Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ

Team Udayavani, Dec 13, 2024, 2:41 AM IST

Bailiuru

ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವತಿಯಿಂದ ಡಿ.14ರಂದು ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಅವಿಭಜಿತ ದ.ಕ.ಜಿಲ್ಲೆಯ ಪ್ರಖ್ಯಾತ ಆಗಮ ಶಾಸ್ತ್ರಜ್ಞರು, ವೇದಮೂರ್ತಿ ಗಳು, ಜಿಲ್ಲೆಯ ತಂತ್ರಿಗಳು ಸಹಿತ ಒಟ್ಟು 500 ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಶತ ಚಂಡಿಕಾಯಾಗ ಆರಂಭಗೊಂಡು 10ಕ್ಕೆ ಪೂರ್ಣಾಹುತಿ ನಡೆಯಲಿದೆ. ಶತಚಂಡಿಕಾಯಾಗದಲ್ಲಿ 150ಕ್ಕಿಂತ ಅಧಿಕ ಮಂದಿ ಸೇವಾಕರ್ತರು ಸ್ವತಃ ಸಂಕಲ್ಪಮಾಡಿ ಪೂರ್ಣಹುತಿಗೆ ತಾವೇ ಪರಿಕರಗಳನ್ನು ಸಮರ್ಪಿಸಲಿದ್ದಾರೆ.

ಸಾರ್ವಜನಿಕರು ಕೂಡ ತಾವು ತಂದ ಪರಿಕರಗಳನ್ನು ಅರ್ಪಿಸಬಹುದು. ದುರ್ಗಾರತಿಗೆ ಮಹಿಳೆಯರಿಂದಲೇ ವಿಶೇಷ ಕೌಂಟರ್‌, ಪ್ರಸಾದ ವಿತರಣೆಗೆ ಕೌಂಟರ್‌, ಮಾಹಿತಿ ಕೇಂದ್ರ, ದೇವರಿಗೆ ಸೇವೆ ಸಲ್ಲಿಸಲು ಕೌಂಟರ್‌ ತೆರೆಯಲಾಗಿದೆ. ದೇವಸ್ಥಾನದ ಉತ್ತರ ಬದಿಯ ಮುದ್ದಣ್ಣ ಎಸ್ಟೇಟ್‌, ದಕ್ಷಿಣ ಭಾಗದಲ್ಲಿ ಪಶುಸಂಗೋಪನ ಆಸ್ಪತ್ರೆಯ ಆವರಣ, ಪಶ್ಚಿಮ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಅಲ್ಲಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ, 500 ಸ್ವಯಂ ಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಆಗಮಿಸಲಿ ದ್ದಾರೆ. ದೇವಸ್ಥಾನ ಪ್ರಾಂಗಣ ದಲ್ಲಿ ರೋಹಿತ್‌ ಮುದ್ದಣ್ಣ ಶೆಟ್ಟಿ ಸಭಾಂ ಗಣ, ಅನ್ನಪೂರ್ಣ ಭೋಜನ ಶಾಲೆ, ವಾಸುದೇವ ಕೃಪಾ ಶಾಲೆಯ ಆವರಣದಲ್ಲಿ ಕುಳಿತುಕೊಂಡು ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.

ವಿವಿಧ ಖಾದ್ಯದೊಂದಿಗೆ ಪಂಚ ಭಕ್ಷ್ಯ ಪರಮಾನವಿದ್ದು, ಮಧ್ಯಾಹ್ನ 12ಕ್ಕೆ ಅನ್ನಪ್ರಸಾದ ಆರಂಭವಾಗಲಿದೆ. ಸುಮಾರು 15ರಿಂದ 20 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮುದ್ದಣ್ಣ ಶೆಟ್ಟಿ ತಿಳಿಸಿದ್ದಾರೆ.

ಸಹಸ್ರಾರು ಮಹಿಳೆಯರಿಂದ ಏಕಕಾಲದಲ್ಲಿ ದುರ್ಗಾರತಿ
ಜಿಲ್ಲೆಯ ದೇವಸ್ಥಾನಗಳ ಇತಹಾಸದಲ್ಲೇ ಪ್ರಥಮ ಬಾರಿಗೆ ಅದೇ ದಿನ ಸಂಜೆ 6ಕ್ಕೆ ಸಹಸ್ರಾರು ಮಹಿಳೆಯರಿಂದ ಏಕಕಾಲದಲ್ಲಿ ದುರ್ಗಾರತಿ ನಡೆಯಲಿದೆ. ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ಮುಂಗಡವಾಗಿ ತಮ್ಮ ಹೆಸರು ನೋಂದಾಯಿಸಬೇಕು. ಆರತಿ ತಟ್ಟೆಯನ್ನು ದೇವಸ್ಥಾನದ ವತಿಯಿಂದಲೇ ಒದಗಿಸಲಾಗುವುದು. ಮಹಿಳೆಯರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಅರ್ಥಿಕ ಸಮಿತಿ ಸಂಚಾಲಕ ರಮೇಶ್‌ ಶೆಟ್ಟಿ ಕಳತ್ತೂರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

KSRT

ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !

1-hindaaaa

Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು

POlice

Sullia: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದು ಕಿಡಿಗೇಡಿ ಪರಾರಿ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

9

Dhaka; ವರ್ಷಾಂತ್ಯಕ್ಕೆ ಬಾಂಗ್ಲಾ ಸಂಸತ್‌ ಚುನಾವಣೆ ಸಾಧ್ಯತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

puttige

Udupi;ಗೀತಾರ್ಥ ಚಿಂತನೆ 147:ಪ್ರತ್ಯಕ್ಷ ಪ್ರಮಾಣ ಮಾತ್ರದಿಂದಲೇ ಜಗದ್ವ್ಯವಹಾರ ಅಸಾಧ್ಯ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

1-hindaaaa

Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು

KSRT

ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !

POlice

Sullia: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದು ಕಿಡಿಗೇಡಿ ಪರಾರಿ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.