Manipal: ಬೈಕ್ ಸವಾರನ ಜೀವಕ್ಕೆ ಎರವಾದ ಮರಳು ಅಕ್ರಮ ಸಾಗಾಟದ ಟಿಪ್ಪರ್
ರಾತ್ರಿ ವೇಳೆ ನಿಯಮಾವಳಿಗಳ ಪಾಲಿಸದೇ ಅವ್ಯಾಹತ ಮರಳು ದಂಧೆ
Team Udayavani, Dec 15, 2024, 7:45 AM IST
ಮಣಿಪಾಲ: ಅಲೆವೂರು- ಮಣಿಪಾಲ ರಸ್ತೆಯ ಶಾಂತಿನಗರದ ಬಳಿಯ ತಿರುವಿನಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಜನಾರ್ದನ ಎಂಬವರು ಸಾವನ್ನಪ್ಪಿದ್ದು, ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಘಟನೆಗೆ ಕಾರಣವಾದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮಹಜರು ನಡೆಸಲು ತೆರಳಿದ ವೇಳೆ ಟಿಪ್ಪರ್ ವಾಹನದಲ್ಲಿ ಸುಮಾರು 2.5 ಯುನಿಟ್ ಮರಳು ಇರುವುದು ಕಂಡು ಬಂದಿದೆ. ಟಿಪ್ಪರ್ ಚಾಲಕ ಹಾಗೂ ಮಾಲಕ ಸೇರಿಕೊಂಡು ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಅಕ್ರಮ ವಾಗಿ ಮರಳು ಸಾಗಾಟ ಮಾಡುತ್ತಿದ್ದುದು ತಿಳಿದುಬಂದಿದೆ.
ಅಲೆವೂರು-ಮಣಿಪಾಲ ಭಾಗದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಾಹನಗಳು ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದು, ಇತರ ವಾಹನಗಳ ಸಂಚಾರ ಕಷ್ಟಕರ ವಾಗುತ್ತಿದೆ. ತಿರುವುಗಳಿಂದ ಕೂಡಿದ ಈ ರಸ್ತೆಯಲ್ಲಿ ಮರಳು ಸಾಗಾಟದ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಪೊಲೀಸರು ಹಾಗೂ ಗಣಿ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾತ್ರಿ ವೇಳೆ ಮರಳು ಸಾಗಾಟ
ಮರಳು ಸಾಗಾಟ ಮಾಡಲು ಹಲವಾರು ನಿಯಮಾವಳಿಗಳಿದ್ದು, ಹಗಲು ಹೊತ್ತಿನಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ತಪಾಸಣೆ ಮಾಡಲಾಗು ತ್ತದೆ. ಆದರೆ ರಾತ್ರಿ ವೇಳೆ ಯಾವುದೇ ನಿಯಮಾವಳಿಗಳನ್ನು ಪಾಲನೆ ಮಾಡದೆ ಮರಳನ್ನು ಎಲ್ಲೆಂದರಲ್ಲಿ ಸಾಗಾಟ ಮಾಡಲಾಗುತ್ತಿದೆ.
ಮುಖ್ಯವಾಗಿ ನಗರದ ಒಳರಸ್ತೆಗಳು ಹಾಗೂ ಗ್ರಾಮೀಣ ಭಾಗದಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾತ್ರಿ ವೇಳೆ ಇತರ ವಾಹನ ಸವಾರರು ಭಯದಿಂದಲೇ ವಾಹನ ಚಲಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಕಾರಣವಾದ ಟಿಪ್ಪರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ; ಸಮ್ಮಾನ
Udupi: ರಾಷ್ಟ್ರೀಯ ಲೋಕ ಅದಾಲತ್: ಗಾಲಿ ಕುರ್ಚಿಯಲ್ಲಿ ಬಂದು ಸಹೋದರನೊಂದಿಗೆ ರಾಜಿಯಾದ ವೃದ್ಧ
Karkala: ಕುದುರೆಮುಖದಲ್ಲಿ ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ
Navy: ಪಶ್ಚಿಮ ಕಮಾಂಡ್‌ನ ಮೆಡಿಕಲ್ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು
MUST WATCH
ಹೊಸ ಸೇರ್ಪಡೆ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ
Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.