Rajya Sabha; ರೈತನ ಮಗ vs ಕಾರ್ಮಿಕನ ಮಗ: ಧನ್‌ಕರ್-ಖರ್ಗೆ ಮಧ್ಯೆ ಜಟಾಪಟಿ
ಸಭಾಪತಿ, ಎಐಸಿಸಿ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ
Team Udayavani, Dec 14, 2024, 12:09 AM IST
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಮತ್ತು ಸಭಾಪತಿ ಜಗದೀಪ್ ಧನ್‌ಕರ್ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಶುಕ್ರವಾರ ಭಾರೀ ವಾಕ್ಸಮರ ನಡೆದಿದೆ.
ವಿಪಕ್ಷ ಸದಸ್ಯರು ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಅಸಮಾಧಾನಗೊಂಡ ಧನ್‌ಕರ್, “ನಾನು ರೈತನ ಮಗ. ನಾನು ದುರ್ಬಲನಾಗಲಾರೆ. ನಾನು ಸಾಕಷ್ಟು ಸಹಿಸಿಕೊಂಡಿ ದ್ದೇನೆ. ನನ್ನ ದೇಶಕ್ಕಾಗಿ ನನ್ನ ಜೀವನವನ್ನೇ ತ್ಯಾಗ ಮಾಡು ತ್ತೇನೆ. ನಿಮಗೆ (ವಿಪಕ್ಷಗಳಿಗೆ) ದಿನದ 24 ಗಂಟೆಯೂ ಒಂದೇ ಕೆಲಸ. ರೈತನ ಮಗ ಇಲ್ಲಿ ಏಕೆ ಕುಳಿತಿದ್ದಾನೆ ಎಂಬುದನ್ನು ಒಮ್ಮೆ ನೋಡಿ. ನಿಮಗೆ ಗೊತ್ತುವಳಿ ಮಂಡಿಸುವ ಹಕ್ಕಿದೆ. ಆದರೆ, ನೀವು ಸಂವಿಧಾನವನ್ನು ಅವಮಾನಿಸುತ್ತಿದ್ದೀರಿ’ ಎಂದರು.
ಇದರಿಂದ ಕೆರಳಿದ ವಿಪಕ್ಷ ನಾಯಕ ಖರ್ಗೆ, “ನೀವು ರೈತನ ಮಗನಾಗಿದ್ದರೆ, ನಾನು ಕಾರ್ಮಿಕನ ಮಗ. ನಿಮ್ಮ ಬಗ್ಗೆ ಸದನದಲ್ಲಿ ಹೊಗಳಿಕೆ ಕೇಳಲು ನಾವಿಲ್ಲಿಗೆ ಬಂದಿಲ್ಲ. ನೀವು ಆಡಳಿತ ಪಕ್ಷದ ಸದಸ್ಯರಿಗೆ ಮಾತನಾಡಲು ಬಿಟ್ಟು ನಮ್ಮ ಪಕ್ಷವನ್ನು ಅವಮಾನಿಸಲು ಅವಕಾಶ ನೀಡುತ್ತಿದ್ದೀರಿ. ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದೀರಿ’ ಎಂದರು. ಇದಕ್ಕೂ ಮೊದಲು ಬಿಜೆಪಿ ಸಂಸದರು ಧನಕರ್ ಕಾರ್ಯವೈಖರಿಯನ್ನು ಹೊಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
Bengal: ಗಾಲಿಕುರ್ಚಿ ಅಲಭ್ಯತೆ: ಬೆನ್ನ ಮೇಲೆ ಪತಿಯ ಹೊತ್ತ ಮಹಿಳೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.