Election; ಒಂದು ದೇಶ,ಒಂದು ಚುನಾವಣೆ ಜಾರಿ ಯಾವಾಗ? ಏನೆಲ್ಲ ತಿದ್ದುಪಡಿ ಅಗತ್ಯ?
ಏನೆಲ್ಲ ತಿದ್ದುಪಡಿ ಅಗತ್ಯ?
Team Udayavani, Dec 15, 2024, 6:30 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಘೋಷಣೆಯಾದ “ಒಂದು ದೇಶ, ಒಂದು ಚುನಾವಣೆ’ಯು 2034ರಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಮಂಡನೆ ಮಾಡಲು ಉದ್ಯುಕ್ತವಾಗಿರುವ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಕಾರ 2029ರಲ್ಲಿ ಏಕ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಲಿವೆ.
ಏಕ ಚುನಾವಣೆ ಜಾರಿ ಮಾಡಬೇಕಿದ್ದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಸಮಕಾಲೀನಗೊಳಿಸಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಸಮಯ ಹಾಗೂ ಸಂವಿಧಾನ ತಿದ್ದುಪಡಿಗಳ ಆವಶ್ಯಕತೆ ಇದ್ದು, ಇವುಗಳನ್ನು ಸಮರ್ಪಕವಾಗಿ ನಡೆಸಲು 10 ವರ್ಷಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಾಂತರವಲ್ಲ, ಅವಧಿ ಪೂರೈಸದ ಚುನಾವಣೆ
“ಒಂದು ದೇಶ, ಒಂದು ಚುನಾವಣೆ’ಯನ್ನು ಜಾರಿ ಮಾಡಲು ಹೊಸ ವಿಷಯಗಳನ್ನು ಕೂಡ ಕೇಂದ್ರ ಸರಕಾರವು ಈ ಮಸೂದೆಯಲ್ಲಿ ಸೇರ್ಪಡೆ ಮಾಡಿದ್ದು, ಮಧ್ಯಾಂತರ ಚುನಾವಣೆಯ ಬದಲು “ಅವಧಿ ಪೂರೈಸದ ಚುನಾವಣೆ’ ಎಂಬುದನ್ನು ಸೇರ್ಪಡೆ ಮಾಡಲಾಗುತ್ತದೆ. ಇದರ ಪ್ರಕಾರ ಲೋಕಸಭೆ ಅಥವಾ ವಿಧಾನಸಭೆಗಳು ವಿಸರ್ಜನೆಯಾದ ಬಳಿಕ ನಡೆಯುವ ಚುನಾವಣೆಗಳು 5 ವರ್ಷದ ಅವಧಿಯನ್ನು ಹೊಂದಿರುವುದಿಲ್ಲ. ಉದಾಹರಣೆಗೆ, 2034ರ ಲೋಕಸಭೆ 3 ವರ್ಷದ ಬಳಿಕ ವಿಸರ್ಜನೆಯಾದರೆ, “ಅವಧಿ ಪೂರೈಸದ ಚುನಾವಣೆ’ಯನ್ನು ನಡೆಸಲಾಗುತ್ತದೆ. ಇದರ ಪ್ರಕಾರ ಮುಂಬರುವ ಲೋಕಸಭೆಯ ಅವಧಿ 2 ವರ್ಷದ್ದು ಮಾತ್ರ ಆಗಿರುತ್ತದೆ. ಬಳಿಕ 2039ರಲ್ಲಿ ಏಕ ಚುನಾವಣೆ ನಡೆಯಲಿದೆ.
ಏನೆಲ್ಲ ತಿದ್ದುಪಡಿ ಅಗತ್ಯ? ಏಕ ಚುನಾವಣೆಯನ್ನು ಜಾರಿ ಮಾಡಬೇಕಿದ್ದರೆ ಸಂವಿಧಾನದ 82, 83, 172 ಮತ್ತು 237ನೇ ವಿಧಿಗಳಿಗೆ ತಿದ್ದುಪಡಿ ತರಬೇಕಿದೆ. ಇದರ ಜತೆಗೆ ಕೇಂದ್ರಾಡಳಿತ ಪ್ರದೇಶ ಕಾಯ್ದೆ, ಜಮ್ಮು -ಕಾಶ್ಮೀರ ಪುನರ್ ಸಂಘಟನ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಿದೆ.
ಹೇಗಿರಲಿದೆ ಪ್ರಕ್ರಿಯೆ? ಏಕಚುನಾವಣೆಗೆ ಅವಶ್ಯವಿರುವ ಸಂವಿಧಾನ ತಿದ್ದುಪಡಿಗಳನ್ನು ಕೈಗೊಂಡ ಬಳಿಕ ಮುಂದಿನ ಲೋಕಸಭೆ ಚುನಾವಣೆಯ ಬಳಿಕ ರಾಷ್ಟ್ರಪತಿ ಈ ಕಾನೂನನ್ನು ಜಾರಿ ಮಾಡಲಿದ್ದಾರೆ. ಇದಾದ ಬಳಿಕ ಎಲ್ಲ ವಿಧಾನಸಭೆಗಳ ಅವಧಿಯನ್ನು ಕಡಿತಗೊಳಿಸುವ ಅಥವಾ ಹೆಚ್ಚಿಸುವ ಮೂಲಕ ಅವುಗಳ ಅವಧಿಯನ್ನು 2034ರ ಲೋಕಸಭೆ ಚುನಾವಣೆಯೊಂದಿಗೆ ಹೊಂದಿಕೆ ಮಾಡಲಾಗುತ್ತದೆ. ಇದಾದ ಬಳಿಕ ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಯಲಿದೆ.
ನಾಳೆ ಏಕ ಚುನಾವಣೆ ಮಸೂದೆ ಮಂಡನೆ
ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ತರಬೇಕಿರುವ ಸಾಂವಿಧಾನಿಕ ತಿದ್ದುಪಡಿಗಳನ್ನು ಒಳಗೊಂಡ 129ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಲಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆಯನ್ನು ಮಂಡಿಸಲಿದ್ದು, ಇದು ದೇಶದ ಚುನಾವಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಲಿದೆ. 129ನೇ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ
Bengaluru: ಡಿಸಿಆರ್‌ಇನಲ್ಲಿ ಅವ್ಯವಹಾರ: ಎಸ್‌ಡಿಎ ವಿರುದ್ದ ಕೇಸ್
Australia vs India 3rd Test ; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್
India vs West Indies ವನಿತಾ ಟಿ20:ಸತತ ವೈಫಲ್ಯ ಕಾಣುತ್ತಿರುವ ಕೌರ್ ನಾಯಕತ್ವಕ್ಕೆ ಸವಾಲು
T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.