Surathkal: ಬೇಡಿಕೆಯಾಗಿಯೇ ಉಳಿದ ಬಸ್ ನಿಲ್ದಾಣ!
ಚಿತ್ರಾಪುರ ತಿರುವು ಬಳಿ ಸ್ಮಾರ್ಟ್ ಸಿಟಿ ನಿರ್ಮಿಸಿದ್ದ ಬಸ್ ತಂಗುದಾಣ ತೆರವು
Team Udayavani, Dec 12, 2024, 3:53 PM IST
ಸುರತ್ಕಲ್: ಚಿತ್ರಾಪುರ ತಿರುವು ಬಳಿ ಸ್ಮಾರ್ಟ್ ಸಿಟಿ ವಿಭಾಗ ನಿರ್ಮಿಸಿದ್ದ ಬಸ್ ತಂಗುದಾಣವೊಂದು ಒಂದೂವರೆ ವರ್ಷದ ಹಿಂದೆ ನಾಪತ್ತೆಯಾದ ಬಳಿಕ ಇದು ವರೆಗೂ ಈ ಭಾಗದಲ್ಲಿ ಬಸ್ ನಿಲ್ದಾಣದ ಬೇಡಿಕೆ ಮರೀಚಿಕೆಯಾಗಿ ಉಳಿದಿದೆ.
ಪ್ರಯಾಣಿಕರಿಗೆ ಮಳೆ, ಗಾಳಿಯಿಂದ ರಕ್ಷಣೆ ಸಿಗಲಿ ಎಂದು ತಂಗುದಾಣ ನಿರ್ಮಿ ಸಿದರೆ ಇತ್ತ ವ್ಯಾಪಾರ ವಹಿವಾಟಿಗೆ ಅಡ್ಡಿ ಎಂದು ಜನರ ಹಿತವನ್ನೇ ಬಲಿಗೊಟ್ಟು ಹೆದ್ದಾರಿ ಬದಿ ಇದ್ದ ತಂಗುದಾಣವನ್ನೇ ತೆಗೆಯಲಾಗಿದೆ.
ಸಾರ್ವಜನಿಕರ ಅಸಮಧಾನ
ಕಾರ್ಪೋರೆಟರ್‌ಗಳನ್ನು ಪ್ರಶ್ನಿಸಿದರೆ ತಂಗುದಾಣ ತೆರವು ಬಗ್ಗೆ ಅವರ ಜತೆ ಚರ್ಚೆ ನಡೆಸದೆ ಮಾಡಲಾಗಿದೆ. ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಅಸಮಾ ಧಾನಕ್ಕೆ ಕಾರಣವಾಗಿತ್ತು. ಬಳಿಕ ಹಲವು ಬಾರಿ ಬೇಡಿಕೆ ಇಟ್ಟರೂ ಇದುವರೆಗೂ ಚಿತ್ರಾಪುರ ದಲ್ಲಿ ಬಸ್ ನಿಲ್ದಾಣವೇ ಇಲ್ಲ.
ಈ ಹಿಂದೆ ಹೆದ್ದಾರಿ ನಿರ್ಮಾಣವಾದಾಗ ಇಲ್ಲಿ ಬಸ್ ಬೇ ಸಹಿತ ತಂಗುದಾಣ ಮಾಡ ಲಾಗಿತ್ತು. ಇದೀಗ ಬಸ್ ಪ್ರಯಾಣಿಕರನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಹತ್ತಿಸಿ, ಇಳಿಸಿ ಕೊಂಡರೆ, ಇತ್ತ ಬಸ್ ಬೇ ಜಾಗದಲ್ಲಿ ವಾಹನ ಇಡುವ ಸ್ಥಳವಾಗಿ ಬದಲಾಗಿದೆ.
ಬಿಸಿಲು, ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಿ
ಹೊಸ ಬಸ್ ನಿಲ್ದಾಣ ನಿರ್ಮಿಸಿ ಅಪಾಯಕಾರಿಯಾಗಿ ಬಸ್‌ಗಳು ರಸ್ತೆ ಬದಿ ನಿಲ್ಲುವುದನ್ನು ತಡೆಯಬೇಕು. ಬಿಸಿಲು, ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಮಂಗಳೂರು ಮಹಾನಗ ಪಾಲಿಕೆ ಇದಕ್ಕೆ ಸೂಕ್ತವಾಗಿ ಸ್ಪಂದಿಸುವುದೇ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh; ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಮೂರು ದಿನಗಳ ಭೇಟಿ
World Chess ರೋಚಕ ಫೈನಲ್; ಡಿಂಗ್ ಸೋಲಿಸಿದ ಗುಕೇಶ್: ಅತ್ಯಂತ ಕಿರಿಯ ವಿಶ್ವ ಚಾಂಪಿಯನ್
Panchamasali ಮೀಸಲಾತಿ ಹೋರಾಟದಲ್ಲಿ ಅನಗತ್ಯ ರಾಜಕೀಯ : ಹೆಬ್ಬಾಳ್ಕರ್ ಕಿಡಿ
Captains’ clash: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ; ನಾಯಕನಾಗಿ ಯಾರು ಉತ್ತಮರು?
Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.