INDWvsAUSW: 51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

Team Udayavani, Dec 12, 2024, 12:18 PM IST

51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

ಪರ್ತ್:‌ ಟೀಂ ಇಂಡಿಯಾ ಉಪನಾಯಕಿ, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಸ್ಮೃತಿ ಮಂಧನಾ ಅವರ ಶತಕದ ಹೊರತಾಗಿಯೂ ಭಾರತ ಈ ಪಂದ್ಯದಲ್ಲಿ ಸೋಲನುಭವಿಸಿತು.

ಮಂಧನಾ ಅವರು 2024 ರ ನಾಲ್ಕನೇ ಶತಕ ಗಳಿಸಿದರು. ಈ ಗಮನಾರ್ಹ ಸಾಧನೆಯು ವಿಸ್ಡನ್ ಪ್ರಕಾರ, ಮಹಿಳಾ ಏಕದಿನಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಅತಿ ಹೆಚ್ಚು ಶತಕಗಳ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತು.

ಆಶ್ಲೀ ಗಾರ್ಡ್ನರ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಸಹ ಅರ್ಧಶತಕಗಳ ಕೊಡುಗೆ, ಅನ್ನಾಬೆಲ್ ಸದರ್ಲ್ಯಾಂಡ್ ಅವರ 99 ಎಸೆತಗಳಲ್ಲಿ 110 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 299 ರನ್ ಗುರಿ ನೀಡಿತ್ತು. ಆದರೆ ಭಾರತದ ಪರ ಸ್ಮೃತಿ ಹೊರತಾಗಿ ಯಾವ ಆಟಗಾರ್ತಿಯೂ ಸಾಥ್‌ ನೀಡಲಿಲ್ಲ. ಹೀಗಾಗಿ ಭಾರತ ಸೋಲು ಕಂಡಿತು.

ಜೂನ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಮತ್ತು ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ ಒಂದು ಶತಕಗಳ ನಂತರ ಮಂಧಾನ ಅವರ ವರ್ಷದ ನಾಲ್ಕನೇ ಶತಕವಾಗಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕ ಬಾರಿಸಿದ ಸ್ಮೃತಿ ಮಹಿಳಾ ಏಕದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದರರು. ಒಂದು ವರ್ಷದಲ್ಲಿ ತಲಾ ಮೂರು ಶತಕಗಳನ್ನು ಗಳಿಸಿದ ಏಳು ಆಟಗಾರರ ಹಿಂದಿನ ದಾಖಲೆಯನ್ನು ಮೀರಿಸಿದರು.

ಇದೇ ವೇಳೆ ಮಂಧಾನಾ ಅವರು ಮಹಿಳಾ ಏಕದಿನಗಳಲ್ಲಿ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೇರಿದರು. ಈದು ಅವರ 9ನೇ ಶತಕವಾಗಿದೆ. ಅವರು ಈಗ ನ್ಯಾಟ್ ಸಿವರ್-ಬ್ರಂಟ್, ಚಾಮರಿ ಅತ್ತಪತ್ತು ಮತ್ತು ಚಾರ್ಲೊಟ್ ಎಡ್ವರ್ಡ್ಸ್ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟಾಪ್ ನ್ಯೂಸ್

Supreme Court

SC:ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ದಾವೆ; ಕೋರ್ಟ್ ಗಳು ಆದೇಶಗಳನ್ನು ನೀಡಬಾರದು

Chikkamagaluru : ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

Chikkamagaluru: ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

voter

One Nation One Election ಕೇಂದ್ರ ಸಚಿವ ಸಂಪುಟ ಅನುಮೋದನೆ : ವರದಿ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ.. ಚುನಾವಣಾ ಪೂರ್ವ ಭರವಸೆ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ… ಕೇಜ್ರಿವಾಲ್ ಘೋಷಣೆ

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

Sanju Weds Geetha-2: ತೆರೆಗೆ ಬರಲು ಸಿದ್ದವಾಯ್ತು ಸಂಜು ವೆಡ್ಸ್‌ ಗೀತಾ-2

6-muddebihala

Muddebihal: ಮುಖ್ಯ ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Test; ಆಟಗಾರನನ್ನು ಹೋಟೆಲ್‌ನಲ್ಲಿ ಬಿಟ್ಟು ಬ್ರಿಸ್ಬೇನ್‌ಗೆ ತೆರಳಿದ ಟೀಂಇಂಡಿಯಾ; ಆಗಿದ್ದೇನು?

Test; ಆಟಗಾರನನ್ನು ಹೋಟೆಲ್‌ನಲ್ಲಿ ಬಿಟ್ಟು ಬ್ರಿಸ್ಬೇನ್‌ಗೆ ತೆರಳಿದ ಟೀಂಇಂಡಿಯಾ; ಆಗಿದ್ದೇನು?

ICC Rankings:  ನಂ.1 ಟೆಸ್ಟ್‌ ಬ್ಯಾಟರ್‌… ರೂಟ್‌ ಸ್ಥಾನಕ್ಕೆ ಬ್ರೂಕ್‌ ಲಗ್ಗೆ

ICC Rankings: ನಂ.1 ಟೆಸ್ಟ್‌ ಬ್ಯಾಟರ್‌… ರೂಟ್‌ ಸ್ಥಾನಕ್ಕೆ ಬ್ರೂಕ್‌ ಲಗ್ಗೆ

Syed Mushtaq Ali Trophy: ಸೆಮಿಫೈನಲ್‌ ಸೆಣಸಾಟಕ್ಕೆ ಅಖಾಡ ಸಜ್ಜು

Syed Mushtaq Ali Trophy: ಸೆಮಿಫೈನಲ್‌ ಸೆಣಸಾಟಕ್ಕೆ ಅಖಾಡ ಸಜ್ಜು

World Chess: ನಿರ್ಣಾಯಕ ಘಟ್ಟಕ್ಕೆ ವಿಶ್ವ ಚೆಸ್‌… ಇಂದು ಕೊನೆಯ ಪಂದ್ಯ

World Chess: ನಿರ್ಣಾಯಕ ಘಟ್ಟಕ್ಕೆ ವಿಶ್ವ ಚೆಸ್‌… ಇಂದು ಕೊನೆಯ ಪಂದ್ಯ

ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ

ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Supreme Court

SC:ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ದಾವೆ; ಕೋರ್ಟ್ ಗಳು ಆದೇಶಗಳನ್ನು ನೀಡಬಾರದು

Chikkamagaluru : ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

Chikkamagaluru: ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

voter

One Nation One Election ಕೇಂದ್ರ ಸಚಿವ ಸಂಪುಟ ಅನುಮೋದನೆ : ವರದಿ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.