Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್ ದಾಟುವ ಸಾಹಸಿ ಕನ್ನಡತಿ
ಅತ್ಯಂತ ಕಠಿನ ಪ್ರಯಾಣದಲ್ಲಿ ಅನನ್ಯ ಪ್ರಸಾದ್
Team Udayavani, Dec 14, 2024, 11:55 AM IST
ಒಂಟಿ ಪ್ರಯಾಣದ ಹೊಸ ಸಾಹಸಕ್ಕೆ ಕನ್ನ ಡತಿಯೊಬ್ಬಳು ತಯಾರಾಗಿದ್ದಾಳೆ. ಇದೇ ತಿಂಗಳು ಏಕಾಂಗಿ ಯಾಗಿ ಅಟ್ಲಾಂಟಿಕ್ ಅನ್ನು ದಾಟುವ ಹೊಸ ಹುಮ್ಮಸ್ಸಿನಲ್ಲಿ ಅನನ್ಯಾ ಪ್ರಸಾದ್ ಸಂತ ಸದಿಂದ್ದಾರೆ. ಸುಮಾರು 60-80 ದಿನಗಳ ಕಾಲದ ಪ್ರಯಾಣಕ್ಕೆ ಆಹಾರವನ್ನು ಸಹ ಕಟ್ಟಿಕೊಂಡು ತಮ್ಮ ಅತ್ಯಾಧುನಿಕ ಹಾಗೂ ಏಳು ಮೀಟರಿನ ಸುಸಜ್ಜಿತ “ಓಡಿಸ್ಸಿ’ ಎನ್ನುವ ದೋಣಿಯನ್ನು ಚಲಾಯಿಸಿಕೊಂಡು ಏಕಾಂಕಿಯಾಗಿ ಪ್ರಪ್ರ ಥಮ ಬಾರಿಗೆ ಹೊಸ ಪಯಣ ನಡೆಸಲಿದ್ದಾರೆ. ಈ ಸಾಹಸದಲ್ಲಿ 40 ತಂಡಗಳು ಪಾಲ್ಗೊಳ್ಳುತ್ತಿವೆ.
ಆದರೆ ಆರೇ ಜನ ಬಿಳಿಯರು ಒಬ್ಬೊಬ್ಬರೇ ತಂತಮ್ಮ ದೋಣಿಯಲ್ಲಿ ಹಾಗೂ ಅವರಲ್ಲಿ ಅನನ್ಯ ಒಬ್ಬಳೇ ವರ್ಣಿಯಳು. ಇದನ್ನು ಜಗತ್ತಿನ ಅತ್ಯಂತ ಕಠಿನ ಪಯಣ (ವರ್ಲ್ಡ್ ಟಫೆಸ್ಟ್ ರೋ) ಎಂದು ನಾಮಕರಣ ಮಾಡಲಾಗಿದೆ.
ಎರಡು ತಿಂಗಳ ವಾಸದ “ಗೂಡು’!
ಆಧುನಿಕ ತಂತ್ರಜ್ಞಾನದ ಸಾಧನಗಳು, ಸಂವಹನಕ್ಕೆ ಇಂಟರ್ನೆಟ್, ಸ್ಯಾಟಲೈಟ್ ಫೋನ್‌ಗಳು, ಸ್ಪರ್ಧಿಗಳ ಎರಡು ಕಿಲೋ ಮೀಟರ್ ಅಂತರದಲ್ಲಿ ಅವರ ಚಲನವಲನಗಳ ಮೇಲೆ ನಿಗಾ ಇಡುವ ಸಹಾಯಕ “ಯಾಟೊಡನೆ’ ಸಂಪರ್ಕವಿಟ್ಟಿರುತ್ತಾರೆ. ಪ್ರತೀ ದಿನದ ಪಯಣದ ಫೋಟೋ, ವರದಿ ಸಹ ಕಳಿಸಬಹುದು. ಮಲಗಲು ಒಬ್ಬರಿಗಾಗುವಷ್ಟು ಕ್ಯಾಬಿನ್ ರೋಯಿಂಗ್ ಡೆಕ್ಕಿನ ಕೆಳಗೆ. ಅಲ್ಲಿಯೇ ಡ್ರೈ ಆಹಾರದ ಪ್ಯಾಕ್‌ಗಳು, ಕುಡಿಯುವ ನೀರನ್ನು ಮಾಡುವ ಯಂತ್ರ ಎಲ್ಲ ಉಂಟು. ಶೌಚಾಲಯ? ಅದಕ್ಕೊಂದು ಬಕೀಟು ಮಾತ್ರ!
ಅನನ್ಯಾಳ ಈ ಅತ್ಯಂತ ಕಠಿನ ಪ್ರಯಾಣದ ಬಗ್ಗೆ ಕುತೂಹಲಗೊಂಡು ಅವರೊಡನೆ ಮಾತಿಗಿ ಳಿದು ಇದೊಂದು ಭಯಾನಕ ಪರೀಕ್ಷೆಯಲ್ಲವೇ? ಗಂಡಾಂತರಗಳಿಗೇನು ಕೊರತೆಯೇ ಈ ಪಯಣದಲ್ಲಿ? ಯಾವ್ಯಾವ ತರಹದ ಸಿದ್ಧತೆ ಮಾಡಿಕೊಂಡಿದ್ದೀರಿ? ಎಂದು ನನ್ನೊಳಗಿದ್ದ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ.
ತನ್ನ ಪಯಣದ ಬಗ್ಗೆ ಮಾತನಾಡುತ್ತಾ ಹೋದ ಆಕೆಯಲ್ಲಿ ಧೈರ್ಯ ಮತ್ತು ಧೃಢ ನಿಶ್ಚಯ ಎದ್ದು ಕಾಣುತ್ತಿತ್ತು! ದೀರ್ಘ ಕಾಲದ ನಿದ್ರೆಯ ಅಭಾವ ಮತ್ತು ಏಕಾಂಗಿತನ ಇವನ್ನು ಎದುರಿಸಲು ಕೋರ್ಸ್‌ಗಳು ಉಂಟು ಎಂದಳು. ಎಂಟೂವರೆ ಕಿ.ಮೀ. ಆಳದ ಸಮುದ್ರ, ಪಯಣದ ಅಂತ್ಯದ ವರೆಗೆ ಎಂಟೂವರೆ ಕೆ.ಜಿ. ತೂಕ ಕಡಿಮೆಯಾಗಬಹುದು. ಈ ಹಿಂದೆ ಕೆಲ್ಡಾ ವುಡ್ ಎನ್ನುವವಳ ದೋಣಿಯಲ್ಲಿ ಒಂದು ತಿಮಿಂಗಿಲ ಎರಡು ದೀರ್ಘ ದಿನಗಳ ವರೆಗೆ ನೀರಲ್ಲಿ ಜತೆಗೆ ಸಾಗಿದ ಕಥೆಯೂ ಉಂಟು ಎಂದಳು.
ಪ್ರತೀ ದಿನವೂ 50 ಮೈಲಿನಷ್ಟು ಹುಟ್ಟು ಹಾಕಬೇಕು. ಆದ್ರೆ ಇವು ಯಾವುವೂ ನನ್ನ ಮನಸ್ಸನ್ನು ಬದಲಿಸಿಲ್ಲ! ಅವುಗಳ ಜತೆಗೆ, ನನ್ನ “ಅಟ್ಲಾಂಟಿಕ್ ಓಡಿಸ್ಸಿ’ ಎಂದು ನಾನು ಹೆಸರಿಟ್ಟ ಈ ದೋಣಿಗೆ ಏನಾದರೂ ರಿಪೇರಿ ಮಾಡುವ ಆವಶ್ಯಕತೆಯಿದ್ದರೆ ಅದಕ್ಕೆ ಬೇಕಾದ ಉಪಕರಣಗಳನ್ನು ಹೇಗೆ ಉಪಯೋಗಿಸಬೇಕು ಅದನ್ನೂ ಕಲಿತಿದ್ದೇನೆ ಎಂದಳು.
ಜಿಎಸ್ ಎಸ್ ನಂಟು
ಕಾಣದ ಕಡಲಿನ ಕವನದ ಪ್ರಸಿದ್ಧ ಕವಿ ಮತ್ತು ಹಿಂದಿನ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಈಕೆ. ಭಾರತದಲ್ಲಿ ಹುಟ್ಟಿ ಐದು ವರ್ಷದವಳಾಗಿನಿಂದಲೂ ಯುಕೆಯಲ್ಲಿ ಶೇಫಿಲ್ಡ್‌ನಲ್ಲಿ ವೈದ್ಯ ರಾದ ತಂದೆ-ತಾಯಂದಿರಿಬ್ಬರೊಡನೆ ವಾಸ. ಅರ್ಥಶಾಸ್ತ್ರದ ಪದವಿಯನ್ನು ಓದಿದ್ದಾಳೆ.
ನಿಧಿ ಸಂಗ್ರಹ ಉದ್ದೇಶ
ಈ ಸಾಹಸ ಮಾಡಲು ಏನು ಪ್ರೇರಣೆ? ಎಂದು ನಾನು ಕೇಳಿದಾಗ, ಮೊದಲಿನಿಂದಲೂ ನನಗೆ ದೈಹಿಕ ಕಸರತ್ತುಗಳಲ್ಲಿ ಆಸ್ಥೆ ಇತ್ತು. ಮೂರು ವರ್ಷಗಳ ಕೆಳಗಷ್ಟೇ ಅಟ್ಲಾಂಟಿಕ್ ದಾಟುವ ರೇಸ್; ಹೌದು, ಅದೊಂದು ಸ್ಪರ್ಧೆಯೇ ಬಗ್ಗೆ ಕೇಳಿದೆ. ಅದರ ಬಗ್ಗೆ ಹೆಚ್ಚು ಅರಿತಂತೆ ಇಂಥ ಒಂದು ಪ್ರಯತ್ನ ನನ್ನಂಥ ಹಿನ್ನೆಲೆಯವರು ಅದರಲ್ಲೂ ಭಾರತೀಯರು ಸಹ ಮಾಡಿರಲಾರರು. ಇದನ್ನು ನಾನು ಮಾಡಿದರೆ ಅವರಿಗೆ ಪ್ರೇರಣೆಯಾದೀತು, ಅವರೂ ಇಂತಹ ಕಠಿನ ಸವಾಲುಗಳನ್ನು ಎದುರಿಸಲು ಸಿದ್ಧರಾಗಬಹುದು ಅಂತ ನಿರ್ಧರಿಸಿದೆ. ಜತೆಗೆ ಎರಡು ಚ್ಯಾರಿಟಿ ಸಂಸ್ಥೆಗಳಿಗೆ ನಿಧಿ ಸಂಗ್ರಹದ ಉದ್ದೇಶವೂ ಇದೆ. ನನ್ನ ದೊಡ್ಡಪ್ಪ ಅವರು ಚಾಮರಾಜನಗರದಲ್ಲಿ “ದೀನಬಂಧು’ ಎನ್ನುವ ಅನಾಥಾ ಶ್ರಮವನ್ನು ನಡೆಸುತ್ತಿದ್ದಾರೆ. ಅದಕ್ಕೆ ಮತ್ತು ಯುಕೆಯಲ್ಲಿಯ ಒಂದು ಮೆಂಟಲ್ ಹೆಲ್ತ್ ಚ್ಯಾರಿಟಿಗೂ ನಿಧಿ ಸಂಗ್ರಹಿಸಿ ನಾನು ಸಹಾಯ ಮಾಡುತ್ತಿದ್ದೇನೆ ಎಂದಳು.
ಪಯಣ ಹೇಗಿರಲಿದೆ ?
ಸ್ಪೇನ್ ದೇಶದ ಕೆನೇರಿ ದ್ವೀಪವಾದ ಲ’ ಗೋಮೆರಾದಿಂದ ಹೊರಟು ಪಶ್ಚಿಮ ದಿಕ್ಕಿನ ಅಟ್ಲಾಂಟಿಕ್ ತುದಿಯಲ್ಲಿಯ ಅಂಟಿಗಾ ವರೆಗೆ 3000 ಮೈಲುಗಳು. ಇಪ್ಪತ್ತರಿಂದ ಮೂವತ್ತು ಅಡಿಗಳೆತ್ತರದ ಅಲೆಗಳು, ಶಾರ್ಕ್ ತರದ ಮಾರ್ಲಿನ್ ಮೀನುಗಳ ಪ್ರಹಾರ, ಬಿರುಗಾಳಿ, ಚಂಡಮಾರುತಗಳು ಇವೆಲ್ಲವನ್ನೂ ಎದುರಿಸಲು ತಯಾರಿರಬೇಕು. ಪ್ರತೀ ಕ್ಷಣದಲ್ಲೂ ಎಚ್ಚರದಿಂದಿರಬೇಕು. ಈ ವರೆಗಿನಲ್ಲಿ ಅತ್ಯಂತ ವೇಗದಲ್ಲಿ ಕ್ರಾಸಿಂಗ್ ಮಾಡಿದ ತಂಡಕ್ಕೆ 29 ದಿನಗಳು ಬೇಕಾದವು. ಕೆಲವು ವರ್ಷಗಳ ಕೆಳಗೆ ಚುಕ್ಕಾಣಿ ಕೆಟ್ಟು ಮುರಿದ ಬೋಟಿನ ಒಡೆಯ “ಕುಂಟುತ್ತ’ ದಾಟಲು ತೊಗೊಂಡದ್ದು 90 ದಿನಗಳು! ಈ ಪಯಣ ನನ್ನನ್ನೇ ನಾನು ಅರಿತುಕೊಳ್ಳಲೂ ಸಹಾಯವಾದೀತು ಅಂತ ಹೇಳಿದ ಈ ಕೆಚ್ಚೆದೆಯ ಕನ್ನಡದ ಯುವ ಸಾಹಸಿಗೆ ಶುಭ ಹಾರೈಕೆಗಳೊಂದಿಗೆ ಕಳಿಸಿಕೊಡುತ್ತಿದ್ದೇವೆ. ಅನನ್ಯಾಳ ಪಯಣ ಶುಭಕರವಾಗಲಿ.
ಬದಲಾಗುತ್ತಿರುವ ಹವಮಾನದ ಮುನ್ಸೂಚನೆ ಬಂದದ್ದರಿಂದ ಅಟ್ಲಾಂಟಿಕ್ ರೇಸ್ ನಿಯೋಜಕರು ಡಿ.11ರಂದೇ ವಿಜೃಂಭಣೆ ಯಿಂದ ಆರಂಭ ಮಾಡಿದರು. ಅನನ್ಯ ಅವರ “ಅಟ್ಲಾಂಟಿಕ್ ಓಡಿಸ್ಸಿ’ ದೋಣಿಯನ್ನು ಕೆನೇರಿ ದ್ವೀಪದ ಮರಿನಾ ದಡದಲ್ಲಿ ನೆರೆದಿದ್ದ ನೂರಾರು ಜನರು ಬೀಳ್ಕೊಟ್ಟರು. ಆಕೆಯ ತಾಯಿ ಮಗಳ ಕೆನ್ನೆ ನೇವರಿಸಿ ಹರಸಿದ ದೃಶ್ಯ ಎಲ್ಲರ ಹೃದಯ ತಟ್ಟಿತು.
*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Azerbaijan: ಅಜರ್ಬೈಜಾನ್‌ನ ಪ್ರವಾಸಿ ಸ್ಥಳಗಳು- ಪುರಾತನ, ಪ್ರಾಕೃತಿಕ ತಾಣಗಳ ರಾಷ್ಟ್ರ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ
ಜಗತ್ತಿನ ಐದು ನಿಷೇಧಿತ ಸ್ಥಳಗಳು…ಸಾರ್ವಜನಿಕರಿಂದ ದೂರ ಇರುವ ಈ ಪ್ರದೇಶಗಳ ವಿಶೇಷತೆ ಏನು?
Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್!
MUST WATCH
ಹೊಸ ಸೇರ್ಪಡೆ
ಯುವಕನ ನಿಗೂಢ ಸಾವು: ಗಂಟಲಲ್ಲಿ ಆಹಾರ ಸಿಲುಕಿಕೊಂಡು ಸಾ*ವು ಶಂಕೆ
ಮಾರಣಕಟ್ಟೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಆಟೋ ಪಲ್ಟಿ, ಮೂವರು ವಿದ್ಯಾರ್ಥಿಗಳು ಗಂಭೀರ.
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.