Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ


Team Udayavani, Dec 12, 2024, 4:39 PM IST

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಾರಿಗೆ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ, ಸಮರ್ಪಕ ಶೌಚಾಲಯ, ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡು ವಂತಾಗಿದೆ.

ಬೇಗೂರು ಗ್ರಾಮ ಹೋಬಳಿ ಕೇಂದ್ರವಾಗಿದ್ದು, ಸುತ್ತಲ 45 ಗ್ರಾಮಗಳ ಜನರು ಮೈಸೂರು, ಗುಂಡ್ಲುಪೇಟೆಗೆ ತೆರಳಲು ಸಾರಿಗೆ ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಾರೆ. ಜೊತೆಗೆ ಕಬ್ಬಹಳ್ಳಿ, ನಿಟ್ರೆ, ಕುಲಗಾಣ, ಯಡೆಯಾಲ, ಹೊರೆಯಾಲ, ಕೋಟೆಕೆರೆ, ಗರಗನಹಳ್ಳಿ, ಸೋಮಹಳ್ಳಿ, ತಗ್ಗಲೂರು, ರಾಘವಾಪುರ ಸೇರಿದಂತೆ ಇನ್ನಿತರ ಹಲವು ಗ್ರಾಮಸ್ಥರು ಕೂಡ ಪಟ್ಟಣಕ್ಕೆ ಹೋಗಲು ಕೊಂಡಿಯಾಗಿ ಬೇಗೂರು ಬಸ್‌ ನಿಲ್ದಾಣವನ್ನೇ ಅವಲಂಭಿಸಿದ್ದಾರೆ. ಹೀಗಿ ದ್ದರೂ ಕೂಡ ನಿಲ್ದಾಣಕ್ಕೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫ‌ಲ ರಾಗಿದ್ದಾರೆ.

ಜೋರು ಮಳೆಬಂದರೆ ಸೋರುವ ಛಾವಣಿ: ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಬೇಗೂರು ಬಸ್‌ ನಿಲ್ದಾಣ ಸೂಕ್ತ ನಿರ್ವಹಣೆ ಕೊರೆತೆಯಿಂದ ಸೊರಗಿದ್ದು, ಹೆಚ್ಚು ಮಳೆ ಬಂದ ಸಂದರ್ಭದಲ್ಲಿ ಮೇಲ್ಛಾವಣಿಯಿಂದ ನೀರು ಸೋರುತ್ತಿದೆ. ಇದರಿಂದ ಪ್ರಯಾಣಿಕರು ಕೆಳಗೆ ಕುಳಿತುಕೊಳ್ಳಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗಬ್ಬೆದ್ದು ನಾರುವ ಶೌಚಾಲಯ: ಪ್ರತಿನಿತ್ಯ ಬಸ್‌ ನಿಲ್ದಾಣಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗನುಗುಣವಾಗಿ ಮಲ, ಮೂತ್ರ ವಿಸರ್ಜನೆಯ ಬೇಸನ್‌ ಗಳಿಲ್ಲದೆ ಕ್ಯೂನಲ್ಲಿ ನಿಲ್ಲಬೇಕಾಗಿದೆ. ಜೊತೆಗೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಮಹಿಳೆ ಯರು ಶೌಚಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ ವೇಳೆ ಕಗ್ಗತ್ತಲು: ಬಸ್‌ ನಿಲ್ದಾಣದ ಕಟ್ಟಡ ಹೊರತು ಪಡಿಸಿ ಸುತ್ತಲು ವಿದ್ಯುತ್‌ ದೀಪಗಳು ಕೆಟ್ಟು ನಿಂತ ಕಾರಣ ರಾತ್ರಿ ವೇಳೆ ಕಗ್ಗತ್ತಲೆಯಿಂದ ಕೂಡಿದೆ. ನಾಯಿಗಳ ಹಾವಳಿ ಹೆಚ್ಚಿರುವ ಕಾರಣ ಪ್ರಯಾಣಿಕರು ರಾತ್ರಿ ಸಮಯ ನಿಲ್ದಾಣಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ನಿಲುಗಡೆ ಮಾಡದೆ ತೆರಳುವ ಬಸ್‌ಗಳು: ಗುಂಡ್ಲುಪೇಟೆ ಹಾಗು ಮೈಸೂರು ಕಡೆಗೆ ತೆರಳುವ ಬಸ್‌ಗಳು ಎಕ್ಸ್‌ ಪ್ರಸ್‌ ನೆಪದಲ್ಲಿ ಬೇಗೂರು ಬಸ್‌ ನಿಲ್ದಾಣದ ಒಳಗೆ ಬಾರದೆ ತೆರಳುತ್ತಿದ್ದು, ಕೆಲವು ಬಸ್‌ಗಳು ಹೆದ್ದಾರಿಯಲ್ಲಿಯೇ ಜನರನ್ನು ಇಳಿಸಿ ಹೋಗುತ್ತಿವೆ. ಇದರಿಂದ ಬಸ್‌ ಗಾಗಿ ಜನರು ಗಂಟೆಗಟ್ಟಲೇ ಕಾಯುವಂತಾಗಿದೆ.

ದ್ವಿಚಕ್ರ ವಾಹನ ನಿಲುಗಡೆಯಿಲ್ಲ: ದೂರದ ಊರು ಗಳಿಗೆ ತೆರಳುವ ಗ್ರಾಮೀಣ ಪ್ರದೇಶದ ಜನರು ಬೈಕ್‌ ನಲ್ಲಿ ಬೇಗೂರು ಬಸ್‌ ನಿಲ್ದಾಣಕ್ಕೆ ಬಂದರೆ ವಾಹನ ನಿಲುಗಡೆಗೆ ಅವಕಾಶವಿಲ್ಲದ ಕಾರಣ ಅಕ್ಕಪಕ್ಕ ಅಂಗಡಿ, ಹೋಟೆಲ್‌ ಸೇರಿದಂತೆ ಪರಿಚಯಸ್ಥರ ಮನೆಗಳಲ್ಲಿ ನಿಲ್ಲಿಸಿ ತೆರಳುವಂತಾಗಿದೆ.

ಕೆಟ್ಟು ನಿಂತ ಕುಡಿಯುವ ನೀರಿನ ಘಟಕ:

ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿವ ಘಟಕ ಕೆಟ್ಟು ನಿಂತು ತಿಂಗಳೇ ಕಳೆದಿದೆ. ಹೀಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಪಡಿಸುವ ಗೋಜಿಗೆ ಹೋಗದ ಕಾರಣ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆ ತೋರಿದೆ. ಕೆಲವರು ಹಣ ಕೊಟ್ಟು ಬಾಟಲಿ ನೀರು ಕುಡಿಯುವಂತಾಗಿದೆ.

ಕೂರಲು ಆಸನಗಳೇ ಇಲ್ಲ :

ಮೈಸೂರು, ಗುಂಡ್ಲುಪೇಟೆ, ಯಡಿಯಾಲ, ಎಚ್‌.ಡಿ.ಕೋಟೆ ಕಡೆಗೆ ತೆರಳಲು ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಂದರೆ ಕೂರಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲದ ಕಾರಣ ಮರದ ನೆರಳಿನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ. ಅಧಿಕ ಮಂದಿ ಆಗಮಿಸುವ ಸಂದರ್ಭದಲ್ಲಿ ವಿಧಿಯಿಲ್ಲದೆ ಬಿಸಿಲಿನಲ್ಲೆ ನಿಂತು ಬಸ್‌ ಗಾಗಿ ಕಾಯುವಂತಾಗಿದೆ.

ಬೇಗೂರು ಬಸ್‌ ನಿಲ್ದಾಣದಿಂದ ಮೈಸೂರಿಗೆ ತೆರಳುವ ಪ್ರತಿ ಬಸ್‌ಗಳು ಕೂಡ ಗುಂಡ್ಲುಪೇಟೆಯಿಂದ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿವೆ. ಇದರಿಂದ ನಮಗೆ ಬಸ್‌ನಲ್ಲಿ ಸೀಟ್‌ ಸಿಗದೆ ನಿಂತುಕೊಂಡೆ ಪ್ರಯಾಣ ಮಾಡಬೇಕಾಗಿದೆ. ಆದ್ದರಿಂದ ಬೇಗೂರಿನಿಂದಲೇ ಮೈಸೂರು, ನಂಜನಗೂಡಿಗೆ ಪ್ರತ್ಯೇಕ ಬಸ್‌ ವ್ಯವಸ್ಥೆ ಕಲ್ಪಿಸಬೇಕು. -ಶಂಕರನಾಯಕ, ಕೋಟೆಕೆರೆ

ಬೇಗೂರು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೌಕರ್ಯ ನೀಡಬೇಕು. ಇಲ್ಲದಿದ್ದರೆ ಬಸ್‌ಗಳನ್ನು ತಡೆದು ಹೋರಾಟ ನಡೆಸಲಾಗುವುದು. -ರಿಯಾಜ್‌ ಪಾಷಾ, ಕರವೇ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಕೂಡಲೇ ಬೇಗೂರು ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಡಿಯುವ ನೀರು, ಆಸನಗಳ ವ್ಯವಸ್ಥೆ, ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ವಹಿಸಲಾಗುವುದು.-ತ್ಯಾಗರಾಜು, ಡಿಪೋ ವ್ಯವಸ್ಥಾಪಕ, ಗುಂಡ್ಲುಪೇಟೆ  

-ಬಸವರಾಜು ಎಸ್‌.ಹಂಗಳ

ಟಾಪ್ ನ್ಯೂಸ್

Ram Ayodhya

Ayodhya: ಜನವರಿ 11 ರಂದು ರಾಮಮಂದಿರದಲ್ಲಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ

DKS–Ashok

Session: ಅಂದು ಸಚಿವ ಸ್ಥಾನ ಇಲ್ಲವೆಂದಾಗ ಎಸ್‌.ಎಂ.ಕೃಷ್ಣರ ಮನೆ ಬಾಗಿಲು ಒದ್ದಿದ್ದೆ: ಡಿಕೆಶಿ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

1-wewqeqw

World Chess ರೋಚಕ ಫೈನಲ್; ಡಿಂಗ್ ಸೋಲಿಸಿದ ಗುಕೇಶ್: ಅತ್ಯಂತ ಕಿರಿಯ ವಿಶ್ವ ಚಾಂಪಿಯನ್

lakshmi hebbalkar

Panchamasali ಮೀಸಲಾತಿ ಹೋರಾಟದಲ್ಲಿ ಅನಗತ್ಯ ರಾಜಕೀಯ : ಹೆಬ್ಬಾಳ್ಕರ್ ಕಿಡಿ

Virat Kohli- Rohit Sharma; Who is better as a captain?

Captains’ clash: ವಿರಾಟ್‌ ಕೊಹ್ಲಿ- ರೋಹಿತ್‌ ಶರ್ಮಾ; ನಾಯಕನಾಗಿ ಯಾರು ಉತ್ತಮರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕೊಳ್ಳೇಗಾಲ ಮಾಜಿ ಶಾಸಕ, ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ ನಿಧನ

S. Jayanna: ಕೊಳ್ಳೇಗಾಲ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ ನಿಧನ

1-eeeee

Kollegala; ಮೆಕ್ಕೆಜೋಳ ತಿಂದು ಗಂಡಾನೆ ಹೊಲದಲ್ಲೇ ಸಾ*ವು

Bellary Hospital Case: Appropriate action to be taken after committee report: CM Siddaramaiah

Bellary Hospital Case: ಸಮಿತಿ ವರದಿ ಬಂದ ನಂತರ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Ram Ayodhya

Ayodhya: ಜನವರಿ 11 ರಂದು ರಾಮಮಂದಿರದಲ್ಲಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ

DKS–Ashok

Session: ಅಂದು ಸಚಿವ ಸ್ಥಾನ ಇಲ್ಲವೆಂದಾಗ ಎಸ್‌.ಎಂ.ಕೃಷ್ಣರ ಮನೆ ಬಾಗಿಲು ಒದ್ದಿದ್ದೆ: ಡಿಕೆಶಿ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

Amit Shah

Chhattisgarh; ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಮೂರು ದಿನಗಳ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.