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಅನ್ನಾಬೆಲ್ ಸದರ್‌ಲ್ಯಾಂಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.