Udupi: ರಾಷ್ಟ್ರೀಯ ಲೋಕ ಅದಾಲತ್: ಗಾಲಿ ಕುರ್ಚಿಯಲ್ಲಿ ಬಂದು ಸಹೋದರನೊಂದಿಗೆ ರಾಜಿಯಾದ ವೃದ್ಧ
ಆರು ವರ್ಷಗಳಿಂದ ಪ್ರತ್ಯೇಕಗೊಂಡಿದ್ದ ದಂಪತಿಗೆ "ಪುನರ್‌ವಿವಾಹ'
Team Udayavani, Dec 15, 2024, 7:30 AM IST
ಉಡುಪಿ: ಶನಿವಾರ ಜರಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 81 ವರ್ಷದ ಕೃಷ್ಣಪ್ಪ ಗಾಲಿ ಕುರ್ಚಿಯಲ್ಲಿ ಆಗಮಿಸಿ ತನ್ನ ಸಹೋದರ 80 ವರ್ಷದ ಮಹಾಬಲ ಶೆಟ್ಟಿ ಮತ್ತು ಇತರರ ವಿರುದ್ಧ ಸಲ್ಲಿಸಿದ್ದ ದಾವೆಯನ್ನು ರಾಜಿ ಮಾಡಿಕೊಂಡರು.
ಕೃಷ್ಣಪ್ಪ ಶೆಟ್ಟಿ ತನ್ನ 20 ಮಂದಿ ಸಂಬಂಧಿಕರ ವಿರುದ್ಧ ಆಸ್ತಿ ವಿಭಾಗ ಕೋರಿ ಉಡುಪಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿಗೆ ದಾವೆ ಸಲ್ಲಿಸಿದ್ದರು. ಇದನ್ನು ರಾಜಿ ಮೂಲಕ ಸಂಧಾನಪಡಿಸುವಲ್ಲಿ ದೂರುದಾರರ ಪರ ವಕೀಲರಾದ ಎಂ.ಮನೋಹರ ಶೆಟ್ಟಿ ಮತ್ತು ಪ್ರತಿವಾದಿ ವಕೀಲರಾದ ಎಚ್.ರಾಘವೇಂದ್ರ ಶೆಟ್ಟಿ ಪಾತ್ರವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್.ಗಂಗಣ್ಣನವರು ಶ್ಲಾಘಿಸಿದರು.
ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಜೀತು ಆರ್.ಎಸ್., ವಕೀಲರಾದ ಮಿಥುನ್ ಕುಮಾರ್ ಮತ್ತು ಡಿಎಲ್‌ಎಸ್‌ಎ ಸಹ ಕಾರ್ಯದರ್ಶಿ ಯೋಗೀಶ್ ಪಿ.ಆರ್. ಮೊದಲಾದವರು ಉಪಸ್ಥಿತರಿದ್ದರು.
ಆರು ವರ್ಷಗಳಿಂದ ಪ್ರತ್ಯೇಕಗೊಂಡಿದ್ದ ದಂಪತಿಗೆ “ಪುನರ್‌ವಿವಾಹ’
ಉಡುಪಿ: ಆರು ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಯನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆಯೊಂದಿಗೆ ಪುನಃ ಸಾಂಸಾರಿಕ ಜೀವನ ಸಾಗಿಸಲು ಅನುವು ಮಾಡಿಕೊಟ್ಟ ಸನ್ನಿವೇಶ ಶನಿವಾರ ರಾಷ್ಟ್ರಿಯ ಲೋಕ ಅದಾಲತ್‌ನಲ್ಲಿ ನಡೆಯಿತು.
ಸೊರಬದ ರಾಘವೇಂದ್ರ ಆಚಾರ್ಯ ಅವರು ಮಂದಾರ್ತಿ ಮುದ್ದುಮನೆಯ ಮಾಲತಿ ಅವರೊಂದಿಗೆ 2018ರ ಎಪ್ರಿಲ್‌ನಲ್ಲಿ ಯಡ್ತಾಡಿಯ ಚಾಮುಂಡೇಶ್ವರಿ ಸಭಾ ಭವನದಲ್ಲಿ ವಿವಾಹವಾಗಿದ್ದರು. ಮದುವೆ ಆದ ಸ್ವಲ್ಪ ಸಮಯದ ಬಳಿಕ ಮಾಲತಿ ತವರು ಮನೆಗೆ ಬಂದು ಸೇರಿದ್ದರು.
ಈ ದಂಪತಿಗೆ ಗಂಡು ಮಗುವಿದ್ದು, ಪರಸ್ಪರ ಭಿನ್ನಾಭಿಪ್ರಾಯದಿಂದ ಮಾಲತಿ ತನ್ನ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಶನಿವಾರ ನಡೆದ ಅದಾಲತ್‌ನಲ್ಲಿ ಅರ್ಜಿದಾರರು ಮತ್ತು ಎದುರುದಾರರನ್ನು ಒಟ್ಟಾಗಿ ಜೀವನ ಸಾಗಿಸುವಂತೆ ನ್ಯಾಯಾಧೀಶರು ಮನವೊಲಿಸುವಲ್ಲಿ ಸಫಲರಾದರು. ಬಳಿಕ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಖುಷಿಪಟ್ಟರು.
ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 30,302 ಪ್ರಕರಣ ಇತ್ಯರ್ಥ
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 30,302 ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ 19,50,38,019 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ; ಸಮ್ಮಾನ
Manipal: ಬೈಕ್ ಸವಾರನ ಜೀವಕ್ಕೆ ಎರವಾದ ಮರಳು ಅಕ್ರಮ ಸಾಗಾಟದ ಟಿಪ್ಪರ್
Karkala: ಕುದುರೆಮುಖದಲ್ಲಿ ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ
Navy: ಪಶ್ಚಿಮ ಕಮಾಂಡ್‌ನ ಮೆಡಿಕಲ್ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು
MUST WATCH
ಹೊಸ ಸೇರ್ಪಡೆ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ
Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.