Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Team Udayavani, Dec 15, 2024, 8:17 AM IST
ಮೇಷ: ಕಾರ್ಯಾಲಯಕ್ಕೆ ರಜೆಯಾದ ಕಾರಣ ಸಂಸಾರದ ಕಡೆಗೆ ಮಾತ್ರ ಗಮನ. ಬಂಧುಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಯೋಚನೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ.
ವೃಷಭ: ಕಚೇರಿ ಕೆಲಸಗಳಿಗೆ ವಿರಾಮ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಭಜನೆ, ಕೀರ್ತನೆ, ಸತ್ಸಂಗಕ್ಕೆ ಸಮಯ ಮೀಸಲು.
ಮಿಥುನ: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವಿದ್ಯಾರ್ಥಿಗಳಿಗೆ ಆಲಸ್ಯದ ಪೀಡೆ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ವೃದ್ಧಾಶ್ರಮಕ್ಕೆ ಭೇಟಿ, ಹಿರಿಯರಿಗೆ ಆನಂದ.
ಕರ್ಕಾಟಕ: ಹಳೆಯದನ್ನು ಮೆಲುಕು ಹಾಕುವುದರಲ್ಲಿ ಕಾಲ ಕಳೆಯದಿರಿ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಛಲದಿಂದ ಉನ್ನತಿ ಸಾಧಿಸಿದ ವ್ಯಕ್ತಿಯ ಭೇಟಿ.
ಸಿಂಹ: ಪರೋಪಕಾರ ಮಾಡಲು ಒದಗಿಬಂದ ಅವಕಾಶ. ವೃತ್ತಿಪರರಿಗೆ ಕೆಲಸದ ಒತ್ತಡ ಆರಂಭ. ಹಿರಿಯರ ಸ್ವಾಸ್ಥ್ಯದ ಕಡೆಗೆ ಗಮನ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ. ಇಷ್ಟಾರ್ಥ ಸಿದ್ಧಿಗಾಗಿ ದೇವತಾ ಪ್ರಾರ್ಥನೆ.
ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ. ಉದ್ಯೋಗಾಸಕ್ತರಿಗೆ ಶುಭ ಸಮಾಚಾರ.
ತುಲಾ: ರಜಾದಿನವಾದರೂ ಕೈತುಂಬಾ ಕೆಲಸಗಳು. ವ್ಯವಹಾರ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಗೆ ಸಮಯ.
ವೃಶ್ಚಿಕ: ಸ್ವಗೃಹದಲ್ಲಿ ದೇವತಾರಾಧನೆ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ಮಕ್ಕಳ ಉದ್ಯಮ ಸುಧಾರಣೆ. ನೆರೆಯವರ ಸಹಕಾರದಿಂದ ಕಾರ್ಯ ಮುಕ್ತಾಯ.
ಧನು: ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ದಂಪತಿಗಳ ನಡುವೆ ಅನುರಾಗ ವೃದ್ಧಿ . ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ.
ಮಕರ: ಕುಟುಂಬದಲ್ಲಿ ಸಂತೋಷದ ಸಮಾರಂಭ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ.ಇಷ್ಟದೇವತಾ ಮಂದಿರ ಸಂದರ್ಶನ.
ಕುಂಭ: ಪುಣ್ಯಕಾರ್ಯಗಳಲ್ಲಿ ಪಾಲುಗೊಳ್ಳುವಿಕೆ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಅಪರೂಪದ ಬಂಧುಗಳ ಆಗಮನ, ಸಣ್ಣ ಪ್ರವಾಸ ಸಂಭವ.
ಮೀನ: ಸೋಮವಾರದ ಕೆಲಸಗಳಿಗೆ ಪೂರ್ವಸಿದ್ಧತೆ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸಹಚಿಂತನ. ಹಳೆಯ ಸಹಚರರ ಭೇಟಿ. ಕುಟುಂಬದಲ್ಲಿ ಶುಭಕಾರ್ಯಕ್ಕೆ ತಯಾರಿ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ
Daily Horoscope;ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಕಾರ್ಯಗಳು ಶೀಘ್ರ ಮುಕ್ತಾಯ
Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ
MUST WATCH
ಹೊಸ ಸೇರ್ಪಡೆ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ
Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.