Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್ ಸುಧೀರ್
Team Udayavani, Dec 14, 2024, 2:24 PM IST
ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರೆನಿಸಿಕೊಂಡ ತರುಣ್ ಸುಧೀರ್ ತಮ್ಮ ನಿರ್ಮಾಣದಲ್ಲಿ ಬರುತ್ತಿರುವ ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದ್ದಾರೆ.
ಶರಣ್ ನಟನೆಯ “ಗುರು ಶಿಷ್ಯರು’ ಚಿತ್ರ ನಿರ್ಮಿಸಿ ಯಶ ಕಂಡಿದ್ದ ತರುಣ್ ಅವರು, ಈಗ ಎರಡನೇ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
“ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಪೋಸ್ಟರ್ ಸಿನಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆ್ಯಕ್ಸಿಡೆಂಟ್ ಆಗಿ ಕೆಳಗೆ ಬಿದ್ದ ಕಾರ್, ಅದರಿಂದ ಹೊರಬಂದ ವ್ಯಕ್ತಿಯ ಕೈಗಳು… ಒಂದು ಕೈಯಲ್ಲಿ ಹ್ಯಾಂಡ್‌ಕಫ್, ಇನ್ನೊಂದು ಕೈಯಲ್ಲಿ ಫೋನ್ ಇದು ಪೋಸ್ಟರ್‌ನಲ್ಲಿ ಕಾಣುವ ದೃಶ್ಯ. ಚಿತ್ರತಂಡ ಹೇಳಿಕೊಂಡಂತೆ ಇದು ಪ್ರೇಮಕಥೆಯಾದರೂ, ಇದರಲ್ಲಿ ಸಾಕಷ್ಟು ರೋಚಕ ಅಂಶಗಳಿವೆ ಎಂಬುದನ್ನು ಪೋಸ್ಟರ್ ಮೂಲಕ ಅರಿವಿಗೆ ಬರುತ್ತದೆ.
ಈ ಚಿತ್ರವನ್ನು ತರುಣ್ ಸುಧೀರ್ ಜೊತೆಗೆ ಅಟ್ಲಾಂಟ ನಾಗೇಂದ್ರ ನಿರ್ಮಿಸುತ್ತಿದ್ದಾರೆ. ಪುನೀತ್ ರಂಗಸ್ವಾಮಿ ಅವರ ರಚನೆ ಹಾಗೂ ನಿರ್ದೇಶನದ ಚಿತ್ರವಿದು. ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಜಿ.ರಾಜಶೇಖರ್ ಅವರ ಕಲೆ ಈ ಚಿತ್ರಕ್ಕಿದೆ.
ಚಿತ್ರದ ತಾರಾಗಣ ಇನ್ನೂ ಆಯ್ಕೆಯಾಗಬೇಕಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mundugaru:ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ
ಚೆನ್ನಮ್ಮನ ವಂಶಸ್ಥರ ಮೇಲಿನ ಲಾಠಿ ಪ್ರಹಾರ ಮನುಕುಲಕ್ಕೆ ಮಾಡಿದ ಅಪಮಾನ: ರೇಣುಕಾಚಾರ್ಯ
ವಿರಾಟ್ ಪದ್ಮನಾಭ ವಿರಚಿತ ‘ಬೆಟ್ಟದ ಹೂವು’ ಕೃತಿಯ ರಕ್ಷಾಪುಟ ಅನಾವರಣ
ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ರಜತ ಮಹೋತ್ಸವ: ಹಳೆ ವಿದ್ಯಾರ್ಥಿ ಸಂಘ ಆರಂಭ
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.