Alvas ವಿರಾಸತ್ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ
Team Udayavani, Dec 12, 2024, 1:06 AM IST
ಮೂಡುಬಿದಿರೆ: ಮೂರು ದಶಕಗಳಿಂದ ನಡೆಯುತ್ತಿರುವ ಆಳ್ವಾಸ್ ವಿರಾಸತ್ನಲ್ಲಿ ಈ ಬಾರಿ ಕೃಷಿ ಸಿರಿಯ ಮೂಲಕ ಈ ನೆಲದ ಮೂಲಸತ್ವವನ್ನು ಉಣಬಡಿಸುವ ವಿಶೇಷ ಪ್ರಯತ್ನ ಮಾಡಿರುವುದು ಸಹಿತ ಹಲವು ಹೊಸತನಗಳಿವೆ.
ಆಳ್ವಾಸ್ ವಿರಾಸತ್ನ ಪ್ರಧಾನ ವೇದಿಕೆ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಸಮೀಪದಲ್ಲೇ ಕೃಷಿ ಸಿರಿ ಅನಾವರಣಗೊಂಡಿದೆ. ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿ ಸಿರಿ ಮೇಳಗಳ ಆವರಣ ಮನ ತಣಿಸುತ್ತಿದೆ. ಇಲ್ಲಿ ಬರೋಬ್ಬರಿ 60 ವಿಧಗಳ ತರಕಾರಿಗಳಿವೆ.
ಸುಮಾರು 3 ತಿಂಗಳುಗಳಿಂದ ಇದನ್ನು ಇಲ್ಲೇ ಬೆಳೆಯಲಾಗಿದೆ. ಬದನೆ ಸಹಿತ ಕೆಲವು ತರಕಾರಿಗಳ ಹಲವು ತಳಿ ಇಲ್ಲಿವೆ. ವಿದೇಶಿ ತರಕಾರಿ ಗಿಡಗಳಿವೆ. ಆಧುನಿಕ ತಂತ್ರಜ್ಞಾನ ಬಳಸಿ ಇವುಗಳನ್ನು ಬೆಳೆಸಲಾಗಿದೆ.
ವಿದ್ಯಾಗಿರಿ ಹಸುರುಟ್ಟ ಬೆಡಗಿಯಂತೆ ಕಂಗೊಳಿಸುತ್ತಿದೆ. ದೇಶ ವಿದೇಶಗಳಿಂದ ತಂದ ತಳಿಗಳು ಹಾಗೂ ಕಸಿ ಮಾಡಿದ ವಿವಿಧ ಫಲಗಳು ಕಣ್ಮನ ಸೆಳೆಯುತ್ತಿವೆ. ಜತೆಗೆ ಕುತೂಹಲವನ್ನೂ ಮೂಡಿಸುತ್ತಿದೆ. ಹಣ್ಣು, ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು-ನೆಲದಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಕೂಡ ಇಲ್ಲಿವೆ.
ಇಸ್ರೇಲ್ ತಂತ್ರಜ್ಞಾನ
ಇಸ್ರೇಲ್ ತಂತ್ರಜ್ಞಾನ ಬಳಸಿ ಹಾಗಲಕಾಯಿ, ಕುಂಬಳಕಾಯಿ, ಹರಿವೆ, ಬೆಂಡೆಕಾಯಿ, ಬದನೆ, ಪಡುವಲಕಾಯಿ ಹಾಗೂ ಇನ್ನಿತರ ತರಕಾರಿಗಳನ್ನು ಇಲ್ಲಿ ಬೆಳೆಯಲಾಗಿದೆ. ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಕೃಷಿ ಪಾಠ!
ಕೃಷಿ ಸಿರಿಯ ಜತೆಗೆ ಇಲ್ಲಿ 3 ಲಕ್ಷಕ್ಕೂ ಅ ಧಿಕ ಹೂ ಗಿಡಗಳಿರುವುದು ವಿಶೇಷ. ಆಳ್ವಾಸ್ ಕ್ಯಾಂಪಸ್ ಬಗೆಬಗೆಯ ಹೂ ಗಿಡಗಳಿಂದ ಆಕರ್ಷಣೀಯವಾಗಿ ಕಂಗೊಳಿಸುತ್ತಿದೆ. 6 ತಿಂಗಳುಗಳಿಂದ ಇದಕ್ಕೆ ಸಿದ್ಧತೆ ಮಾಡಲಾಗಿದೆ. ಹಲವು ಹೂ ಗಿಡಗಳನ್ನು ಇತರ ಜಿಲ್ಲೆ, ರಾಜ್ಯದಿಂದ ತರಿಸಲಾಗಿದೆ. ಸಂಗೀತ, ಸಾಂಸ್ಕೃತಿಕ ದ ಜತೆಗೆ ಇಲ್ಲಿ ಹೂ ಗಿಡ, ತರಕಾರಿ, ಕೃಷಿಯ ಅನುಭೂತಿ ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗಂತು ಇದು ಕಲಿಕೆಯ ತಾಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.