Australia vs India 3rd Test; ಭಾರತಕ್ಕೆ ಮತ್ತೆ ತಲೆ ನೋವಾದ ಹೆಡ್,ಸ್ಮಿತ್ ಅಮೋಘ ಶತಕಗಳು
ಎರಡನೇ ದಿನದಾಟದ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತ್ತು..
Team Udayavani, Dec 15, 2024, 10:37 AM IST
ಬ್ರಿಸ್ಬೇನ್: ಭಾರತ- ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ರವಿವಾರ (ಡಿ15)ಎರಡನೇ ದಿನದಾಟದ ಆರಂಭದಲ್ಲಿ ಭಾರತದ ಬೌಲರ್ ಗಳು ಆರಂಭಿಕ ಮೇಲುಗೈ ಸಾಧಿಸಿದರಾದರೂ ಟ್ರಾವಿಸ್ ಹೆಡ್ ಮತ್ತು ಸ್ಮಿತ್ ಅಮೋಘ ಶತಕಗಳನ್ನು ಸಿಡಿಸಿ ತಲೆನೋವಾಗಿ ಪರಿಣಮಿಸಿದರು.
ಮಳೆಯಿಂದ ಭಾರೀ ಅಡಚಣೆ ಆಗಿ ಶನಿವಾರದ ಮೊದಲ ದಿನದಾಟ ಕೇವಲ 13.2 ಓವರ್‌ಗಳಿಗೆ ಸೀಮಿತಗೊಂಡಿತ್ತು. ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 28 ರನ್ ಮಾಡಿತ್ತು.
ಇಂದು ಆಸ್ಟ್ರೇಲಿಯದ ಆರಂಭಿಕರಾದ ಉಸ್ಮಾನ್ ಖ್ವಾಜಾ(21) ಮತ್ತು ನಥನ್ ಮೆಕ್‌ಸ್ವೀನಿ(9) ರನ್ ಗಳಿಸಿದ್ದ ವೇಳೆ ವೇಗಿ ಬುಮ್ರಾ ಔಟ್ ಮಾಡುವಲ್ಲಿ ಯಶಸ್ವಿಯಾದರು.
ಸಿರಾಜ್ ಮತ್ತು ಆಕಾಶ್ ದೀಪ್ ವಿರುದ್ಧ ತೀವ್ರ ಎಚ್ಚರಿಕೆಯ ಆಟವಾಡಿದರು. ಖ್ವಾಜಾ 54 ಎಸೆತಗಳಿಂದ 21 ರನ್ (3 ಬೌಂಡರಿ) ಮತ್ತು ಮೆಕ್‌ಸ್ವೀನಿ 49 ಎಸೆತಗಳಿಂದ 9 ರನ್ ಮಾಡಿ ಔಟಾದರು. ಆ ಬಳಿಕ ಲಬು ಶೇನ್ ಅವರನ್ನು ನಿತೀಶ್ ರೆಡ್ಡಿ ಔಟ್ ಮಾಡಿದರು. 12 ರನ್ (55ಎಸೆತ) ಗಳಿಸಿದ್ದ ಅವರು ಪೆವಿಲಿಯನ್ ಗೆ ಮರಳಿದರು.
ಆ ಬಳಿಕ ಬಂದ ಹೆಡ್ ಮತ್ತು ಸ್ಟೀವನ್ ಸ್ಮಿತ್ ಅಮೋಘ ಜತೆಯಾಟ ವಾಡಿ ಭಾರತದ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದರು.ಇಬ್ಬರೂ ಆಕರ್ಷಕ ಶತಕ ಸಿಡಿಸಿದರು.
ಹೆಡ್ ಅಮೋಘ ಶತಕ ಸಿಡಿಸಿದರು. ಹೆಡ್ 152 ರನ್ (160 ಎಸೆತ, 18 ಬೌಂಡರಿ) ಸ್ಮಿತ್ 101 ರನ್ (190 ಎಸೆತ, 12 ಬೌಂಡರಿ) ಗಳಿಸಿ ಔಟಾದರು. ಇಬ್ಬರನ್ನೂ ಪೆವಿಲಿಯನ್ ಗೆ ಕಳುಹಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ 5 ರನ್ ಗೆ ಆಟ ಮುಗಿಸಿದರು. ಬುಮ್ರಾ ಎಸೆದ ಚೆಂಡನ್ನು ಕೊಹ್ಲಿ ಕೈಗಿತ್ತು ನಿರ್ಗಮಿಸಿದರು. ಬುಮ್ರಾ 5 ವಿಕೆಟ್ ಕಿತ್ತ ಸಾಧನೆ ಮಾಡಿದರು. ನಾಯಕ ಕಮಿನ್ಸ್ 20 ರನ್ ಗಳಿಸಿ ಔಟಾದರು. ಸಿರಾಜ್ ವಿಕೆಟ್ ಪಡೆದರು. ಅಲೆಕ್ಸ್ ಕ್ಯಾರಿ 45 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಆಸೀಸ್ 101 ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 405 ರನ್ ಕಲೆ ಹಾಕಿದೆ.
ರವಿವಾರದ ಆಟ ಅರ್ಧ ಗಂಟೆ ಬೇಗ ಆರಂಭವಾಗಿದ್ದು, ಕನಿಷ್ಠ 88 ಓವರ್‌ಗಳನ್ನು ನಿಗದಿಗೊಳಿಸಲಾಗಿತ್ತು
ಟಿಕೆಟ್ ಮೊತ್ತ ವಾಪಸ್
ವೀಕ್ಷಕರಿಗೆ ಮೊದಲ ದಿನದಾಟದ ಟಿಕೆಟ್ ಮೊತ್ತವನ್ನು ವಾಪಸ್ ಮಾಡಲು “ಕ್ರಿಕೆಟ್ ಆಸ್ಟ್ರೇಲಿಯ’ ನಿರ್ಧರಿಸಿದೆ. ಅಲ್ಲಿನ ನಿಯಮದ ಪ್ರಕಾರ, ದಿನದಲ್ಲಿ 15 ಓವರ್‌ಗಿಂತ ಕಡಿಮೆ ಆಟವಷ್ಟೇ ಸಾಧ್ಯವಾದರೆ ಟಿಕೆಟ್ ಮೊತ್ತವನ್ನು ಸಂಪೂರ್ಣವಾಗಿ ಮರಳಿಸಲಾಗುವುದು. ಮೊದಲ ದಿನದ ಆಟದಲ್ಲಿ 30,145 ಪ್ರೇಕ್ಷಕರಿದ್ದರು.
ಎರಡು ಬದಲಾವಣೆ
ಭಾರತ ತಂಡ 2 ಬದಲಾವಣೆಗ ಳೊಂದಿಗೆ ಕಣಕ್ಕಿಳಿಯಿತು. ಆರ್. ಅಶ್ವಿನ್ ಮತ್ತು ಹರ್ಷಿತ್ ರಾಣಾ ಅವರನ್ನು ಕೈಬಿಟ್ಟು ರವೀಂದ್ರ ಜಡೇಜ ಹಾಗೂ ಆಕಾಶ್ ದೀಪ್ ಆವರನ್ನು ಆಡಿಸಿದೆ.
ಆಸ್ಟ್ರೇಲಿಯ ತಂಡಕ್ಕೆ ವೇಗಿ ಜೋಶ್ ಹೇಝಲ್‌ವುಡ್ ಅವರ ಪುನರಾಗಮನವಾಯಿತು. ಗಾಯಾ ಳಾಗಿದ್ದ ಅವರು ಅಡಿಲೇಡ್ ಟೆಸ್ಟ್ ನಲ್ಲಿ ಆಡಿರಲಿಲ್ಲ. ಡೇ-ನೈಟ್ ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಹೊರತಾಗಿಯೂ ಸ್ಕಾಟ್ ಬೋಲ್ಯಾಂಡ್ ಸ್ಥಾನ ಕಳೆದು ಕೊಳ್ಳಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Football ಮಾಜಿ ತಾರೆ ಮಿಖಾಯಿಲ್ ಈಗ ಜಾರ್ಜಿಯಾ ಅಧ್ಯಕ್ಷ
India vs West Indies ವನಿತಾ ಟಿ20:ಸತತ ವೈಫಲ್ಯ ಕಾಣುತ್ತಿರುವ ಕೌರ್ ನಾಯಕತ್ವಕ್ಕೆ ಸವಾಲು
T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ
D.Gukesh: ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಗೆದ್ದ ಹಣವೆಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.