ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌


Team Udayavani, Dec 14, 2024, 10:32 AM IST

Baharain1

ಬಹ್ರೈನ್‌:ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್‌ ಬಹ್ರೈನ್‌’ ಆಯೋಜಿಸಿದ್ದ ದಿ| ತೀರ್ಥ ಸುವರ್ಣ ಸ್ಮರಣಾರ್ಥ ಪ್ರೊ ಕಬಡ್ಡಿ ಪಂದ್ಯಾಟ ನೆರೆದ ನೂರಾರು ಜನರನ್ನು ತಡರಾತ್ರಿಯವರೆಗೂ ರಂಜಿಸುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಅಲ್‌ ಅಹಲಿ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಈ ಕಬಡ್ಡಿ ಪಂದ್ಯಾಟದಲ್ಲಿ ದ್ವೀಪದ ಎಂಟು ಬಲಿಷ್ಠ ತಂಡಗಳು ಪಾಲ್ಗೊಂಡಿದ್ದವು. ಮೊಗವೀರ್ಸ್‌ ಬಹ್ರೈನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಮೊಗವೀರ್ಸ್‌ ಬಹ್ರೈನ್‌ ಸಂಘಟನೆ ದ್ವೀಪದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅದರ ಕ್ರಿಯಾಶೀಲ ಸದಸ್ಯರಾಗಿ ಸಂಘಟನೆಗೆ ಅನನ್ಯ ಕೊಡುಗೆಯನ್ನು ತೀರ್ಥ ಸುವರ್ಣರವರು ನೀಡಿದ್ದರು. ಸ್ವತಃ ಕಬಡ್ಡಿ ಆಟಗಾರರಾಗಿ ಇವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ತಮ್ಮ ಕಾಲೇಜು ದಿನಗಳಲ್ಲಿ ಇವರು ಪ್ರತಿನಿ ಧಿಸಿದ್ದು ಎರಡು ವರುಷಗಳ ಹಿಂದೆ ಅಗಲಿದ್ದರು.

ಮೊಗವೀರ್ಸ್‌ ಬಹ್ರೈನ್‌ ಸಂಘಟನೆಗೆ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕಳೆದ ವರುಷ ಅವರ ಸ್ಮರಣಾರ್ಥ ಈ ಪಂದ್ಯಾಟವನ್ನು ಆರಂಭಿಸಿದ್ದು ಇದು ಯಶಸ್ವಿಯಾಗಿ ಎರಡನೇ ವರುಷಕ್ಕೆ ಕಾಲಿಟ್ಟಿದೆ.

ಮೊಗವೀರ್ಸ್‌ ಬಹ್ರೈನ್‌ನ ಅಧ್ಯಕ್ಷೆ ಶಿಲ್ಪಾ ಶಮಿತ್‌ ಕುಂದರ್‌ರವರ ಅಧ್ಯಕ್ಷತೆಯಲ್ಲಿ ಈ ಜರಗಿದ ಈ ಪ್ರೊ ಕಬಡ್ಡಿ ಪಂದ್ಯಾಟವು ಯಾವುದೇ ಅಂತಾರಾಷ್ಟ್ರೀಯ ಪಂದ್ಯಾಟಕ್ಕೆ ಕಡಿಮೆಯಿಲ್ಲದಂತೆ ಅತ್ಯಂತ ಅಚ್ಚುಕಟ್ಟಾಗಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕ್ರೀಡಾ ಕಾರ್ಯದರ್ಶಿ ರಾಜೇಶ್‌ ಮೆಂಡನ್‌, ಉಪ ಕ್ರೀಡಾಕಾರ್ಯದರ್ಶಿ ರಾಹುಲ್‌ ಸಾಲ್ಯಾನ್‌, ಸಾಂಸðತಿಕ ಕಾರ್ಯದರ್ಶಿ ಸಂದೀಪ್‌ ಮೆಂಡನ್‌, ಪ್ರೇಮ್‌ ಅತ್ತಾವರ, ಸುಧಾಕರ್‌ ಆನಗಳ್ಳಿ, ಗಣೇಶ್‌ ಕುಂದರ್‌, ಸಾಹಿಲ್‌ ಸುವರ್ಣ ಮುಂತಾದವರು ಈ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ್ದರು.

ಸಿ| ತೀರ್ಥ ಸುವರ್ಣರವರಿಗೆ ಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಿದ ಅನಂತರ ಶಿಲ್ಪಾ ಶಮಿತ್‌ ಕುಂದರ್‌ರವರು ಎಲ್ಲರನ್ನೂ ಸ್ವಾಗತಿಸಿ, ತಂಡಗಳಿಗೆ ಶುಭ ಹಾರೈಸಿದರು. ತೀರ್ಥ ಸುವರ್ಣರ ಧರ್ಮಪತ್ನಿ ಸುರೇಖಾ ಸುವರ್ಣ ಅವರು ರಿಬ್ಬನ್‌ ಕತ್ತರಿಸಿ ಈ ಪಂದ್ಯಾಟಕ್ಕೆ ಚಾಲನೆ ನೀಡಿ, ಪಂದ್ಯಾಟ ಆರಂಭಗೊಂಡಿತು.

ಒಟ್ಟಾರೆ ಎಂಟು ತಂಡಗಳು ಕಬಡ್ಡಿ ಪಂದ್ಯಾಟ ದಲ್ಲಿ ಭಾಗವಹಿಸಿದ್ದವು. ಎಂಟು ಬಲಿಷ್ಠ ತಂಡಗಳು ತೀವ್ರ ಪೈಪೋಟಿ ತೋರಿದ್ದು ಸೆಮಿಫೈನಲ್‌ ಹಂತಕ್ಕೆ ಶಿವಗಂಗೆ, ಯುನೈಟೆಡ್‌ ಪುತ್ತೂರು, ಫ್ರೆಂಡ್ಸ್‌ ಬಹ್ರೈನ್‌ ಹಾಗೂ ತುಳುನಾಡ್‌ ತಂಡಗಳು ಲಗ್ಗೆ ಇಟ್ಟವು. ಅಂತಿಮ ಹಂತಕ್ಕೆ ಪ್ರವೇಶಿಸಿದ ಫ್ರೆಂಡ್ಸ್‌ ಬಹ್ರೈನ್‌ ಹಾಗೂ ತುಳುನಾಡು ತಂಡಗಳ ನಡುವಿನ ಪಂದ್ಯಾಟ ರೋಚಕ ಹಂತಕ್ಕೆ ತಲುಪಿ ಕೊನೆಗೆ ತುಳುನಾಡ್‌ ಕಬ್ಬಡಿ ತಂಡ ಜಯವನ್ನು ದಾಖಲಿಸಿತು. ಫ್ರೆಂಡ್ಸ್‌ ಬಹ್ರೈನ್‌ ತಂಡ ಎರಡನೇ ಸ್ಥಾನ ಪಡೆದರು. ಯುನೈಟೆಡ್‌ ಪುತ್ತೂರು ತೃತೀಯ ಸ್ಥಾನ ಹಾಗೂ ಶಿವಗಂಗೆ ತಂಡ ನಾಲ್ಕನೇ ಸ್ಥಾನವನ್ನು ಪಡೆಯಿತು.

ಬೆಸ್ಟ್‌ ರೈಡರ್‌ ಪ್ರಶಸ್ತಿಯನ್ನು ರಾಹುಲ್‌, ಬೆಸ್ಟ್‌ ಕ್ಯಾಚರ್‌ ಆಗಿ ವೈಷಾಗ್‌, ಬೆಸ್ಟ್‌ ಆಲ್‌ ರೌಂಡರ್‌ ಪ್ರಶಸ್ತಿಯನ್ನು ಪುನೀತ್‌ ಪಡಕೊಂಡರೆ, ಪಂದ್ಯಾಟದ ಭರವಸೆಯ ಆಟಗಾರನಿಗಿರುವ ಪ್ರಶಸ್ತಿಯನ್ನು ರಾಶಿದ್‌ ಬನಾರಿ ತಮ್ಮದಾಗಿಸಿಕೊಂಡರು. ನಾಡಿನ ಖ್ಯಾತ ಕಬಡ್ಡಿ ಆಟಗಾರರಾದ ರಾಶಿದ್‌ ಬನಾರಿ, ಶಮೀರ್‌ ಕಡಬ, ಹಿಶಾಮ್‌ ಉಡುಪಿ ವಿಶೇಷವಾಗಿ ಈ ಪಂದ್ಯಾಟಕ್ಕೆ ಆಗಮಿಸಿ ತಮ್ಮ ಆಟದಿಂದ ಪಂದ್ಯಾಟಕ್ಕೆ ಹೆಚ್ಚಿನ ಮೆರುಗು ನೀಡಿದರು.

ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಇಲ್ಲಿನ ವಿವಿಧ ಸಂಘಟನೆಗಳ ಪದಾ ಕಾರಿಗಳು, ಗಣ್ಯರುಗಳು ಆಗಮಿಸಿ ಬಹುಮಾನಗಳನ್ನು ವಿತರಿಸಿದರು. ವಿಜೇತ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿಗಳ ಜತೆಗೆ ನಗದು ಬಹುಮಾನಗಳನ್ನು ನೀಡಲಾಯಿತು. ಇತರ ತಂಡಗಳಿಗೆ ಟ್ರೋಫಿಗಳು ಹಾಗೂ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವರದಿ: ಕಮಲಾಕ್ಷ ಅಮೀನ್‌

ಟಾಪ್ ನ್ಯೂಸ್

YDR-Assult

Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು

DVG-BJp-Meet

Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

police crime

Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

kejriwal 3

Delhi;ಕೇಜ್ರಿವಾಲ್ ಗೆ ಬಿಜೆಪಿ, ಕಾಂಗ್ರೆಸ್ ನಿಂದಲೂ ಮಾಜಿ ಸಿಎಂಗಳ ಪುತ್ರರೇ ಸ್ಪರ್ಧಿಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

Desi Swara: ಕನ್ನಡ ಭಾಷೆಗೆ ಕನ್ನಡಿಗರು ಮಾತ್ರ ಬಲ…ಕನ್ನಡವೆಂದರೇ ಕೇವಲ ಕಥೆ…

Desi Swara: ಕನ್ನಡ ಭಾಷೆಗೆ ಕನ್ನಡಿಗರು ಮಾತ್ರ ಬಲ…ಕನ್ನಡವೆಂದರೇ ಕೇವಲ ಕಥೆ…

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

YDR-Assult

Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು

puttige-3

Udupi; ಗೀತಾರ್ಥ ಚಿಂತನೆ 124: ದೇಹದಲ್ಲಿರುವ ಅನುಭವ ಆತ್ಮನಿಗೇ…

DVG-BJp-Meet

Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.