Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ
Team Udayavani, Dec 13, 2024, 12:05 PM IST
ಹೊಳೆಹೊನ್ನೂರು: ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಘಟನೆ 1: ಹೊಳೆಹೊನ್ನೂರು ಮಲ್ಲಾಪುರ ಬಳಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೈಕೊಂಡು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ಯುವಕನನ್ನು ಹೊನ್ನಾಳಿ ತಾಲೂಕು ಲಿಂಗಪುರ ಗ್ರಾಮದ ಭುವನ (18ವರ್ಷ) ಎನ್ನಲಾಗಿದ್ದು, ಮೃತ ಯುವಕನಿಗೆ ತಾಯಿ ಹಾಗು ತಂಗಿ ಮಾತ್ರ ಇದ್ದು ತಂದೆ 2 ವರ್ಷಗಳ ಹಿಂದೆ ಮರಣ ಹೊಂದಿದ್ದು ತಾಯಿಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ, ಗೋಬಿ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಗ ಮನೆಗೆ ಆಸರೆ ಆಗುವನೆಂಬ ಆಶಯದೊಂದಿಗೆ ಕಾಯುತ್ತಿದ್ದ ತಾಯಿಗೆ ಆಘಾತಕಾರಿ ಸುದ್ದಿ ಬರ ಸಿಡಿಲು ಬಡಿದಂತಾಗಿದೆ.
ಘಟನೆ 2: ಇನ್ನೊಂದು ಘಟನೆಯಲ್ಲಿ ನಾಗಸಮುದ್ರ ಸಮೀಪ ಕಾರು ಹಾಗೂ ಬೈಕ್ ನಡುವೆ ನಡೆದ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ,
ಮೃತ ಯುವಕನನ್ನು ಸಾಗರ (25) ಎನ್ನಲಾಗಿದೆ.
ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಿಂದ ಶಿವಮೊಗ್ಗದ ಕಡೆ ಬರುತಿದ್ದ ಕಾರು ಹಾಗು ಸಣ್ಯಸಿಕೊಡಮಗ್ಗೆ ಕಡೆಯಿಂದ ನಾಗಸಮುದ್ರ ಕಡೆ ಬರುತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ, ಮೃತ ಸಾಗರ್ ಸನ್ಯಾಸಿ ಕೊಡಮಗ್ಗೆ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BMTC: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
Renukaswamy Case: ದರ್ಶನ್, ಪವಿತ್ರಾಗೌಡಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
Chikkamagaluru: ಲಾಠಿಚಾರ್ಜ್ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ
Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ
Pakistan: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ʼಮತ್ತೆʼ ವಿದಾಯ ಹೇಳಿದ ಪಾಕಿಸ್ತಾನದ ಆಲ್‌ರೌಂಡರ್
Atul Subhash ಪ್ರಕರಣ; ಯುಪಿಯಲ್ಲಿರುವ ಪತ್ನಿಯ ಮನೆಗೆ ನೋಟಿಸ್ ಅಂಟಿಸಿದ ಬೆಂಗಳೂರು ಪೊಲೀಸರು
Gangolli Election:ಗಂಗೊಳ್ಳಿ ಗ್ರಾ.ಪಂ. ಚುನಾವಣೆಯಲ್ಲಿ ಕೈ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.