Karkala: ಜಿಪಿಎಸ್ ಇಲ್ಲದ ವಾಹನಗಳಿಗೆ ಜಲ್ಲಿ ಇಲ್ಲ ಹೇಳಿಕೆ: ಕೇಸು ದಾಖಲು
Team Udayavani, Dec 12, 2024, 12:24 AM IST
ಕಾರ್ಕಳ: ಸರಕಾರಕ್ಕೆ ರಾಜಧನ ಪಾವತಿ ಮಾಡುವುದನ್ನು ತಪ್ಪಿಸಲು ಜಿಪಿಎಸ್ ಇಲ್ಲದ ವಾಹನಗಳಿಗೆ ಮಾತ್ರ ಜಲ್ಲಿ ನೀಡುವುದಾಗಿ ಫೋನ್‌ನಲ್ಲಿ ಹೇಳಿದ್ದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆ ಪಿಎಸ್‌ಐ ಸಂದೀಪ್ ಕುಮಾರ್ ಅವರ ಮೊಬೈಲ್ ವ್ಯಾಟ್ಸಪ್‌ಗೆ ಆಡಿಯೋ ರೆಕಾರ್ಡ್ ಬಂದಿದ್ದು, ಇದರಲ್ಲಿ ಸಿದ್ಧಿ ಸುಬ್ರಹ್ಮಣ್ಯ ಕ್ರಷರ್‌ನಿಂದ ಮಾತನಾಡುವುದಾಗಿ ಹೇಳಿಕೊಂಡ ವ್ಯಕ್ತಿ ಕ್ರಷರ್‌ನಲ್ಲಿ ಲೋಡಿಂಗ್ ಬಂದ್ ಮಾಡಿದ್ದೇವೆ.
ನಿಮಗೆ ಗೊತ್ತಿರುವವರಿಗೆ ಹೇಳಿ, ಜಿಪಿಎಸ್ ಇರುವ ಗಾಡಿಗೆ ಲೋಡ್ ಕೊಡುವುದಿಲ್ಲ, ಜಿಪಿಎಸ್ ಇಲ್ಲದ ಗಾಡಿಗೆ ಮಾತ್ರ ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಜಿಪಿಎಸ್ ಇರುವ ವಾಹನಕ್ಕೆ ಜಲ್ಲಿ ಲೋಡ್ ಮಾಡಿದರೆ ಸರಕಾರಕ್ಕೆ ರಾಜಧನ ಪಾವತಿಸಬೇಕು. ಸರಕಾರದ ಕಾನೂನು ಸಮ್ಮತ ಕರಾರನ್ನು ಉಲ್ಲಂಘಿಸಿ, ಗಣಿ ಉತ್ಪನ್ನವನ್ನು ಅಪ್ರಾಮಾಣಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಸಂಬಂಧಪಟ್ಟವರ ವಿರುದ್ಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
The Rise Of Ashoka: ಅಶೋಕನ ರಕ್ತಚರಿತೆ
Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ
Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.