Loksabha; ‘ತಪಸ್ಸಿನ ಉದ್ದೇಶ ಉಷ್ಣ ಉತ್ಪತ್ತಿ’ ಎಂದ ರಾಹುಲ್‌ ಗಾಂಧಿಗೆ ಬಿಜೆಪಿ ಲೇವಡಿ


Team Udayavani, Dec 15, 2024, 6:30 AM IST

1-RAGA

ಹೊಸದಿಲ್ಲಿ: ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯ ವೇಳೆ ಶನಿವಾರ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ನೀಡಿದ “ಶರೀರದಲ್ಲಿ ಉಷ್ಣದ ಉತ್ಪತ್ತಿಯೇ ತಪಸ್ಸಿನ ಉದ್ದೇಶ’ ಎಂಬ ಹೇಳಿಕೆಯನ್ನು ಉಲ್ಲೇಖೀಸಿ ಆಡಳಿತಾರೂಢ ಬಿಜೆಪಿ ನಾಯಕರು ವಿಪಕ್ಷ ನಾಯಕನ ಕಾಲೆಳೆದಿದ್ದಾರೆ.

ರಾಹುಲ್‌ ಈ ಹೇಳಿಕೆ ನೀಡುತ್ತಿದ್ದಂತೆಯೇ ಸದನ ನಗೆಗಡಲಲ್ಲಿ ತೇಲಿದ್ದು, ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ ನಾಯಕರೆಲ್ಲರೂ ಗೊಳ್ಳೆಂದು ನಕ್ಕಿದ್ದು ಕಂಡುಬಂತು. ಇನ್ನು, ರಾಹುಲ್‌ ಹೇಳಿಕೆಯ ವೀಡಿಯೋ ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ಸಂಬಿತ್‌ ಪಾತ್ರಾ, “ರಾಹುಲ್‌ ಅವರಿಗೆ ಇಂಥ ಅದ್ಭುತ ಜ್ಞಾನ ಬರುವುದು ಜಾರ್ಜ್‌ ಸೊರೊಸ್‌ರಿಂದ. ರಾಹುಲ್‌ ಅವರು ಪ್ರಮಾದಗಳ ಅನಭಿಷಿಕ್ತ ದೊರೆಯಾಗಿಯೇ ಉಳಿದಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಏಕಲವ್ಯನ ಕಥೆ ಉಲ್ಲೇಖೀಸಿ ಮೋದಿ, ಅದಾನಿ ವಿರುದ್ಧ ರಾಹುಲ್‌ ವಾಗ್ಧಾಳಿ
ರಾಹುಲ್‌ ಗಾಂಧಿ, ಮಹಾಭಾರತದಲ್ಲಿನ ದ್ರೋಣಾಚಾರ್ಯ-ಏಕಲವ್ಯ ಕಥೆಯನ್ನು ಪ್ರಸ್ತಾವಿ ಸುವ ಮೂಲಕ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಈ ಮೂಲಕ ಉದ್ಯಮಿ ಗೌತಮ್‌ ಅದಾನಿಗೆ ಕೇಂದ್ರ ಮಣೆ ಹಾಕುತ್ತಿರುವ ಬಗ್ಗೆ ಉಲ್ಲೇಖೀಸಿದ್ದಾರೆ.

“ಏಕಲವ್ಯ ಎಂಬ ಯುವಕ ಮುಂಜಾನೆಯೇ ಎದ್ದು ಬಿಲ್ವಿದ್ಯೆ ಅಭ್ಯಾಸ ಮಾಡುತ್ತಿದ್ದ. ಇದು ಆತನ ತಪಸ್ಸಾಗಿತ್ತು. ತಪಸ್ಸು ಎಂದರೆ ಶರೀರದಲ್ಲಿ ತಾಪವನ್ನು ಉತ್ಪತ್ತಿ ಮಾಡುವುದು’ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದಂತೆ, ಇಡೀ ಸದನದ ನಗೆಗಡಲಲ್ಲಿ ತೇಲಿತು. ಮಾತು ಮುಂದುವರಿಸಿದ ರಾಹುಲ್‌, “ಆ ಏಕಲವ್ಯನ ಬೆರಳುಗಳನ್ನು ದ್ರೋಣಾಚಾರ್ಯರು ಕತ್ತರಿಸಿದರೆ, ಈಗ ಮೋದಿ ಸರಕಾರವು ದೇಶದ ಯುವಕರ ಬೆರಳುಗಳನ್ನು ಕತ್ತರಿಸುತ್ತಿದೆ. ದೇಶದ ವಿವಿಧ ಕ್ಷೇತ್ರಗಳನ್ನು ಒಬ್ಬ ಉದ್ಯಮಿಯ ಕೈಗೆ ನೀಡುತ್ತಿದೆ. ಧಾರಾವಿಯನ್ನು ಅದಾನಿಗೆ ಕೊಟ್ಟೊಡನೆ, ದೇಶದ ಇತರ ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬೆರಳು ಕತ್ತರಿಸಿದಂತೆ, ದೇಶದ ಬಂದರು, ಏರ್‌ಪೋರ್ಟ್‌ಗಳು, ರಕ್ಷಣ ಉದ್ದಿಮೆಗಳನ್ನು ಅದಾನಿಗೆ ಹಸ್ತಾಂತರಿಸಿದೊಡನೆ, ನ್ಯಾಯಯುತವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಉದ್ದಿಮೆಗಳ ಬೆರಳು ಕತ್ತರಿಸಿದಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

rain-1

Report! ; ದೇಶದ 11 ಜಿಲ್ಲೆಗಳಲ್ಲಿ ಬರ,ಪ್ರವಾಹ ಅಬ್ಬರ!!

1-geo

Football ಮಾಜಿ ತಾರೆ ಮಿಖಾಯಿಲ್‌ ಈಗ ಜಾರ್ಜಿಯಾ ಅಧ್ಯಕ್ಷ

1-derss

BJP patriarch ಎಲ್.ಕೆ. ಅಡ್ವಾಣಿ ಐಸಿಯುಗೆ ಶಿಫ್ಟ್; ಸ್ಥಿತಿ ಸ್ಥಿರ

yakshagana

Yakshagana; ಇಲ್ಲಿ ಎಲ್ಲವೂ ಇದೆ, ಹೊಸತನದ ಆವಿಷ್ಕಾರ ಅಗತ್ಯ ಇಲ್ಲ: ಕೊಕ್ಕಡ ಈಶ್ವರ ಭಟ್‌

1-pandit

Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ

1-travis

Australia vs India 3rd Test ; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rain-1

Report! ; ದೇಶದ 11 ಜಿಲ್ಲೆಗಳಲ್ಲಿ ಬರ,ಪ್ರವಾಹ ಅಬ್ಬರ!!

1-derss

BJP patriarch ಎಲ್.ಕೆ. ಅಡ್ವಾಣಿ ಐಸಿಯುಗೆ ಶಿಫ್ಟ್; ಸ್ಥಿತಿ ಸ್ಥಿರ

1-techie

Bengaluru ಟೆಕ್ಕಿ ಆತ್ಮಹ*ತ್ಯೆ; ಪತ್ನಿ, ಆಕೆಯ ತಾಯಿ, ಸಹೋದರ ಪೊಲೀಸರ ಬಲೆಗೆ

PM Modi

PM Modi; ವಿಕಸಿತ ಭಾರತಕ್ಕೆ 11 ನಿರ್ಣಯ: ಇಲ್ಲಿದೆ ಪಟ್ಟಿ

1-bihar

Bihar: ಶಿಕ್ಷಕನನ್ನು ಅಪಹರಿಸಿ ಮಹಿಳೆ ಜತೆ ಬಲವಂತದ ವಿವಾಹ!

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

rain-1

Report! ; ದೇಶದ 11 ಜಿಲ್ಲೆಗಳಲ್ಲಿ ಬರ,ಪ್ರವಾಹ ಅಬ್ಬರ!!

11-anandpura

Anandapura: ಮದುವೆಯಾಗಿಲ್ಲವೆಂದು ಮನನೊಂದು ಯುವಕ ನೇಣಿಗೆ ಶರಣು

1-geo

Football ಮಾಜಿ ತಾರೆ ಮಿಖಾಯಿಲ್‌ ಈಗ ಜಾರ್ಜಿಯಾ ಅಧ್ಯಕ್ಷ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.