Areca nut: ಅಡಿಕೆ ಫ‌ಸಲು ಇಳಿಕೆ… ಬೆಳೆಗಾರರಿಗೂ ನಷ್ಟ, ಕಾರ್ಮಿಕರಿಗೂ ಕಷ್ಟ


Team Udayavani, Dec 12, 2024, 9:00 AM IST

Areca nut: ಅಡಿಕೆ ಫ‌ಸಲು ಇಳಿಕೆ… ಬೆಳೆಗಾರರಿಗೂ ನಷ್ಟ, ಕಾರ್ಮಿಕರಿಗೂ ಕಷ್ಟ

ಪುತ್ತೂರು: ಈ ಬಾರಿ ಅಡಿಕೆ ಫ‌ಸಲು ಕಡಿಮೆ ಎಂಬ ನೋವು ತೋಟದ ಮಾಲಕರದ್ದಾದರೆ, ಕೊçಲನ್ನೇ ನಂಬಿ ಜೀವಿಸುತ್ತಿದ್ದ ಕಾರ್ಮಿಕರು ಆದಾಯವೇ ಇಲ್ಲ ಎಂದು ಆತಂಕದಲ್ಲಿದ್ದಾರೆ.

ಅಡಿಕೆ ತೋಟದ ನಿರ್ವಹಣೆಯಲ್ಲಿ ಮುಖ್ಯಭಾಗ ಕೊçಲು, ಔಷಧ ಸಿಂಪಡಣೆ. ತೋಟಕ್ಕೆ ನೀರುಣಿಸಲು, ಗೊಬ್ಬರ ಹಾಕಲು ಪರಿಣಿತ ಕಾರ್ಮಿಕರೇ ಬೇಕೆಂದಿಲ್ಲ. ಆದರೆ ಕೊçಲು, ಔಷಧ ಸಿಂಪಡಣೆಗೆ ಮರ ಹತ್ತಲು ತಿಳಿದಿರುವವರು ಅಗತ್ಯ. ಇಂಥ ಬೆರಳೆಣಿಕೆಯ ಕಾರ್ಮಿಕರು ಆಯಾ ಊರಿನ ಹತ್ತಕ್ಕಿಂತ ಅಧಿಕ ತೋಟಗಳಲ್ಲಿ ನಿಗದಿತ ದಿನದಂತೆ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ದಿನವೊಂದಕ್ಕೆ 1,700 ರೂ.ನಿಂದ 2 ಸಾ. ರೂ. ತನಕ ವೇತನ ಇದೆ.

ಇವರು ತೋಟವೊಂದರಲ್ಲಿ ಹಿಂಗಾರ, ಎಳೆನಳ್ಳಿ, ಎಳೆಕಾಯಿ ಅಡಿಕೆಗೆ ಎಂದು ಮೂರದಿಂದ ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡುತ್ತಾರೆ. ಅಡಿಕೆ ಹಣ್ಣಾದ ಮೇಲೆ ಮೂರರಿಂದ ನಾಲ್ಕು ಬಾರಿ ಕೊçಲು. ಆದರೆ ಈ ಬಾರಿಯ ಫಸಲು ನಷ್ಟ ಈ ಕಾರ್ಮಿಕರ ಕೆಲಸಕ್ಕೆ ಕುತ್ತು ತಂದಿದೆ. ಸಣ್ಣ ತೋಟವೊಂದರಲ್ಲಿ ನಾಲ್ಕು ಕೊçಲು ಮಾಡಿ ಒಂದು ಬಾರಿಗೆ 2 ಸಾ.ರೂ.ಯಂತೆ (ದಿನಕ್ಕೆ) 8 ಸಾವಿರ ರೂ. ಸಂಪಾದಿಸುತ್ತಿದ್ದ ಕಾರ್ಮಿಕನಿಗೆ ಈ ಬಾರಿ ಒಂದು ಅಥವಾ ಎರಡು ಕೊçಲಷ್ಟೇ ಸಿಗಬಹುದು. 2 ಸಾವಿರಕ್ಕಿಂತ ಮೇಲ್ಪಟ್ಟ ಅಡಿಕೆ ಮರ ಇರುವ ತೋಟಗಳಲ್ಲಿ ಕೊçಲಿಗೆ ಒಂದಕ್ಕಿಂತ ಹೆಚ್ಚು ದಿನ ಬೇಕು. ಈ ಪ್ರಮಾಣಕ್ಕೆ ಹೊಂದಿಕೊಂಡು ಅವರ ಆದಾಯದ ನಷ್ಟವೂ ಇರುತ್ತದೆ. ಹೆಚ್ಚಿನ ಕಾರ್ಮಿಕರು 10ರಿಂದ 15ರಷ್ಟು ಅಧಿಕ ತೋಟದ ಜವಾಬ್ದಾರಿ ಹೊಂದಿರುತ್ತಾರೆ.

ಅಕಾಲಿಕ ಮಳೆಯಿಂದಾಗಿಯೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕಿದ ಅಡಿಕೆಯನ್ನು ಒಣಗಿಸುವುದು ಕಷ್ಟವಾಗುತ್ತಿದೆ. ನಿರಂತರವಾಗಿ ಮಳೆಯಿಂದ ಒದ್ದೆಯಾದರೆ ಆ ಅಡಿಕೆ ಒಣಗಿದ ಮೇಲೂ ಹೆಚ್ಚು ಬಾಳಿಕೆ ಬರುವುದಿಲ್ಲ. ಗುಣಮಟ್ಟವೂ ಕಳಪೆಯಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಸಿಗುತ್ತದೆ.

ಬೆಳೆ ವಿಮೆಯೂ ಇಳಿಕೆ
ಹವಾಮಾನ ಆಧಾರಿತ ವಿಮೆ ಯೋಜನೆಯಲ್ಲಿ ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಈ ಬಾರಿ ನಿರೀಕ್ಷಿತ ಮೊತ್ತ ಪಾವತಿಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಶೇ.40ರಷ್ಟು ಕಡಿಮೆ ಮೊತ್ತ ಜಮೆ ಆಗಿದೆ. ಹಿಂದಿನ ಮಾನದಂಡದ ಪ್ರಕಾರ ವಿಮೆ ಮೊತ್ತ ಪಾವತಿ ಮಾಡಿದರೆ ಕಂಪೆನಿಗೆ ನಷ್ಟ ಉಂಟಾಗುತ್ತದೆ ಎಂಬ ಕಾರಣದಿಂದ ಹೊಸ ನಿಯಮ ರೂಪಿಸಲಾಗಿತ್ತು. ಇದರಿಂದ ಬೆಳೆ ವಿಮೆ ಮೊತ್ತ ಕಡಿಮೆ ಆಗಿದೆ. ಬೆಳೆಗಾರರು ಹೇಳುವ ಪ್ರಕಾರ, ಕಳೆದ ಬಾರಿ ತಾಪಮಾನ ಹಾಗೂ ನೀರಿನ ಕೊರತೆ ಹೆಚ್ಚಾಗಿತ್ತು. ಹವಾಮಾನ ವೈಪರೀತ್ಯದ ಆಧಾರದಲ್ಲೇ ವಿಮೆ ಮೊತ್ತ ನಿರ್ಧಾರವಾಗುವ ಕಾರಣ ಈಗ ಲಭಿಸಿರುವ ಮೊತ್ತ ಅದಕ್ಕೆ ತಕ್ಕುದಾಗಿ ಇಲ್ಲ ಅನ್ನುವ ಕೂಗು ಬೆಳೆಗಾರರದ್ದು. ಹೀಗಾಗಿ ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಿದ್ದ ವಿಮೆಯ ಕಥೆಯೂ ಕೈ ಕೊಟ್ಟಿದೆ ಎನ್ನುತ್ತಾರೆ ಅವರು.

ಫ‌ಸಲು ಕಡಿಮೆ, ರೋಗ ಮುಂತಾದ ಕಾರಣಗಳಿಂದ ಅಡಿಕೆ ಕ್ನಷಿಕರು ಸಂಕಷ್ಟದಲ್ಲಿದ್ದಾರೆ. ನೆರವಾಗಬೇಕಿದ್ದ ಬೆಳೆ ವಿಮೆಯೂ ಕೈ ಕೊಟ್ಟಿದೆ. ಅಡಿಕೆ ಕೃಷಿಗೆ ತಟ್ಟಿರುವ ಸಮಸ್ಯೆಯು ಬೆಳೆಗಾರ ಮತ್ತು ಕಾರ್ಮಿಕರನ್ನು ಆತಂಕಕ್ಕೆ ತಳ್ಳಿದೆ. ಆದ್ದರಿಂದ ಸರಕಾರ ತತ್‌ಕ್ಷಣ ಬೆಳೆಗಾರರು ಮತ್ತು ಕಾರ್ಮಿಕರ ನೆರವಿಗೆ ಬರಬೇಕು.
– ಎಂ.ವೆಂಕಪ್ಪ ಗೌಡ, ಕೃಷಿಕರು

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

voter

One Nation One Election ಕೇಂದ್ರ ಸಚಿವ ಸಂಪುಟ ಅನುಮೋದನೆ : ವರದಿ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ.. ಚುನಾವಣಾ ಪೂರ್ವ ಭರವಸೆ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ… ಕೇಜ್ರಿವಾಲ್ ಘೋಷಣೆ

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

6-muddebihala

Muddebihal: ಮುಖ್ಯ ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(8

Sullia: ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿ ಮರೀಚಿಕೆ !

2(1

Badagannur: ಬಸ್‌ ತಂಗುದಾಣಗಳ ಬಗ್ಗೆ ಕಾಳಜಿ ಯಾಕಿಲ್ಲ?

1

Belthangady: ಗ್ರಾಮೀಣ ನೈರ್ಮಲ್ಯ ಕಾಪಾಡುತ್ತಿರುವ ನರೇಗಾ

ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ನಡೆಸುತ್ತಿದ್ದ ವ್ಯಕ್ತಿ ಸೂರತ್‌ನಲ್ಲಿ ಸಾವು

ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ನಡೆಸುತ್ತಿದ್ದ ವ್ಯಕ್ತಿ ಸೂರತ್‌ನಲ್ಲಿ ಸಾವು

Uppinangady: ಕಾರ್ಮಿಕನ ಕೊ*ಲೆ; ಆರೋಪಿ ಬಂಧನ

Uppinangady: ಕಾರ್ಮಿಕನ ಕೊ*ಲೆ; ಆರೋಪಿ ಬಂಧನ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

voter

One Nation One Election ಕೇಂದ್ರ ಸಚಿವ ಸಂಪುಟ ಅನುಮೋದನೆ : ವರದಿ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

dharma keerthiraj dasarahalli

Dharma Keerthiraj ʼದಾಸರಹಳ್ಳಿʼ ಟ್ರೇಲರ್‌ ಬಂತು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.