Mangaluru: 166 ಎಕ್ರೆ ಜಮೀನು ದಲಿತರಿಗೆ ಹಂಚಲು ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಿ ಪತ್ರ

ಪರಿಶಿಷ್ಟ ಜಾತಿ, ಪಂಗಡದ ಮುಖಂಡರ ಕುಂದುಕೊರತೆ ಸಭೆ

Team Udayavani, Dec 13, 2024, 3:26 AM IST

DK-ScSt-Met

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಕೆಯಾದ166 ಎಕ್ರೆ ಡಿ.ಸಿ. ಮನ್ನಾ (ಡಿಪ್ರಸ್ಡ್ ಕ್ಲಾಸ್‌) ಜಮೀನನ್ನು ಪ. ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡುವಂತೆ ದಲಿತ ನಾಯಕರು ಆಗ್ರಹಿಸಿದ್ದು, ಈ ಬಗ್ಗೆ ಪಿಟಿಸಿಎಲ್‌ ಕಾಯ್ದೆಯಡಿ ನಿಯಮ ರೂಪಿಸಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಮುಲ್ಲೈ  ಮುಗಿಲನ್‌ ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ /ಪಂಗಡದ ಮುಖಂಡರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಸಂಸ ಮುಖಂಡ ದೇವದಾಸ್‌ ಎಂ. ವಿಷಯ ಪ್ರಸ್ತಾವಿಸಿ, ಅವಿಭಜಿತ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಲ್ಲೇ ಪ್ರತಿ ಗ್ರಾಮದಲ್ಲೂ ಪ.ಜಾತಿ ಮತ್ತು ಪಂಗಡದವರಿಗೆ ಭೂಮಿಯನ್ನು ಮೀಸಲಿಡಲಾಗಿತ್ತು. ಅನೇಕ ದಲಿತ ಕುಟುಂಬಗಳಿಗೆ ಇನ್ನೂ ಈ ಭೂಮಿ ಹಂಚಿಕೆಯಾಗಿಲ್ಲ. ಸಾಕಷ್ಟು ಭೂಮಿ ಒತ್ತುವರಿಯಾಗಿದ್ದು, ಅನ್ಯ ಕಾರ್ಯಕ್ಕೂ ಬಳಕೆಯಾಗಿದೆಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಈಗಾಗಲೇ ಸರಕಾರ ಮಟ್ಟದಲ್ಲೂ ಸಭೆ ನಡೆದಿದೆ. ಪ್ರತ್ಯೇಕ ನಿಯ ಮಾವಳಿಗೆ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಸರಕಾರದ ಕಾರ್ಯ ದರ್ಶಿಯವರು ಹಂಚಿಕೆಗೆ ಪತ್ರ ಬರೆದಿದ್ದಾರೆ. ಪಿಟಿಸಿಎಲ್‌ ಕಾಯ್ದೆ (ಪರಿಶಿಷ್ಟರಿಗಾಗಿ ಇರುವ ಕೆಲವು ಭೂಮಿಗಳ ವರ್ಗಾ ವಣೆ ನಿಷೇಧ ಕಾಯ್ದೆ 1978)ಯಡಿ ನಿಯಮಾವಳಿ ರೂಪಿಸಲು ಸರಕಾರಕ್ಕೆ ಪತ್ರ ಬರೆಯಲಾಗುವುದು. ಜತೆಗೆ ಅರ್ಹರ ಪಟ್ಟಿ ರೂಪಿಸಲು ತಹಶೀಲ್ದಾ ರರಿಗೆ ತಿಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 8,509 ಎಕ್ರೆ ಡಿಸಿ ಮನ್ನಾ ಭೂಮಿ ಗುರುತಿಸಿದ್ದು, 5,698 ಎಕ್ರೆಯನ್ನು ಪ. ಜಾತಿ ಹಾಗೂ ಪಂಗಡದವರಿಗೆ 625 ಎಕ್ರೆ ಇತರರಿಗೆ, 382 ಎಕ್ರೆ ಡೀಮ್ಡ್ ಫಾರೆಸ್ಟ್‌ಗಾಗಿ, 195 ಎಕ್ರೆ ಗೇರು ಅಭಿವೃದ್ಧಿಗಾಗಿ, 238 ಎಕ್ರೆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಹಾಗೂ 226 ಇತರ ಉದ್ದೇಶಕ್ಕೆ ಬಳಕೆಯಾಗಿದೆ. ಉಳಿಕೆ 1,143 ಎಕ್ರೆಯಲ್ಲಿ 977 ಅತಿಕ್ರಮ ಣವಾಗಿದ್ದು, ಈಗ 166 ಎಕ್ರೆ ಭೂಮಿ ಉಳಿದಿದೆ ಎಂದು ಡಿಸಿ ವಿವರಿಸಿದರು.

ದಲಿತ ಮುಖಂಡರಾದ ಶೇಖರ್‌ ಕುಕ್ಕೇಡಿ, ಈಶ್ವರಿ, ವಿಶ್ವನಾಥ್‌ಪ್ರೇಮ ನಾಥ್‌ ಸಹಿತ ಹಲವರು ವಿವಿಧ ಮನವಿ ಸಲ್ಲಿಸಿದರು.ಜಿ.ಪಂ. ಸಿಇಒ ಡಾ. ಆನಂದ್‌, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌, ಡಿಎಫ್ಒ ಆ್ಯಂಟನಿ ಮರಿಯಪ್ಪ ಮತ್ತಿತರರಿದ್ದರು.

ವೆನ್ಲಾಕ್‌ನಲ್ಲಿ ಸಹಾಯವಾಣಿ ಕೇಂದ್ರ ರಚನೆ
ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಕೆಲವು ಔಷಧಗಳನ್ನು ಹೊರಗಿನಿಂದ ತರುವಂತೆ ಒತ್ತಡ ಹೇರುತ್ತಾರೆ. ಕೆಲವು ಪ್ರಕರಣಗಳಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಸ್ಕ್ಯಾನಿಂಗ್‌ ವ್ಯವಸ್ಥೆಯೂ ಸಮರ್ಪಕ ವಾಗಿಲ್ಲ ಎಂದು ದಲಿತ ಮುಖಂಡ ರಘು ಎಕ್ಕಾರು ಸಭೆಯಲ್ಲಿ ಹೇಳಿದರು. ಜಿಲ್ಲಾಧಿಕಾರಿಯವರು ಉತ್ತರಿಸಿ, ವೆನ್ಲಾಕ್‌ಗೆ ಸಂಬಂಧಿಸಿ ಈಗಾಗಲೇ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ನೇರವಾಗಿ ದೂರು ನೀಡಲು 24 ಗಂಟೆಗಳ ಕಾಲ್‌ ಸೆಂಟರ್‌ ವಾರದೊಳಗೆ ಕಾಲ್‌ ಸೆಂಟರ್‌ ಕಾರ್ಯಾಚರಿಸಲಿದೆ ಎಂದರು.

ಟಾಪ್ ನ್ಯೂಸ್

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Australian Open 2025: ಮೊದಲ ದಿನವೇ ಮಳೆ ಆಟ

Australian Open 2025: ಮೊದಲ ದಿನವೇ ಮಳೆ ಆಟ

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣVijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

8(1

Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ

7

Belman: ಕರಿಯತ್ತಲಗುಂಡಿ ನೇಪಥ್ಯಕ್ಕೆ ಸರಿದ ಅಣೆಕಟ್ಟು !

6

Ajekar: ಎಷ್ಟು ದಿನ ಟವರ್‌ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್‌ ಕೊಡಿ ಸ್ವಾಮಿ!

5

Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Dehradun ಉತ್ತರಾಖಂಡ: ಕಮರಿಗೆ ಬಸ್‌ ಉರುಳಿ 5 ಮಂದಿ ಸಾವು

Australian Open 2025: ಮೊದಲ ದಿನವೇ ಮಳೆ ಆಟ

Australian Open 2025: ಮೊದಲ ದಿನವೇ ಮಳೆ ಆಟ

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣVijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.