ODI; ಮೊದಲ ಪಂದ್ಯದಲ್ಲೇ ಜಂಗೂ ಶತಕ : ವಿಂಡೀಸ್ ಕ್ಲೀನ್‌ಸ್ವೀಪ್ ಸಾಹಸ
Team Udayavani, Dec 13, 2024, 10:59 PM IST
ಬಸೆಟರ್ (ಸೇಂಟ್ ಕಿಟ್ಸ್): ಪದಾರ್ಪಣ ಏಕದಿನದಲ್ಲೇ ಸಿಡಿದು ನಿಂತು ಅಮೋಘ ಶತಕ ವೊಂದನ್ನು ಬಾರಿಸಿದ ಆಮಿರ್ ಜಂಗೂ ಸಾಹಸದಿಂದ ಬಾಂಗ್ಲಾದೇಶ ವಿರುದ್ಧದ 3ನೇ ಪಂದ್ಯವನ್ನೂ ಗೆದ್ದ ವೆಸ್ಟ್ ಇಂಡೀಸ್, ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ಬಾಂಗ್ಲಾದೇಶ 5 ವಿಕೆಟಿಗೆ 321 ರನ್ನುಗಳ ಬೃಹತ್ ಮೊತ್ತವನ್ನೇ ಪೇರಿಸಿತ್ತು. ವೆಸ್ಟ್ ಇಂಡೀಸ್ 45.5 ಓವರ್‌ಗಳಲ್ಲಿ 6 ವಿಕೆಟಿಗೆ 325 ರನ್ ಪೇರಿಸಿ ಜಯಭೇರಿ ಮೊಳಗಿಸಿತು.
ವಿಂಡೀಸ್ 86ಕ್ಕೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದಾಗ ಆಮಿರ್ ಜಂಗೂ ಆಗಮನವಾಯಿತು. ವಿಂಡೀಸ್‌ನ ದೈತ್ಯ ಬ್ಯಾಟರ್‌ಗಳ ಪರಂಪರೆಯನ್ನು ಮುಂದುವರಿಸುವ ರೀತಿಯಲ್ಲಿ ಸಿಡಿದು ನಿಂತ ಅವರು ಅಜೇಯ 104 ರನ್ ಬಾರಿಸಿ ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟರು. 83 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಯಲ್ಪಟ್ಟಿತು. ಕೇಸಿ ಕಾರ್ಟಿ 95, ಗುಡಕೇಶ್ ಮೋಟಿ ಅಜೇಯ 44 ರನ್ ಮಾಡಿದರು. ಜಂಗೂ-ಕಾರ್ಟಿ 5ನೇ ವಿಕೆಟಿಗೆ 132 ರನ್ ಒಟ್ಟುಗೂಡಿಸಿ ಪಂದ್ಯ ವನ್ನು ಬಾಂಗ್ಲಾ ಕೈಯಿಂದ ಕಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.