Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ


Team Udayavani, Dec 14, 2024, 3:32 PM IST

All set for the Indian Cultural Festival

ಕಲಬುರಗಿ: ಒಂದೂವರೆ ದಶಕದ ಹಿಂದೆ ಕಲಬುರಗಿ ಕಂಪು ರಾಷ್ಟ್ರಮಟ್ಟದಲ್ಲಿ ತನ್ನದೆಯಾದ ಹೆಸರು ಮಾಡಿರುವಂತೆ ಜನವರಿ 25ರಿಂದ ಫೆಬ್ರುವರಿ 6ರವರೆಗೆ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವ-೦7 ಸಹ ಛಾಪು ಮೂಡಿಸುವ ಮುಖಾಂತರ ಐತಿಹಾಸಿಕವಾಗಲಿದೆ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ ಹಾಗೂ ಉತ್ಸವದ ಪ್ರಧಾನ ಸಂಚಾಲಕ ಮಾಜಿ ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.

ಇಲ್ಲಿನ ಭಾರತ ವಿಕಾಸ ಸಂಗಮ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸೇಡಂ ತಾಲೂಕಿನ ಬೀರನಳ್ಳಿ ಕ್ರಾಸ್ ಬಳಿ ವಿಶಾಲ 24 ಎಕರೆ ಪ್ರದೇಶದಲ್ಲಿ ನಡೆಯಲಿರುವ ಐತಿಹಾಸಿಕ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಹಗಲಿರಳು ಸಿದ್ಧತೆಗಳು ನಡೆದಿವೆ. 51 ಪುಟಗಳ ಆಮಂತ್ರಣ ಪತ್ರ ಅಂತಿಮಗೊಂಡು ಎಲ್ಲಾ ಕಡೆ ತಲುಪುತ್ತಿವೆ. ಲಕ್ಷಾಂತರ ಜನ ಪಾಲ್ಗೊಳ್ಳುವ ಹಾಗೂ ಸುಮಾರು ಮೂರು ಕೋಟಿ ಜನ ವೀಕ್ಷಿಸುವ ಈ ಉತ್ಸವ ಒಂದು ಮೈಲುಗಲ್ಲು ಆಗಲಿದೆ ಎಂದು ವಿವರಣೆ ನೀಡಿದರು.

ಭಾರತೀಯ ಮೌಲ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುನ್ನೆಡೆಸುವುದು ಅದರಲ್ಲೂ ನೈಸರ್ಗಿಕ ಸಂಪನ್ಮೂಲ ಹೆಚ್ಚಳಗೊಳಿಸುವುದು ಜತೆಗೆ ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಗಟ್ಟಿಗೊಳಿಸಲು ಮತ್ತು ದೇಶದ ವಿವಿಧ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಲು ಬೇಕಾಗಿರುವ ಆತ್ಮವಿಶ್ವಾಸ ರೂಪಿಸಲು ಕುಂಭಮೇಳದ ನಂತರ ಅತಿದೊಡ್ಡ ಭಾರತ ವಿಕಾಸ ಸಂಗಮದ ಈ ಏಳನೇ ಭಾರತೀಯ ಸಂಸ್ಕೃತಿ ಉತ್ಸವವಾಗಿದೆ. ಇಡೀ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವುದೇ ಮುಖ್ಯ ಉದ್ದೇಶವಾಗಿದೆ. ಇತಿಹಾಸದಲ್ಲಿ ದಾಖಲು ಅಗುವ ಈ ವಿದ್ಯಮಾನಕ್ಕೆ ಸಾಕ್ಷಿಯಾಗಲು ಹಾಗೂ ಭಾಗವಹಿಸಲು ಸಮಾಜದ ಎಲ್ಲ ವರ್ಗದ ಜನರನ್ನು ಆವ್ಹಾನಿಸಲಾಗುತ್ತಿದೆ. ಈವರೆಗೆ ಉತ್ತರಪ್ರದೇಶದ ವಾರಣಾಸಿ, ಚುನಾರ್, ಕರ್ನಾಟಕದ ಕಲಬುರಗಿ ಹಾಘೂ ವಿಜಯಪುರ, ಮಹಾರಾಷ್ಟ್ರದ ಕನೇರಿಯ ಮಠ, ತೆಲಂಗಾಣ-ಹೈದ್ರಾಬಾದ್‌ನ ಕಲ್ವಕುರ್ತಿಯಲ್ಲಿ ಸೇರಿ ಆರು ಸಮಾವೇಶಗಳನ್ನು ಆಯೋಜಿಸಲಾಗಿದೆ. ಇದು ಏಳನೆಯದ್ದಾಗಿದೆ ಎಂದು ಡಾ. ಸೇಡಂ ತಿಳಿಸಿದರು.

ಎಲ್ಲ 9 ದಿನಗಳಲ್ಲಿ ಉತ್ಸವ ಮುಖ್ಯ ಕಾರ್ಯಕ್ರಮ ಅನುಭವ ಮಂಟಪದಲ್ಲಿ ನಡೆಯಲಿದೆ. ಅದೇ ರೀತಿ ಡಾ. ಎಸ್.ಎ ಪಾಟೀಲ್, ಮಾತಾ ಮಾಣಿಕೇಶ್ವರ ಮುಖ್ಯ ವೇದಿಕೆ ಸೇರಿ ಇತರ ವೇದಿಕೆಗಳಡಿ ದಿನಾಲು ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ. 70 ಸಾವಿರ ಜನರು ಕುಳಿತುಕೊಳ್ಳುವ ಬೃಹತ್ ಮುಖ್ಯ ಸಭಾಂಗಣ ನಿರ್ಮಾಣವಾಗಲಿದೆ. ಪ್ರಮುಖವಾಗಿ ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಉದ್ಯಮಶೀಲತೆ, ಯುವಜನತೆ, ಪರಿಸರ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ವಿಶೇಷ ಗಮನವನ್ನು ಹೊಂದಿರುವ ಜೀವನದ ವಿವಿಧ ಕ್ಷೇತ್ರಗಳ ಅನೇಕ ದಿಗ್ಗಜರು ಮತ್ತು ಭಾಷಣಕಾರರ ಉಪನ್ಯಾಸಗಳು ಪರಿಣಾಮಕಾರಿ ನಡೆಯಲಿವೆ ಎಂದರು.

ಭಾರತೀಯ ಸಂಸ್ಕೃತಿ ಉತ್ಸವವು ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮಾಜಿಕ ಶಕ್ತಿಗಳ ತಳಮಟ್ಟದ ಉಪಕ್ರಮ ಬಲಪಡಿಸಲು ಆಯೋಜಿಸಲಾದ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಪ್ರಮುಖವಾಗಿ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಪರಿಸರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುವುದು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಇಡೀ ಸಮಾಜವು ಒಗ್ಗೂಡಿಸುವುದು ಪ್ರಮುಖವಾಗಿ ಪ್ರಕೃತಿ-ಕೇಂದ್ರಿತ ಅಭಿವೃದ್ಧಿ- ಸುಸ್ಥಿರ ಮಾದರಿಗೆ ಕಾರಣವಾಗುವ ಅಭ್ಯಾಸಗಳನ್ನು ಅಳವಡಿಸುವುದು ಉತ್ಸವ ಪ್ರಮುಖ ಧ್ಯೇಯವಾಗಿದೆಯಲ್ಲದೇ ಎಲ್ಲರಿಗೂ ಶುದ್ಧ ನೀರು, ಗಾಳಿ ಮತ್ತು ಆಹಾರದ ಲಭ್ಯತೆಯನ್ನು ಪ್ರತಿಪಾದಿಸಲಾಗುತ್ತದೆ ಎಂದು ಗೋವಿಂದಾಚಾರ್ಯ ಹಾಗೂ ಡಾ. ಬಸವರಾಜ ಸೇಡಂ ತಿಳಿಸಿದರು.

ಯುವಕರಿಗೆ ಸ್ವ ಉದ್ಯೋಗದಲ್ಲಿ ಯಶಸ್ವಿ ಹೊಂದುವುದು ಕುರಿತಾದ ಕಾರ್ಯಗಾರ, ಕಲಾವಿದರಿಗೂ ಸ್ಪೂರ್ತಿ ತುಂಬುವ ಕಲಾಮೇಳ, ಸಾಹಿತ್ಯಾಸಕ್ತಿ ಹೆಚ್ಚಿಸುವ ಮಾಗದರ್ಶನ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗೆ ಸೇರಿ ಇತ್ಯಾದಿಗಳ ಹಲವಾರು ವಿನೂತನವಾದ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ನಾವು ನೋಡುವ ನೋಟ ಬದಲಾದರೆ ಎಲ್ಲವೂ ಅಭಿವೃದ್ಧಿಯಾಗುತ್ತದೆ. ಎಲ್ಲವೂ ಸರ್ಕಾರದಿಂದ ಆಗಬೇಕೆನ್ನುವುದರಕ್ಕಿಂತ ನನ್ನಿಂದಲೂ ಸಮಾಜ ಅಭಿವೃದ್ಧಿಗೆ ಕೈ ಜೋಡಣೆ ಎಂಬ ಮನೋಬಲ ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ರಾತ್ರಿ ಮೊದಲು ಸ್ಥಳೀಯ ಹಾಗೂ ತದನಂತರ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಸಂಗೀತ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ. ಒಟ್ಟಾರೆ ಉತ್ಸವಕ್ಕೆ ಬಂದರೆ ತಾನು ಏನು ಮಾಡಿದರೆ ಸ್ವಾವಲಂಬಿಯಾಗಬಲ್ಲೆ ಜತೆಗೆ ತನ್ನ ಪಾತ್ರ ಏನು ಎಂಬ ಪರಿಕಲ್ಪನೆ ಮೂಡದೆ ಇರದು ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ 10 ವರ್ಷದೊಳಗಿನ ಮಕ್ಕಳ ಬೌದ್ಧಿಕ ವಿಕಾಸ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ವಿಶೇಷ ಮಳಿಗೆ ರೂಪಿಸಲಾಗಿದೆ. ಶಿಶು ಶಿಕ್ಷಣದಲ್ಲಿ ಹೆಸರು ಮಾಡಿರುವ ದಾವಣಗೆರೆಯ ಸಂಸ್ಥೆಯೊಂದು ಇದನ್ನು ನಿರ್ವಹಿಸಲು ಈಗಾಗಲೇ ಕಾರ್ಯೋನ್ಮುಖಗೊಂಡಿದೆ. ಐತಿಹಾಸಿಕ ಎನ್ನುವಂತೆ ಕೈ ತುತ್ತಿನ ಊಟದಲ್ಲಿ 2 ಲಕ್ಷ ಮಕ್ಕಳು ಹಾಗೂ 80 ಸಾವಿರ ತಾಯಿಯಂದಿರು ಪಾಳ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಬಲಪಡಿಸಿದ 50 ಗಣ್ಯರಿಗೆ ಹಾಗೂ ಸೇಡಂ 15 ಹಳ್ಳಿಗಳಲ್ಲಿ ಸ್ವಾವಲಂಬಿ ಬದುಕು ರೂಪಿಸಿದವರನ್ನು ಉತ್ಸವದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಗುತ್ತಿದೆ ಎಂದು ಡಾ. ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.

ಸಿಎಂಗೆ ಆಹ್ವಾನ: ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆಮಂತ್ರಣ ನೀಡಲಾಗಿದೆ. ಡಾ. ಸದಾಶಿವ ಸ್ವಾಮಿಗಳವರೇ ಆಮಂತ್ರಣ ನೀಡಿ ಬಂದಿದ್ದಾರೆ. ಬರುವುದು- ಬಿಡುವುದು ಅವರಿಗೆ ಬಿಟ್ಟದ್ದು. ಮುಂದೆ ನೋಡಿ ಉತ್ಸವ ಮಾಡುವುದು ತಮ್ಮದಾಗಿದೆ. ಈ ಹಿಂದೆ ಕಲಬುರಗಿ ಕಂಪಿಗೂ ಇದೇ ತೆರನಾಗಿ ಪ್ರತಿಕ್ರಿಯೆ ವ್ಯಕ್ತವಾದಾಗ್ಯೂ ಹೆಚ್ಚಿನ ಗಮನ ಕೊಡಲಿಲ್ಲ. ದೊಡ್ಡ ಉತ್ಸವ ಎಂದ ಮೇಲೆ ಎಲ್ಲ ತರಹದ ಮಾತುಗಳನ್ನು ಸ್ವಾಗತ ಮಾಡಿಕೊಳ್ಳಬೇಕು. ಪ್ರಮುಖವಾಗಿ ಸಂಘರ್ಷವಿಲ್ಲ. ಅಭಿವೃದ್ಧಿಯೇ ಮುಖ್ಯ. ಭಾರತೀಯ ಸಂಸೃತಿ ಉತ್ಸವ ಅಭಿವೃದ್ಧಿಗಾಗಿ ನಡೆಸಲಾಗುತ್ತಿದೆಯೇ ಹೊರತು ಸಂಘರ್ಷಕ್ಕಲ್ಲ. ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ ಎಂದು ಡಾ. ಸೇಡಂ ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು. ಡಾ. ಮಾರ್ತಾಂಡ ಶಾಸ್ತ್ರೀ, ಪ್ರಭಾಕರ ಜೋಶಿ, ಸದಾನಂದ ಪೆರ್ಲ ಸೇರಿದಂತೆ ಮುಂತಾದವರಿದ್ದರು.

ಟಾಪ್ ನ್ಯೂಸ್

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

police crime

Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

kejriwal 3

Delhi;ಕೇಜ್ರಿವಾಲ್ ಗೆ ಬಿಜೆಪಿ, ಕಾಂಗ್ರೆಸ್ ನಿಂದಲೂ ಮಾಜಿ ಸಿಎಂಗಳ ಪುತ್ರರೇ ಸ್ಪರ್ಧಿಗಳು!

1-modi

Constitution; ಲೋಕಸಭೆಯಲ್ಲಿ ವಿಪಕ್ಷಗಳತ್ತ ತೀವ್ರ ಟೀಕಾ ಪ್ರಹಾರ ನಡೆಸಿದ ಪ್ರಧಾನಿ

Mundugaru-pejavara-sri2

Mundugaru:ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

6-

Chittapur: ದೇವಸ್ಥಾನದ ಆಭರಣಗಳು, ಹುಂಡಿ ಕಳ್ಳತನ ಮಾಡಿದ ಆರೋಪಿ ಬಂಧನ

Kalaburagi: Lokayukta raids the house of the Municipal Deputy Commissioner

Kalaburagi: ಪಾಲಿಕೆ ಉಪ ಆಯುಕ್ತರ‌ ಮನೆ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

police crime

Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.