Valedictory: ಕಠಿನ ಪರಿಶ್ರಮದಿಂದ ಮಾತ್ರವೇ ವಿದ್ಯಾರ್ಥಿಗಳ ಕನಸು ನನಸಾಗಲು ಸಾಧ್ಯ: ಬಿಷಪ್‌

ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜು; ಸುವರ್ಣ ಮಹೋತ್ಸವ ಸಮಾರೋಪ

Team Udayavani, Dec 13, 2024, 9:40 PM IST

Shirva-Saint-1

ಶಿರ್ವ: ಹೆತ್ತವರು ಮಕ್ಕಳ ಸುಪ್ತ ಪ್ರತಿಭೆ,ಆಸಕ್ತಿಯನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದಾಗ ಬೆಳವಣಿಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವ ಸಾಮರ್ಥ್ಯದ ಬಗ್ಗೆ ಚಿಂತನೆ ನಡೆಸಿ, ಮಾನಸಿಕ ಸ್ಥೈರ್ಯ ಬೆಳೆಸಿಕೊಂಡು ಅವಿರತ ಶ್ರಮ, ಏಕಾಗ್ರತೆಯೊಂದಿಗೆ ಕಠಿನ ಪರಿಶ್ರಮ ನಡೆಸಿದಲ್ಲಿ ಜೀವನದಲ್ಲಿ ಕಂಡ ಕನಸು ನನಸಾಗಿಸಲು ಸಾಧ್ಯ ಎಂದು ಉಡುಪಿ ಕೆಥೋಲಿಕ್‌ ಧರ್ಮಪ್ರಾಂತ್ಯದ ಬಿಷಪ್‌ ಡಾ.ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು.

ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮೊನ್ಸಿಂಜೊರ್‌ ಹಿಲರಿ ಗೊನ್ಸಾಲ್ವಿಸ್‌ ರಂಗ ಮಂಟಪದಲ್ಲಿ ನಡೆದ ಕಾಲೇಜು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥಾಪಕರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ ಕೆಥೋಲಿಕ್‌ ಶಿಕ್ಷಣ ಸಂಸ್ಥೆಗಳು ಜಾತಿ,ಮತ ಧರ್ಮದ ಬೇಧವಿಲ್ಲದೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾಭ್ಯಾಸದ ಬೆಳಕನ್ನು ಸಮಾಜಕ್ಕೆ ನೀಡುವ ಕೆಲಸ ಮಾಡುತ್ತಿವೆ ಎಂದು ಹೇಳಿದರು. ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ ಪರಿಷತ್‌ ಕಲಾಪದಲ್ಲಿದ್ದು,ಮಾಧ್ಯಮದ ಮೂಲಕ ಸಂದೇಶ ನೀಡಿ ಶುಭ ಹಾರೈಸಿದರು.

ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರನ್ನು ಸಮ್ಮಾನಿಸಲಾಯಿತು. ಸಿ|ಬ್ರಿಜಿತ್‌ ಮಾಡ್ತಾ ಸಮ್ಮಾನಿತರ ಪರಿಚಯ ಮಾಡಿದರು. ಸುವರ್ಣ ಮಹೋತ್ಸವದ ದಾನಿಗಳನ್ನು ,ಕಟ್ಟಡ ದುರಸ್ತಿಯಲ್ಲಿ ಸಹಕರಿಸಿದವರನ್ನು ಹಾಗೂ ಸಂಸ್ಥಾಪಕರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದ ಉಪನ್ಯಾಸಕಿ ಮರಿಯಾ ಜೆಸಿಂತಾ ಫುರ್ಟಾಡೊ ಅವರನ್ನು ಗೌರವಿಸಲಾಯಿತು. ಡಾ| ಒಲಿವಿಟಾ ಜೂಲಿಯಾನಾ ಡಿಸೋಜಾ ದಾನಿಗಳ ಪಟ್ಟಿ ವಾಚಿಸಿದರು.

ಕೆಥೊಲಿಕ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಂ|ವಿನ್ಸೆಂಟ್‌ ಕ್ರಾಸ್ತಾ ಕಾಲೇಜಿನಲ್ಲಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳ ತಂಡವನ್ನು ಅಭಿನಂದಿಸಿ ಮಾತನಾಡಿದರು. ಸುವರ್ಣ ಮಹೋತ್ಸವ ಸಂಚಿಕೆ ಗೋಲ್ಡನ್‌ ಕ್ರಾನಿಕಲ್ಸ್‌ ಬಿಡುಗಡೆ ಮಾಡಲಾಯಿತು.

ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ಪೂಜಾರಿ , ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ|ಅನಿಲ್‌ ರೊಡ್ರಿಗಸ್‌,ವಂ|ರೋನ್ಸನ್‌ ಪಿಂಟೊ, ಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್‌ ಐವನ್‌ ಮೋನಿಸ್‌,ಡಾನ್‌ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ| ರೋಲ್ವಿನ್‌ ಅರಾನ್ಹಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಬಿನಾ ಪ್ರಿಯಾ ನೊರೊನ್ಹಾ, ಡೊನ್‌ ಬೊಸ್ಕೊ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್‌ ಲೋಬೋ,ನೇಟಿವಿಟಿ ಕಾನ್ವೆಂಟ್‌ನ ಸಿ|ಡಯಾನಾ ಲೋಬೋ,ಆಕ್ಸಿಲಿಯಂ ಕಾನ್ವೆಂಟ್‌ನ ಸಿ| ಲೀಮಾ ಲೋಬೋ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪೌಲಿನ್‌ ಪಿರೇರಾ, ವಿದ್ಯಾರ್ಥಿ ನಾಯಕರಾದ ಪ್ರಥ್ವಿ ಮತ್ತು ಚಾರಿತ್ರ್ಯ ವೇದಿಕೆಯಲ್ಲಿದ್ದರು.

ಕಾಲೇಜಿನ ಸಂಚಾಲಕ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್‌ ಡಿಸೋಜಾ ,ಸಂಚಾಲಕ ನೋರ್ಬರ್ಟ್‌ ಮಚಾದೊ, ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್‌ ಆರಾನ್ಹ ಮತ್ತು ಕಾಲೇಜಿನ ಪ್ರಾಂಶುಪಾಲ ಜಯಶಂಕರ್‌.ಕೆ ಅವರನ್ನು ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೋ ಸಮ್ಮಾನಿಸಿದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಚರ್ಚ್‌ಪಾಲನ ಮಂಡಳಿಯ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಧರ್ಮಭಗಿನಿಯರು,ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಂಶುಪಾಲ ಜಯಶಂಕರ್‌.ಕೆ ಕಾಲೇಜಿನ 50 ವರ್ಷಗಳ ಸಾಧನೆಯ ವಿವರ ನೀಡಿದರು. ಸಂಚಾಲಕ ನೋರ್ಬರ್ಟ್‌ ಮಚಾದೊ ಸ್ವಾಗತಿಸಿದರು. ಎಡ್ವರ್ಡ್‌ಲಾರ್ಸನ್‌ ಡಿಸೋಜಾ ಮತ್ತು ಗ್ಲೆನಿಷಾ ರೇಷ್ಮಾ ಮೆಂಡೋನ್ಸಾ ನಿರೂಪಿಸಿ, ಕಾರ್ಯದರ್ಶಿ ಜೆಸಿಂತಾ ಐರಿನ್‌ ಡಿಸೋಜಾ ವಂದಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

PGR-Scindia

Mudubidire: ಭಾರತ್‌ ಸ್ಕೌಟ್ಸ್‌-ಗೈಡ್ಸ್‌ ರಾಜ್ಯ ತಂಡಕ್ಕೆ ರಾಷ್ಟ್ರದಲ್ಲೇ ಮೊದಲ ಸ್ಥಾನ

Santosh Lad: ಒನ್‌ ನೇಶನ್‌ ಒನ್‌ ಎಲೆಕ್ಷನ್‌, ನೆಹರೂ ಕಾಲದಲ್ಲೇ ವಿಫ‌ಲ

Santosh Lad: ಒನ್‌ ನೇಶನ್‌ ಒನ್‌ ಎಲೆಕ್ಷನ್‌, ನೆಹರೂ ಕಾಲದಲ್ಲೇ ವಿಫ‌ಲ

Karvali-utsava

Mangaluru: ಈ ಬಾರಿ ಜನಾಕರ್ಷಣೆಯ ಕರಾವಳಿ ಉತ್ಸವಕ್ಕೆ ಒತ್ತು ನೀಡಿ: ಸಚಿವ ದಿನೇಶ್, ಖಾದರ್‌

Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ

Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ

ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು

Assembly Session: ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

theft

Brahmavara: ನೀಲಾವರ ಗ್ರಾಮ: ಸರ ಕಸಿದು ಪರಾರಿ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

Udupi-DC-Dr.-Vidya-kumari

Udupi: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ: ಜಿಲ್ಲಾಧಿಕಾರಿ ಸೂಚನೆ

1-rss

Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ

9

Udupi ಬೀದಿಗಳಲ್ಲಿ ತಾಳೆ ಬೊಂಡ ವ್ಯಾಪಾರ ಜೋರು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Sulya-Car

Sulya: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Arrest

Mangaluru: ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Suside-Boy

Ullala: ಗ್ಯಾಸ್‌ ಸೋರಿಕೆ: ಚಿಕಿತ್ಸೆ ಫಲಿಸದೇ ಗೃಹಿಣಿ ಸಾವು

MNG-Missing

Mangaluru: ಬಜಾಲ್‌ ಕುಡ್ತಡ್ಕ ಗ್ರಾಮದ ಯುವಕ ನಾಪತ್ತೆ

theft

Brahmavara: ನೀಲಾವರ ಗ್ರಾಮ: ಸರ ಕಸಿದು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.