Belthangady: ಗ್ರಾಮೀಣ ನೈರ್ಮಲ್ಯ ಕಾಪಾಡುತ್ತಿರುವ ನರೇಗಾ

ಬೆಳ್ತಂಗಡಿ ತಾಲೂಕಿನಲ್ಲಿ 2,212 ವೈಯಕ್ತಿಕ ಸೋಕ್‌ಪಿಟ್‌ ರಚನೆ

Team Udayavani, Dec 12, 2024, 1:33 PM IST

1

ಬೆಳ್ತಂಗಡಿ: ಗ್ರಾಮೀಣ ಪ್ರದೇಶವನ್ನು ಕೊಳಚೆ ನೀರು ಮುಕ್ತಗೊಳಿಸಿ, ಗ್ರಾಮೀಣ ನೈರ್ಮಲ್ಯ ಕಾಪಾಡುವ ಸದುದ್ದೇಶದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಳೆದ 6 ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 2,212 ವೈಯಕ್ತಿಕ ಬಚ್ಚಲು ಗುಂಡಿ (ಸೋಕ್‌ಪಿಟ್‌) ನಿರ್ಮಿಸುವ ಮೂಲಕ ಗುರಿ ಸಾಧನೆ ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿ ಸುವುದು, ಕೊಳಚೆ ನೀರು ಸದ್ಭಳಕೆ ಮಾಡಿಕೊಳ್ಳುವುದು, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ನರೇಗಾ ಯೋಜನೆಯು ಶೌಚಾಲಯ ನಿರ್ಮಾಣಕ್ಕೆ ಸಾಥ್‌ ನೀಡುತ್ತಾ ಬಂದಿದೆ. ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಬಿಡುವುದನ್ನು ತಡೆಗಟ್ಟಲು ವಿನೂತನ ಕ್ರಮವಾಗಿದ್ದು, ಪ್ರತೀ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಉಪಯುಕ್ತತೆ ಪಡೆದಿದೆ.

ಪ್ರತೀ ಮನೆಗಳಲ್ಲಿಯೂ ಅನುಷ್ಠಾನ ಚಿಂತನೆ
ಬಚ್ಚಲಿನ ಮಲಿನ ನೀರು ಅಂದರೆ ಬಟ್ಟೆ ಒಗೆದ ನೀರು, ಸ್ನಾನ ಮಾಡಿದ ನೀರು ಮತ್ತು ಪಾತ್ರೆ ತೊಳೆದ ನೀರು ಮನೆ ಸುತ್ತಮುತ್ತಲು ಅನೈರ್ಮಲ್ಯ ಹಾಗೂ ಅನಾರೋಗ್ಯ ಸೃಷ್ಟಿಸುವ ಸಂಭವಿರುತ್ತದೆ. ಆ ಕೊಳಚೆ ನೀರು ಭೂಮಿಯನ್ನು ಇಂಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯು ವುದರಲ್ಲಿ ಬಚ್ಚಲು ಗುಂಡಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ತಾಲೂಕಿನ ಗ್ರಾಮದ ಪ್ರತೀ ಮನೆಗಳಲ್ಲಿಯೂ ಕೂಡ ಬಚ್ಚಲಗುಂಡಿ ನಿರ್ಮಾಣಕ್ಕಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನವನ್ನೇ ಹಮ್ಮಿಕೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿ 5 ಸೆಂಟ್ಸ್‌ ಕಾಲನಿಗಳಲ್ಲಿ ವ್ಯವಸ್ಥಿತವಾದ ಚರಂಡಿ ಇರುವುದಿಲ್ಲ. ಜತೆಗೆ ಪ್ರಸಕ್ತ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸರಕಾರದಿಂದ ಫಲಾನುಭವಿಗಳಿಗೆ ಸಿಗುವ ಒಂದು ಮುಕ್ಕಾಲು, ಗ್ರಾಮೀಣ ಭಾಗದಲ್ಲಿ ಎರಡುವರೆ ಸೆಂಟ್ಸ್‌ ಸ್ಥಳದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಗ್ಯೂ, ಮಲೇರಿಯಾ ಸಹಿತ ಸಾಂಕ್ರ ಮಿಕ ರೋಗ ಹರಡುವ ಪರಿಸ್ಥಿತಿ ಬಂದೊದಗುತ್ತದೆ. ಇದನ್ನು ತಡೆಯುವ ಸಲುವಾಗಿ ಅಭಿಯಾನವಾಗಿದೆ.

ಸಮುದಾಯ ಪಿಟ್‌ ರಚಿಸಲು ಅವಕಾಶ
ವೈಯಕ್ತಿಕ ಸೋಕ್‌ಪಿಟ್‌ಅಲ್ಲದೆ ಸಮುದಾಯ ಸೋಫಿಟ್‌ ನಿರ್ಮಿಸಲು ಅವಕಾಶವಿದೆ. 5 ಸೆಂಟ್ಸ್‌ ಕಾಲನಿಗಳಲ್ಲಿ ಅಕ್ಕ-ಪಕ್ಕ ಹೆಚ್ಚಿನ ಮನೆಗಳಿದ್ದು, ಸೋಕ್‌ಪಿಟ್‌ ಮಾಡಲು ಸ್ಥಳವಕಾಶವಿಲ್ಲದಿದ್ದರೆ ಹತ್ತಿರದ ಯಾವುದೇ ಸರಕಾರಿ ಜಾಗವಿದ್ದರೆ ಆ ಪ್ರದೇಶದಲ್ಲಿ ಸಮುದಾಯ ಸೋಕ್‌ಫಿಟ್‌ ರಚನೆಗೆ ಅವಕಾಶವಿದೆ. ಅಂಗನವಾಡಿ ಸರಕಾರಿ ಶಾಲಾ ಕಾಲೇಜುಗಳಲ್ಲಿ, ಸರಕಾರಿ ವಸತಿ ಗೃಹಗಳಲ್ಲೂ ಸಮುದಾಯ ಸೋಕ್‌ಪಿಟ್‌ಗೆ ಅವಕಾಶವಿದೆ ಎಂದು ನರೇಗಾ ಪ್ರಭಾರ ಸಹಾಯಕ ನಿರ್ದೇಶಕಿ ಸಫಾನಾ ತಿಳಿಸಿದ್ದಾರೆ.

ಗರಿಷ್ಠ 11 ಸಾವಿರ ರೂ.
ಉದ್ಯೋಗ ಚೀಟಿಯ ಪ್ರತಿ ಮತ್ತು ಮನೆಯ ಆರ್‌ಟಿಸಿ ಪ್ರತಿಯನ್ನು ಪಂಚಾಯತ್‌ಗೆ ಸಲ್ಲಿಸಬೇಕು. ಸೋಕ್‌ಪಿಟ್‌ 6 ಫೀಟ್‌ ಆಳ 4 ಫೀಟ್‌ ಗುಂಡಿ, ತಳ ಭಾಗದಲ್ಲಿ 3 ಅಡಿ ಜಲ್ಲಿ ಸುರಿದು, ಅನಂತರ 4 ಸಿಮೆಂಟ್‌ ರಿಂಗ್‌ ಅಳವಡಿಸಲಾಗುತ್ತದೆ. ಬಳಿಕ ಕಾಂಕ್ರೀಟ್‌ ಸ್ಲಾಬ್‌ನಿಂದ ಮುಚ್ಚಿ ಮನೆಯ ಕೊಳಚೆ ನೀರು ಅದಕ್ಕೆ ಸೇರುವ ವ್ಯವಸ್ಥೆ ಮಾಡಬೇಕು. ಕಾಮಗಾರಿ ಖರ್ಚಿನ ವಿವರ ಹಾಗೂ ಒರಿಜಿನಲ್‌ (ಜಿಎಸ್‌ಟಿ) ಬಿಲ್‌ ಸಲ್ಲಿಸಿದರೆ, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ. ಗರಿಷ್ಠ 11 ಸಾವಿರ ರೂ. ವರೆಗೆ ಪಡೆಯಬಹುದಾಗಿದೆ.

ಅಭಿಯಾನ ಇಲ್ಲಿಯ ತನಕ
– 2019-20 – 38
– 2020-21 – 457
– 2021-22 – 736
– 2022-23 – 559
– 2023-24 – 288
– 2024-25 – 134
ಒಟ್ಟು 2,212 ಸೋಕ್‌ಪಿಟ್‌ ರಚಿಸಲಾಗಿದೆ.

ಸಮಗ್ರ ಬೂದು ನೀರು ನಿರ್ವಹಣೆಯಡಿ ಬೆಳ್ತಂಗಡಿ ತಾಲೂಕಿನಲ್ಲಿ ಕಾಶಿಪಟ್ಣ ಮತ್ತು ಪಟ್ರಮೆ ಗ್ರಾಮದಲ್ಲಿ ಪ್ರತೀ ಮನೆಯಲ್ಲಿ ಬಚ್ಚಲು ಗುಂಡಿ ಅನುಷ್ಠಾನಿಸಲು ಮೊದಲ ಹಂತದಲ್ಲಿ ಗುರಿ ಹೊಂದಲಾಗಿದೆ. ಪ್ರಸಕ್ತ ತಾಲೂಕಿನಲ್ಲಿ 2,212 ವೈಯಕ್ತಿಕ ಬಚ್ಚಲು ಗುಂಡಿ ಹಾಗೂ 32 ಸಮುದಾಯ ಬಚ್ಚಲುಗುಂಡಿ ರಚನೆಯಾಗಿದೆ.
-ಭವಾನಿ ಶಂಕರ್‌, ಇಒ, ಬೆಳ್ತಂಗಡಿ ತಾ.ಪಂ.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ

Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ

4,6,6,6,6: ಐಪಿಎಲ್‌ನಲ್ಲಿ 30 ಲಕ್ಷಕ್ಕೆ ಸೇಲಾದ ಆಟಗಾರನ ಭರ್ಜರಿ ಇನ್ನಿಂಗ್ಸ್‌ | ವಿಡಿಯೋ

4,6,6,6,6: ಐಪಿಎಲ್‌ನಲ್ಲಿ 30 ಲಕ್ಷಕ್ಕೆ ಸೇಲಾದ ಆಟಗಾರನ ಭರ್ಜರಿ ಇನ್ನಿಂಗ್ಸ್‌ | ವಿಡಿಯೋ

Supreme Court

SC:ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ದಾವೆ; ಕೋರ್ಟ್ ಗಳು ಆದೇಶಗಳನ್ನು ನೀಡಬಾರದು

Chikkamagaluru : ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

Chikkamagaluru: ನಾಲ್ಕು ವರ್ಷದಿಂದ ಪತ್ನಿಗೆ ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ

voter

One Nation One Election ಕೇಂದ್ರ ಸಚಿವ ಸಂಪುಟ ಅನುಮೋದನೆ : ವರದಿ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ.. ಚುನಾವಣಾ ಪೂರ್ವ ಭರವಸೆ

AAP: ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2100 ರೂ… ಕೇಜ್ರಿವಾಲ್ ಘೋಷಣೆ

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..

Keerthy Suresh: ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ; ಇಲ್ಲಿದೆ ಫೋಟೋಸ್..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(8

Sullia: ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿ ಮರೀಚಿಕೆ !

2(1

Badagannur: ಬಸ್‌ ತಂಗುದಾಣಗಳ ಬಗ್ಗೆ ಕಾಳಜಿ ಯಾಕಿಲ್ಲ?

Areca nut: ಅಡಿಕೆ ಫ‌ಸಲು ಇಳಿಕೆ… ಬೆಳೆಗಾರರಿಗೂ ನಷ್ಟ, ಕಾರ್ಮಿಕರಿಗೂ ಕಷ್ಟ

Areca nut: ಅಡಿಕೆ ಫ‌ಸಲು ಇಳಿಕೆ… ಬೆಳೆಗಾರರಿಗೂ ನಷ್ಟ, ಕಾರ್ಮಿಕರಿಗೂ ಕಷ್ಟ

ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ನಡೆಸುತ್ತಿದ್ದ ವ್ಯಕ್ತಿ ಸೂರತ್‌ನಲ್ಲಿ ಸಾವು

ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ನಡೆಸುತ್ತಿದ್ದ ವ್ಯಕ್ತಿ ಸೂರತ್‌ನಲ್ಲಿ ಸಾವು

Uppinangady: ಕಾರ್ಮಿಕನ ಕೊ*ಲೆ; ಆರೋಪಿ ಬಂಧನ

Uppinangady: ಕಾರ್ಮಿಕನ ಕೊ*ಲೆ; ಆರೋಪಿ ಬಂಧನ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ

Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ

4,6,6,6,6: ಐಪಿಎಲ್‌ನಲ್ಲಿ 30 ಲಕ್ಷಕ್ಕೆ ಸೇಲಾದ ಆಟಗಾರನ ಭರ್ಜರಿ ಇನ್ನಿಂಗ್ಸ್‌ | ವಿಡಿಯೋ

4,6,6,6,6: ಐಪಿಎಲ್‌ನಲ್ಲಿ 30 ಲಕ್ಷಕ್ಕೆ ಸೇಲಾದ ಆಟಗಾರನ ಭರ್ಜರಿ ಇನ್ನಿಂಗ್ಸ್‌ | ವಿಡಿಯೋ

apaya

Sandalwood: ʼಅಪಾಯವಿದೆ ಎಚ್ಚರಿಕೆʼ ಮೋಷನ್‌ ಪೋಸ್ಟರ್‌ ಬಂತು

Vijayapura: ತೊಗರಿ ಫಸಲು ಕೊಡದ ಸರ್ಕಾರಿ ಬೀಜ!; ನಿರೀಕ್ಷೆಯಲ್ಲಿದ್ದ ರೈತ ಕಂಗಾಲು

Vijayapura: ತೊಗರಿ ಫಸಲು ಕೊಡದ ಸರ್ಕಾರಿ ಬೀಜ!; ನಿರೀಕ್ಷೆಯಲ್ಲಿದ್ದ ರೈತ ಕಂಗಾಲು

Supreme Court

SC:ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ದಾವೆ; ಕೋರ್ಟ್ ಗಳು ಆದೇಶಗಳನ್ನು ನೀಡಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.