Chikkamagaluru: ದತ್ತ ಜಯಂತಿ ಶೋಭಾಯಾತ್ರೆ ಆರಂಭ

Team Udayavani, Dec 13, 2024, 5:30 PM IST

Chikkamagaluru: Datta Jayanti Shobhayatra begins

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಂಘಟನೆಗಳಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಹಿನ್ನಲೆಯಲ್ಲಿ ಶುಕ್ರವಾರ (ಡಿ.13) ಶೋಭಾಯಾತ್ರೆ ನಡೆಸಲಾಯಿತು.

ನಗರದ ಕಾಮಧೇನು ಗಣಪತಿ ದೇವಳ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಎಚ್ ಪಿ ಮುಖಂಡ ರಘು‌ ಸಕಲೇಶಪುರ ಸಾಥ್ ನೀಡಿದರು.

ಕಾಮಧೇನು ಗಣಪತಿ ದೇವಳ ಆವರಣದಿಂದ ಆರಂಭವಾದ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ರಸ್ತೆಯಲ್ಲಿ ಹನುಮಂತಪ್ಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರು ಕುಣಿದು ಕುಪ್ಪಳಿಸಿದರು. ಜನರು ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.

ಇಲ್ಲಿಂದ ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಅಂಡೇಛತ್ರ ದಾಟಿ ಆಜಾದ್ ಪಾರ್ಕ್ ವೃತ್ತ ತಲುಪಲಿದೆ. ಶೋಭಾಯಾತ್ರೆಯಲ್ಲಿ ಮಂಗಳವಾದ್ಯ, ಗೊಂಬೆ ಕುಣಿತ ಆಕರ್ಷಣೀಯವಾಗಿತ್ತು.

ಮೆರವಣಿಗೆ ಸಾಗುತ್ತಿದ್ದಂತೆ ವಾಹನದಲ್ಲಿ ಸಾಗಿ ಬಂದ ಡಿ.ಜೆ.ಸದ್ದಿಗೆ ಮಹಿಳೆಯರು, ವೃದ್ಧರಾದಿಯಾಗಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಶೋಭಾಯಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಸ್ ಪಿ ಡಾ.ವಿಕ್ರಮ್ ಅಮಟೆ ಭದ್ರತೆ ನೇತೃತ್ವ ವಹಿಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಸಿಸಿ ಕ್ಯಾಮರ ಕಣ್ಗಾವಲಿನಲ್ಲಿ ಮೆರವಣಿಗೆ ಸಾಗಿತು.

ಟಾಪ್ ನ್ಯೂಸ್

D. K. Shivakumar: ಬೆಳಗಾವಿಯಿಂದಲೇ 2028ರ ಚುನಾವಣಾ ರಣಕಹಳೆ

D. K. Shivakumar: ಬೆಳಗಾವಿಯಿಂದಲೇ 2028ರ ಚುನಾವಣಾ ರಣಕಹಳೆ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

ಕಲ್ಲು ಕೋರೆಗಳ ಪುನರಾರಂಭಕ್ಕೆ ಶಾಸಕರ ನಿಯೋಗ ಆಗ್ರಹ

Udupi District: ಕಲ್ಲು ಕೋರೆಗಳ ಪುನರಾರಂಭಕ್ಕೆ ಶಾಸಕರ ನಿಯೋಗ ಆಗ್ರಹ

court

Allahabad High Court judge ವಿರುದ್ಧ ವಿಪಕ್ಷ ವಾಗ್ಧಂಡನೆ ನೋಟಿಸ್‌

1-raj

Constitution ರಚನೆಗೆ ಕಾರಣರಾದವರನ್ನು ನಿರ್ಲಕ್ಷಿಸಿದ ಕಾಂಗ್ರೆಸ್‌: ರಾಜನಾಥ್‌ ವಾಗ್ಧಾಳಿ

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

1-odi

ODI; ಮೊದಲ ಪಂದ್ಯದಲ್ಲೇ ಜಂಗೂ ಶತಕ : ವಿಂಡೀಸ್‌ ಕ್ಲೀನ್‌ಸ್ವೀಪ್‌ ಸಾಹಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

c-t-ravi

Chikkamagaluru: ಲಾಠಿಚಾರ್ಜ್‌ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ

Chikkamagaluru: Anusuya Jayanti Sankirtana Yatra on the occasion of Datta Jayanti

Chikkamagaluru: ದತ್ತಜಯಂತಿ ಪ್ರಯುಕ್ತ ಅನುಸೂಯ ಜಯಂತಿ ಸಂಕೀರ್ತಾನ ಯಾತ್ರೆ

1-wbali

Koppa; ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾ*ವು

ಎಸ್.ಎಂ.ಕೃಷ್ಣ ನಿಧನಕ್ಕೆ ಬಾಳೆಹೊನ್ನೂರು ಶ್ರೀ ಸಂತಾಪ

Chikkamagaluru: ಎಸ್.ಎಂ.ಕೃಷ್ಣ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಶ್ರೀ ಸಂತಾಪ

Coral Snake: ಕಾಫಿನಾಡಲ್ಲಿ ಅಪರೂಪದ ರಕ್ತಕನ್ನಡಿ ಹಾವು ಪತ್ತೆ

Coral Snake: ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

D. K. Shivakumar: ಬೆಳಗಾವಿಯಿಂದಲೇ 2028ರ ಚುನಾವಣಾ ರಣಕಹಳೆ

D. K. Shivakumar: ಬೆಳಗಾವಿಯಿಂದಲೇ 2028ರ ಚುನಾವಣಾ ರಣಕಹಳೆ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

ಕಲ್ಲು ಕೋರೆಗಳ ಪುನರಾರಂಭಕ್ಕೆ ಶಾಸಕರ ನಿಯೋಗ ಆಗ್ರಹ

Udupi District: ಕಲ್ಲು ಕೋರೆಗಳ ಪುನರಾರಂಭಕ್ಕೆ ಶಾಸಕರ ನಿಯೋಗ ಆಗ್ರಹ

court

Allahabad High Court judge ವಿರುದ್ಧ ವಿಪಕ್ಷ ವಾಗ್ಧಂಡನೆ ನೋಟಿಸ್‌

1-raj

Constitution ರಚನೆಗೆ ಕಾರಣರಾದವರನ್ನು ನಿರ್ಲಕ್ಷಿಸಿದ ಕಾಂಗ್ರೆಸ್‌: ರಾಜನಾಥ್‌ ವಾಗ್ಧಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.