Janarinda Nanu Mele Bande movie; ಲೀಲಾವತಿ ಸ್ಮಾರಕದಲ್ಲಿ ಸಿನಿಮಾ ಮುಹೂರ್ತ
Team Udayavani, Dec 12, 2024, 4:33 PM IST
ಇತ್ತೀಚೆಗೆ ಹಿರಿಯ ನಟಿ ಲೀಲಾವತಿ ಅವರ ಪ್ರಥಮ ಪುಣ್ಯಸ್ಮರಣೆ ನಡೆಯಿತು. ಅದೇ ದಿನದಂದು ಲೀಲಾವತಿ ದೇಗುಲದಲ್ಲಿ “ಜನರಿಂದ ನಾನು ಮೇಲೆ ಬಂದೆ’ ಸಿನಿಮಾದ ಮುಹೂರ್ತ ಸಮಾರಂಭವೂ ನೆರವೇರಿದೆ. ನಟ ವಿನೋದ್ ರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು.
ಮಂಜುನಾಥ್ ಸಿನಿಮಾಸ್ ಬ್ಯಾನರ್‌ನಡಿ ಹೇಮಾವತಿ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನವಿಲುಗರಿ ನವೀನ್ ನಿರ್ದೇಶನದ ನಾಲ್ಕನೇ ಹಾಗೂ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಚೆನ್ನೈ ಹಾಗೂ ಮಂಗಳೂರಿನಲ್ಲಿ ನಡೆದ ಘಟನೆಯೊಂದರ ಪ್ರೇರಣೆಯಿಂದ ಈ ಚಿತ್ರದ ಕಥೆ ರಚಿಸಲಾಗಿದೆ. ಡ್ಯಾನ್ ಆಧಾರಿತ ಕಥೆಯಿದಾಗಿದ್ದು, ಸ್ಲಂನಲ್ಲಿ ಜೀವನ ಸಾಗಿಸುತ್ತ ನೃತ್ಯಪಟು ಆಗಬೇಕೆಂದು ಕಷ್ಟಪಡುವ ಹುಡುಗ ಒಂದೆಡೆಯಾದರೆ, ಶಿಕ್ಷಣ ತ್ಯಜಿಸಿ ನೃತ್ಯವನ್ನೇ ಪ್ರಪಂಚ ವಾಗಿಸಿಕೊಂಡ ವಿದ್ಯಾವಂತ ಇನ್ನೊಂದೆಡೆ. ಒಂದೇ ಗುರಿ ಹೊಂದಿದ ಇಬ್ಬರೂ, ಸನ್ನಿವೇಶವೊಂದರಲ್ಲಿ ಭೇಟಿಯಾಗುತ್ತಾರೆ. ಮುಂದೆ ಅವರ ಸಾಧನೆಯ ಹಾದಿ ಹೇಗಿರಲಿದೆ ಎಂಬುದೇ ಚಿತ್ರದ ಕಥಾಹಂದರ.
ಚಿತ್ರದಲ್ಲಿ ಗಂಧರ್ವರಾಜ್ ಶಂಕರ್, ಸೌಂದರ್ಯ, ಕೃತಿ ದಿವಾಕರ್ ನಟಿಸುತ್ತಿದ್ದಾರೆ. ಜೊತೆಗೆ ನೃತ್ಯ ಸಂಯೋಜಕ ಪ್ರಭುದೇವ್ ಅವರ ತಂದೆ ಮೂಗುರು ಸುಂದರ್ ಹಾಗೂ ವಿನೋದ್ ರಾಜಕುಮಾರ್ ಸಹ ನಟಿಸುವ ಸಾಧ್ಯತೆ ಇದೆ. ಪ್ರಣವ್ ಸತೀಶ್ ಅವರ ಸಂಗೀತ, ಜಿ.ವಿ. ರಮೇಶ್ ಛಾಯಾಗ್ರಹಣ, ಗೌತಮ್ ಗೌಡ ಅವರ ಸಂಕಲನ ಚಿತ್ರಕ್ಕಿದೆ. ಮೈಸೂರು, ಚೆನ್ನೈ, ಮಂಗಳೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ayodhya: ಜನವರಿ 11 ರಂದು ರಾಮಮಂದಿರದಲ್ಲಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ
Session: ಅಂದು ಸಚಿವ ಸ್ಥಾನ ಇಲ್ಲವೆಂದಾಗ ಎಸ್.ಎಂ.ಕೃಷ್ಣರ ಮನೆ ಬಾಗಿಲು ಒದ್ದಿದ್ದೆ: ಡಿಕೆಶಿ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Chhattisgarh; ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಮೂರು ದಿನಗಳ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.