Mangaluru: ಬ್ರೇಕ್ ವೈಫಲ್ಯಕ್ಕೀಡಾದ ಬಸ್ ನಿಯಂತ್ರಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ!
Team Udayavani, Dec 13, 2024, 7:15 AM IST
ಮಂಗಳೂರು: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ವಿಶಾಲ್ ಟ್ರಾವೆಲ್ಸ್ ಬಸ್ ಗುರುವಾರ ಬೆಳಗ್ಗೆ ನಗರದ ಬಲ್ಲಾಳ್‌ಬಾಗ್ ಬಳಿ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ 8 ಗಂಟೆ ವೇಳೆಗೆ ಘಟನೆ ನಡೆದಿದ್ದು, ಲಾಲ್‌ಬಾಗ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದುವರಿದ ಬಸ್ ಬಲ್ಲಾಳ್‌ಬಾಗ್ ತಂಗುದಾಣದತ್ತ ಬಂದಿದೆ. ಈ ವೇಳೆ ಚಾಲಕ ಸಿದ್ದಿಕ್ ಎರ್ಮಾಳ್ ಅವರಿಗೆ ಬಸ್ಸಿನ ಬ್ರೇಕ್ ವೈಫಲ್ಯ ಆಗಿರುವುದು ಗೊತ್ತಾಯಿತು. ಕೂಡಲೇ ಬಸ್ಸನ್ನು ರಸ್ತೆಯ ಎಡಕ್ಕೆ ತಿರುಗಿಸಿದ್ದಾರೆ. ಅಲ್ಲಿ ಫುಟ್‌ಪಾತ್ ಮಟ್ಟ ರಸ್ತೆಗಿಂತ ಎತ್ತರದಲ್ಲಿದ್ದು, ಆದರೂ ಬಸ್ಸು ಅದರ ಮೇಲೆ ಹತ್ತಿದೆ.
ಆದರೆ ಹಿಂದಿನ ಚಕ್ರಗಳು ಫುಟ್‌ಪಾತ್ ಮೇಲಕ್ಕೆ ಬರಲು ಸಾಧ್ಯವಾಗದೆ, ಬಸ್ಸು ಮುಂದಕ್ಕೆ ಚಲಿಸದೆ ಅಲ್ಲೇ ನಿಂತಿದೆ. ಬೆಳಗ್ಗಿನ ವೇಳೆಯಾಗಿದ್ದರಿಂದ ಬಸ್ಸಿನಲ್ಲಿ ಸಾಕಷ್ಟು ಮಂದಿ ಪ್ರಯಾಣಿಕರಿದ್ದರು. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ
Mangaluru: ದಿಢೀರ್ ಆಗಿ ಕಾಣಿಸಿಕೊಂಡ ನಟ ಯಶ್
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ
Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Protest: ಆಶಾ ಕಾರ್ಯಕರ್ತೆಯರು ಪ್ರತಿಭಟಿಸದಂತೆ ಮನವೊಲಿಸುವ ಹೊಣೆ ಜಿಲ್ಲಾಧಿಕಾರಿಗಳಿಗೆ
Convention: ಮೊಗವೀರರ ಬೇಡಿಕೆ ಮುಂದಿನ ಬಜೆಟ್‌ನಲ್ಲಿ ಈಡೇರಿಸಲು ಬದ್ಧ: ಸಿದ್ದರಾಮಯ್ಯ
Kerala: ಬಾಲಕಿ ಮೇಲೆ ಅತ್ಯಾಚಾ*ರ: ಕೇರಳ ಯುವಕನಿಗೆ 87 ವರ್ಷ ಶಿಕ್ಷೆ
Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.