Bengaluru: ಟೆಕಿ ಅತುಲ್ ಆತ್ಮಹತ್ಯೆ ಕೇಸ್: ಕಾನೂನು ಸುಧಾರಣೆಗೆ ಆಗ್ರಹ
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಆಗ್ರಹ
Team Udayavani, Dec 15, 2024, 9:00 AM IST
ಬೆಂಗಳೂರು: ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಕುರಿತು ಸಮಿತಿ ರಚಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ವಿಚ್ಛೇದನ, ವೈವಾಹಿಕ ವಿವಾದಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆ ತರಬೇಕು ಎಂದು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಸಹ ಸಂಸ್ಥಾಪಕ ಅನಿಲ್ ಮೂರ್ತಿ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷದಿಂದ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ವಿಚ್ಛೇದನ ಪಡೆದ ಬಳಿಕ ಪತ್ನಿಗೆ ನೀಡುವ ಜೀವನಾಂಶದ ಹಣ ಎಂಬುದನ್ನು ರದ್ದುಪಡಿಸಿ “ಸಹಾಯನಿಧಿ’ ಎಂದು ಬದಲಿಸಬೇಕು. ದೈಹಿಕ, ಮಾನಸಿಕ ಅಸಮರ್ಥ ರನ್ನು ಹೊರತುಪಡಿಸಿ ಸಿಎ, ಎಂಬಿಎ, ವೈದ್ಯರು, ಎಂಜಿನಿಯರಿಂಗ್ ಸೇರಿದಂತೆ ತೆರಿಗೆ ಪಾವತಿದಾರರು ಜೀವನಾಂಶಕೋರಿ ಸಲ್ಲಿಸುವ ಅರ್ಜಿಗಳನ್ನು ಆರಂಭದಲ್ಲಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಸಂಸ್ಥಾಪಕ ಪಾಂಡುರಂಗಶೆಟ್ಟಿ, ವಕೀಲ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಟೆಕಿ ಪತ್ನಿ
ಪ್ರಯಾಗ್‌ರಾಜ್: ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸುಭಾಷ್ ವಿಚ್ಛೇದಿತ ಪತ್ನಿ ಮತ್ತವರ ಕುಟುಂಬ ಶನಿ ವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ಜತೆಗೆ ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರವಷ್ಟೇ ಬೆಂಗಳೂರು ಪೊಲೀಸರು ನಿಖೀತಾ ವಿರುದ್ಧ ಸಮನ್ಸ್ ಜಾರಿಗೊಳಿಸಿ, ಸೋಮ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಪತ್ನಿಯ ಕಿರುಕುಳದಿಂದ ಬೇಸತ್ತಿದ್ದೇನೆಂದು ಡೆತ್‌ನೋಟ್ ಬರೆದು ಪತಿ ಆತ್ಮಹ*ತ್ಯೆ!
US President ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ ಮೋದಿ
Udupi; ಶ್ರೀಕೃಷ್ಣ ಮಠದಲ್ಲಿ ಜ. 29ರಂದು ‘ಸಹಸ್ರ ಕಂಠ ಗಾಯನ’
Run Away: ಗ್ರಾಮಸ್ಥರ ಹೆಸರಲ್ಲಿ 50 ಲಕ್ಷ ರೂ.ಸಾಲ ಪಡೆದು ದಂಪತಿ ಪರಾರಿ!
BBK11: ನನಗೆ ನೂರೆಂಟು ಮಾಜಿ ಗೆಳತಿಯರು ಇದ್ದಾರೆ..ನನ್ನ ಲೈಫ್ ನಾನು ನೋಡಿಕೊಳ್ತೇನೆ ಎಂದ ರಜತ್