RBI; ಅಡಮಾನ ರಹಿತ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಹೆಚ್ಚಳ
Team Udayavani, Dec 15, 2024, 5:53 AM IST
ಹೊಸದಿಲ್ಲಿ: ಹೊಸ ವರ್ಷ 2025ಕ್ಕೆ ರೈತರಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗುಡ್ ನ್ಯೂಸ್ ಕೊಟ್ಟಿದ್ದು ಜನವರಿ 1ರಿಂದ ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 2 ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಹಿಂದೆ ಇದು 1.60 ಲಕ್ಷ ರೂ. ಇತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗಲಿದೆ. ಉತ್ಪಾದನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ದೇಶದ ಶೇ.86 ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಹೊಸ ಸಾಲ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಇತ್ತೀಚೆಗಷ್ಟೇ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೃಷಿ ಸಾಲ ಮಿತಿ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಘನ ವಾಹನ ನಿಷೇಧಿಸಲ್ಪಟ್ಟಿರುವ ಅಡ್ಡೂರು ಸೇತುವೆ ಗಾರ್ಡ್ ಗೆ ಹಾನಿ
Yakshagana; ಇಲ್ಲಿ ಎಲ್ಲವೂ ಇದೆ, ಹೊಸತನದ ಆವಿಷ್ಕಾರ ಅಗತ್ಯ ಇಲ್ಲ: ಕೊಕ್ಕಡ ಈಶ್ವರ ಭಟ್
Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ
Bengaluru: ಡಿಸಿಆರ್‌ಇನಲ್ಲಿ ಅವ್ಯವಹಾರ: ಎಸ್‌ಡಿಎ ವಿರುದ್ದ ಕೇಸ್
Australia vs India 3rd Test ; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.