Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

Team Udayavani, Dec 13, 2024, 1:09 PM IST

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಇದರೊಂದಿಗೆ ಅಲ್ಲು ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.
ಪುಷ್ಪ-2 ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ತೆಲಂಗಾಣ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಸೇರಿದಂತೆ ಚಿತ್ರ ಮಂದಿರದ ಮಾಲಕ ಸೇರಿ ಚಿತ್ರ ತಂಡದ ಮೇಲೆ ಕೇಸ್ ದಾಖಲಾಗಿತ್ತು. ಅದರಂತೆ ಚಿಕ್ಕಡಪಲ್ಲಿ ಪೊಲೀಸರು ಇಂದು ಬೆಳಗ್ಗೆ ನಟನನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: BGT 2024: ಮೂರನೇ ಟೆಸ್ಟ್‌ ಗೆ ಆಡುವ ಬಳಗ ಪ್ರಕಟಿಸಿದ ಆಸೀಸ್;‌ ಒಂದು ಪ್ರಮುಖ ಬದಲಾವಣೆ

ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ ೨ ಚಿತ್ರದ ಪ್ರೀಮಿಯರ್ ಶೋ ನಡೆಸಲು ನಿರ್ಧರಿಸಲಾಗಿತ್ತು ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳ ದಂಡೇ ಚಿತ್ರ ಮಂದಿರದ ಬಳಿ ನೆರೆದಿತ್ತು ಅದರಂತೆ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದರು ಬುಧವಾರ ರಾತ್ರಿ ಸುಮಾರು 10;30 ಸುಮಾರಿಗೆ ಚಿತ್ರದ ಪ್ರೀಮಿಯರ್ ಶೋ ನಡೆಯುತಿದ್ದ ವೇಳೆ ನಟ ಅಲ್ಲು ಅರ್ಜುನ್ ಚಿತ್ರ ಮಂದಿರಕ್ಕೆ ಭೇಟಿ ನೀಡುತ್ತಾರೆ ಇದರಿಂದ ಅಲ್ಲಿದ್ದ ಅಭಿಮಾನಿಗಳು ತನ್ನ ನೆಚ್ಚಿನ ನಟನ ಜೊತೆ ಫೋಟೋ ತೆಗಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ ಈ ವೇಳೆ ಅಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ಜನ ಓಡುವ ವೇಳೆ ಕಾಲ್ತುಳಿತ ಸಂಭವಿಸಿದೆ ಈ ವೇಳೆ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಇನ್ನು ಅಲ್ಲು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡದೇ ಚಿತ್ರ ಮಂದಿರಕ್ಕೆ ಪ್ರವೇಶ ಮಾಡಿದ್ದು ಇದರಿಂದ ಭದ್ರತಾ ವ್ಯವಸ್ಥೆಗೆ ಬೇಕಾದಷ್ಟು ಮಂದಿ ಪೊಲೀಸ್ ಸಿಬಂದಿಗಳು ಇರದೇ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ಅರ್ಜುನ್‌ ಸೇರಿ, ಚಿತ್ರತಂಡ ಹಾಗೂ ಥಿಯೇಟರ್‌ ಮಾಲೀಕ, ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಇತ್ತೀಚೆಗೆ ಸಂಧ್ಯಾ ಥಿಯೇಟರ್ ಮಾಲೀಕ ಎಂ.ಸಂದೀಪ್, ವ್ಯವಸ್ಥಾಪಕ ಎಂ. ನಾಗರಾಜು ಹಾಗೂ ಭದ್ರತಾ ಮುಖ್ಯಸ್ಥ ಗಂಧಕಂ ವಿಜಯ್ ಚಂದರ್ ಅವರನ್ನು ಬಂಧಿಸಲಾಗಿತ್ತು.

ಹೈಕೋರ್ಟ್‌ ಮೆಟ್ಟಿಲೇರಿದ್ದ ನಟ:
ಇನ್ನು ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ನಟ ಅಲ್ಲು ಅರ್ಜುನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಟಾಪ್ ನ್ಯೂಸ್

KSRT

ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !

1-hindaaaa

Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು

POlice

Sullia: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದು ಕಿಡಿಗೇಡಿ ಪರಾರಿ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

9

Dhaka; ವರ್ಷಾಂತ್ಯಕ್ಕೆ ಬಾಂಗ್ಲಾ ಸಂಸತ್‌ ಚುನಾವಣೆ ಸಾಧ್ಯತೆ?

police crime

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hindaaaa

Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು

KSRT

ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !

POlice

Sullia: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದು ಕಿಡಿಗೇಡಿ ಪರಾರಿ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.