Sullia: ಪೊಲೀಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ
Team Udayavani, Dec 12, 2024, 12:41 AM IST
ಸುಳ್ಯ: ಪೊಲೀಸ್ ಅಧಿಕಾರಿ ಹೆಸರಲ್ಲಿ ಸುಳ್ಯದ ವ್ಯಕ್ತಿಯೋರ್ವರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.
ನಿಮ್ಮ ಮಗ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಹಣ ಕೊಟ್ಟರೆ ಪ್ರಕರಣವನ್ನು ಇತ್ಯರ್ಥಪಡಿಸಲು ಹಣ ನೀಡಬೇಕು ಎಂಬ ಬೇಡಿಕೆ ಇಟ್ಟು ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿದ್ದಾನೆ. ಸುಳ್ಯದ ಹಳೆಗೇಟು ಆಟೋ ಚಾಲಕ ಜಲೀಲ್ ಅವರಿಗೆ ಕರೆ ಬಂದಿದೆ.
ಆದರೆ ಜಲೀಲ್ ಅವರ ಮಗ ಸುಳ್ಯದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದು ರಜೆ ಇರುವ ಕಾರಣ ಮನೆಯಲ್ಲಿ ಇದ್ದರು. ಇದರಿಂದ ಇದು ವಂಚಕರು ನಡೆಸಿರುವ ಕೃತ್ಯ ಎಂಬುದು ತಿಳಿದಿದೆ.
ಕುಸಿದು ಬಿದ್ದು ಸಾವು
ಸುಳ್ಯ: ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯದಲ್ಲಿ ಬುಧವಾರ ಸಂಭವಿಸಿದೆ.
ಸುಳ್ಯ ಜ್ಯೋತಿ ಸರ್ಕಲ್ ಬಳಿಯ ಕಟ್ಟಡದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕಲ್ಲಡ್ಕ ನಿವಾಸಿ ಪ್ರಮೋದ್ ಮೃತರು. ಕುಸಿದು ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JDS: ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಈಗಿಲ್ಲ, ಎಪ್ರಿಲ್‌ನಲ್ಲಿ: ಎಚ್.ಡಿ.ಕುಮಾರಸ್ವಾಮಿ
CM Post: ಸಭೆಗೆ ಮುನ್ನಾದಿನ ಉಭಯ ಬಣಗಳ ವಾಕ್ಸಮರ!
UP Government; ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ
Mass Marriage: ಹೆಚ್ಚು ಮಕ್ಕಳು ಬೇಡ, ಎರಡೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ
Congress Government: ಡಿ.ಕೆ.ಶಿವಕುಮಾರ್ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.