Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ

ಚಿಟ್ಟೆಗಳಿಗೆ ಆಸರೆಯಾಗಿವೆ ಪಾರ್ಕ್‌ನಲ್ಲಿನ ವಿವಿಧ ತಳಿಗಳ ಮಕರಂದದ ಸಸ್ಯಗಳು ; ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾದ ಪಾರ್ಕ್‌

Team Udayavani, Dec 15, 2024, 1:00 PM IST

12-butterfly-park

1 ಎಕರೆ ಪ್ರದೇಶದಲ್ಲಿ 45ಕ್ಕೂ ಹೆಚ್ಚು ವಿವಿಧ ಪ್ರಬೇಧದ ಬಣ್ಣ ಬಣ್ಣದ ಚಿಟ್ಟೆಗಳು; ಅವಸಾನದ ಹಂತ ತಲುಪುತ್ತಿರುವ ಚಿಟ್ಟೆ ಸಂರಕ್ಷಣೆಗೆ ಐಸಿಎಆರ್‌ ಕ್ರಮ

ಬೆಂಗಳೂರು: ಬೆಳೆ ಉತ್ಪಾದನೆಯಲ್ಲಿ ರೈತ ಸ್ನೇಹಿಯಾಗಿ ಪರಿಸರದ ಸಮತೋಲನದ ಭಾಗವಾಗಿರುವ ಚಿಟ್ಟೆಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಜೀವ ವೈವಿಧ್ಯತೆ ಸಂರಕ್ಷಿಸಿ, ಪೋಷಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ(ಐಸಿಎಆರ್‌) ಇದರ ಭಾಗವಾಗಿ ಯಲಹಂಕದಲ್ಲಿ ನೂತನವಾಗಿ ಚಿಟ್ಟೆ ಉದ್ಯಾನವನ ನಿರ್ಮಿಸಿದೆ.

ಕಲುಷಿತ ವಾತಾವರಣದಲ್ಲಿ ಚಿಟ್ಟೆಗಳ ಸಂತತಿ ಕ್ಷೀಣಿಸುತ್ತಿದ್ದು, ಅವುಗಳ ಪ್ರಬೇಧಗಳನ್ನು ಸಂರಕ್ಷಿಸಿ, ಸಂತಾನೋತ್ಪತ್ತಿ ವೃದ್ಧಿಸಲು ಸುಮಾರು 1 ಎಕರೆ ವಿಸ್ತೀರ್ಣದಲ್ಲಿ ವಿಶೇಷವಾಗಿ ಚಿಟ್ಟೆ ಉದ್ಯಾನ ವಿನ್ಯಾಸಗೊಳಿಸಿದೆ. ಇಲ್ಲಿ ಸ್ಥಳೀಯ ಪ್ರದೇಶ ಮಾತ್ರವಲ್ಲದೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡು ಬರುವ ಐಡಿಯಾ ಮಲಬಾರಿಕಾ, ಕೈಸರ್‌ ಇ-ಹಿಂದ್‌ ಸೇರಿದಂತೆ 45ಕ್ಕೂ ಹೆಚ್ಚು ವಿವಿಧ ಪ್ರಬೇಧದ ಬಣ್ಣ ಬಣ್ಣದ ಚಿಟ್ಟೆಗಳಿವೆ. ಕಡಿಮೆ ಜೀವಿತಾವಧಿ ಇರುವ ಚಿಟ್ಟೆಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪೂರಕವಾಗಿ ಉದ್ಯಾನದಲ್ಲಿ ಬಟರ್‌ ಫ್ಲೈ ಬುಷ್‌, ಮಿಲ್ಕ್ ವಿಡ್‌ ಸೇರಿದಂತೆ ವಿವಿಧ ಜಾತಿಯ ಮಕರಂದದ ಸಸ್ಯಗಳನ್ನು ಬೆಳೆಸಲಾಗಿದೆ. ಮುಖ್ಯವಾಗಿ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರಿಕರಿಸಿಕೊಂಡು ನಿರ್ಮಿಸಿರುವ ಉದ್ಯಾನ ಸಂಶೋಧನಾ ವಿದ್ಯಾರ್ಥಿಗಳ ಜೊತೆಗೆ ನೋಡುಗರನ್ನು ಆಕರ್ಷಿಸುತ್ತಿದೆ.

ಚಿಟ್ಟೆಗಳು ಆರೋಗ್ಯಕರ ಪರಿಸರದ ಸೂಚಕ ಮಾತ್ರವಲ್ಲದೆ, ಬೆಳೆಗಳ ಪರಾಗಸ್ಪರ್ಶಕ್ಕೆ ರೈತ ಸ್ನೇಹಿಯಾಗಿ ಕೊಡುಗೆ ನೀಡುತ್ತಿವೆ. ಇದು ಬೆಳೆ ಉತ್ಪಾದನೆ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಜೀವವೈವಿಧ್ಯ ಸಂರಕ್ಷಣೆಯಲ್ಲಿ ಚಿಟ್ಟೆ ಉದ್ಯಾನವನ ನಿರ್ಮಾಣ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ (ಬೆಳೆ ವಿಜ್ಞಾನ) ಡಾ.ಟಿ.ಆರ್‌.ಶರ್ಮಾ ಹೇಳಿದರು.

ಚಿಟ್ಟೆ ಉದ್ಯಾನವು ಶೈಕ್ಷಣಿಕ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಲಿದೆ. ಆವಸಾನದ ಹಂತ ತಲುಪುತ್ತಿರುವ ಚಿಟ್ಟೆಗಳನ್ನು ಸಂರಕ್ಷಣೆ ಮಾಡಿ ಉಳಿಸಿ ಪರಿಸರ ಸಮತೋಲನ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿ ಹೆಚ್ಚಬೇಕು ಎಂದರು.

ಚಿಟ್ಟೆ ಸಂತಾನೋತ್ಪತ್ತಿ ವೃದ್ಧಿಸಲು ಯೋಜನೆ

ಬನ್ನೇರುಘಟ್ಟದಲ್ಲಿರುವ ಚಿಟ್ಟೆ ಉದ್ಯಾನ ಪ್ರವಾಸಿಗರನ್ನು ಕೇಂದ್ರಿಕರಿಸಿ ನಿರ್ಮಿಸಲಾಗಿದೆ. ಆದರೆ, ಯಲಹಂಕದಲ್ಲಿ ವಿನ್ಯಾಸಗೊಳಿಸಿರುವ ಉದ್ಯಾನ ಸಂಶೋಧನೆ ಮೂಲಕ ಚಿಟ್ಟೆಗಳ ಸಂತಾನೋತ್ಪತ್ತಿ ವೃದ್ಧಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೇರೆ ಬೇರೆ ಕಡೆಗಳಿಂದ ಚಿಟ್ಟೆಗಳನ್ನು ಹಿಡಿದು ತಂದು ಅವುಗಳಿಗೆ ಬೇಕಾದ ವಾತಾವರಣ ರೂಪಿಸಿ ಮಕರಂದದ ಸಸ್ಯಗಳನ್ನು ಆಕರ್ಷಿಸುವಂತೆ ಮಾಡಲಾಗಿದೆ. ಚಿಟ್ಟೆ ಜಾತಿಗಳ ಸಂತಾನೋತ್ಪತ್ತಿ ಹೆಚ್ಚಾದಲ್ಲಿ ಪರಾಗಸ್ಪರ್ಶದ ಮೂಲಕ ಆಹಾರ ಬೆಳೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಭವಿಷ್ಯದ ಪೀಳಿಗೆಗೆ ಚಿಟ್ಟೆಗಳ ಸಂರಕ್ಷಣೆ ಮಾಡಬೇಕಿದೆ ಎಂದು ಕೀಟತಜ್ಞ ಹಾಗೂ ಚಿಟ್ಟೆ ಉದ್ಯಾನ ನೋಡೆಲ್‌ ಅಧಿಕಾರಿ. ಡಾ. ಗುಂಡಪ್ಪ ಮಾಹಿತಿ ನೀಡಿದರು.

ಚಿಟ್ಟೆಗಳ ಆವಾಸ ಸ್ಥಾನಗಳನ್ನು ಸಂರಕ್ಷಿಸಿ ಪರಿಸರದಲ್ಲಿ ರೈತ ಸ್ನೇಹಿ ಯಾದ ಚಿಟ್ಟೆಗಳ ಸಂರಕ್ಷಣೆ, ಮಹತ್ವ ತಿಳಿಸುವ ನಿಟ್ಟಿನಲ್ಲಿ ರೈತರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯವಿದೆ. ಈ ಉದ್ಯಾನವು ಸಮುದಾಯ ವನ್ನು ಸೆಳೆಯಲಿದೆ. ●ಡಾ.ಮಹೇಶ್‌ ಯಂಡಿಗೆರೆ, ರಾಷ್ಟ್ರೀಯ ಕೀಟ ಸಂಪನ್ಮೂಲ ಬ್ಯೂರೋದ ಪ್ರಧಾನ ವಿಜ್ಞಾನಿ.

-ರಘು ಕೆ.ಜಿ

ಟಾಪ್ ನ್ಯೂಸ್

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

21-

Chikkamagaluru: ರೋಬೋಟಿಕ್ ಆನೆಯನ್ನು ಅರಣ್ಯ ಇಲಾಖೆಗೆ ಕೊಡುಗೆ ನೀಡಿದ ಬಾಲಿವುಡ್ ನಟಿ

19-bantwl

Bantwala: ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

14-

Health: ಎಸ್ಸಿ, ಎಸ್ಟಿ: ವಿರಳ ಕಾಯಿಲೆಯಿಂದ ಇನ್ನಷ್ಟು ಸುರಕ್ಷೆ

7-bng

Bengaluru: ಡಿಸಿಆರ್‌ಇನಲ್ಲಿ ಅವ್ಯವಹಾರ: ಎಸ್‌ಡಿಎ ವಿರುದ್ದ ಕೇಸ್‌

6-bng

Bengaluru: ಬಸ್‌ ಚಾಲಕನ ಮೇಲೆ ಮಹಿಳೆ ಹಲ್ಲೆ

4-bng

Bengaluru: ಉದ್ಯಮಿಯ ಕಾರಿನಲ್ಲಿದ್ದ 50 ಲಕ್ಷ ಕದ್ದ ಚಾಲಕ; 4 ತಾಸಿನಲ್ಲಿ ಸೆರೆ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

car-parkala

Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.