Health: ಎಸ್ಸಿ, ಎಸ್ಟಿ: ವಿರಳ ಕಾಯಿಲೆಯಿಂದ ಇನ್ನಷ್ಟು ಸುರಕ್ಷೆ
17 ವಿರಳ-ದುಬಾರಿ ವೆಚ್ಚಗಳ ಕಾಯಿಲೆಗಳಿಗೆ ಅನುದಾನ ಏರಿಕೆ ; 35 ಕೋಟಿ ರೂ. ಇದ್ದ ಕಾರ್ಪಸ್ ನಿಧಿ 47 ಕೋಟಿ ರೂ.ಗೆ ಹೆಚ್ಚಳ
Team Udayavani, Dec 15, 2024, 2:00 PM IST
ಬೋನ್ ಮ್ಯಾರೋ ಟ್ರಾನ್‌ಪ್ಲಾಂಟ್‌ಗೆ 7 ಲಕ್ಷ ರೂ.; ಸ್ಕ್ಯಾನ್, ಆ್ಯಂಜಿಯೋಗ್ರಾಂ, ಮೂಳೆ, ನರರೋಗ, ಜನರಲ್ ಸರ್ಜರಿಗೂ ನೆರವು
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದರ ಆರೋಗ್ಯ ಸುರಕ್ಷತೆಗೆ ಸರ್ಕಾರ ಒತ್ತು ನೀಡಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಆರೋಗ್ಯ ಹದಗೆಟ್ಟರೆ, ಅದರಲ್ಲೂ ವಿರಳ ಕಾಯಿಲೆಗಳು ಬಂದರೆ ಅವರ ಪಾಲಿಗೆ ಚಿಕಿತ್ಸೆ ದುಸ್ತರ ಮತ್ತು ಗಗನ ಕುಸುಮ ಎಂಬಂತೆ ಆಗಲಿದೆ. ಈ ಕಾರಣ ಗಳಿಂದಾಗಿ ಆರೋಗ್ಯ ಇಲಾಖೆ ಮಹತ್ವದ ಆದೇಶ ವೊಂದನ್ನು ಹೊರಡಿ ಸಿದ್ದು, ಈಗಾಗಲೇ ಇದ್ದ ವಿರಳ-ದುಬಾರಿ ವೆಚ್ಚದ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ನಿಗದಿಪಡಿಸಿದ್ದ 35 ಕೋಟಿ ರೂ. ಕಾರ್ಪಸ್ ಫಂಡ್ ಅನ್ನು 47 ಕೋಟಿ ರೂ.ಗೆ ಪರಿಷ್ಕೃತಗೊಳಿಸಿ, ಇದರ ಬಡ್ಡಿ ಮೊತ್ತದಿಂದ 17 ವಿರಳ ಕಾಯಿಲೆಗಳ ಚಿಕಿತ್ಸೆಗೆ ನೀಡಲು ಮುಂದಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ನ್ಯಾಶನಲ್ ಪಾಲಿಸಿ ಫಾರ್ ರೇರ್ ಡಿಸೀಸ್ (ಎನ್‌ಪಿ ಆರ್‌ಡಿ), ರಾಜ್ಯ ಸರ್ಕಾರದ ಆಯು ಷ್ಮಾನ್ ಭಾರತ್-ಆರೋಗ್ಯ ಕರ್ನಾ ಟಕ, ಜೀವ ಸಾರ್ಥಕತೆ ಇತ್ಯಾದಿ ಯೋಜನೆಗಳಡಿ ಬಹಳಷ್ಟು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದರ ಚಿಕಿತ್ಸೆಗಾಗಿ ಇದ್ದ 25 ವಿರಳ ಕಾಯಿಲೆಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯ ವಿಮಾ ಯೋಜನೆ ಯಡಿ ಬರುವ 16 ಕಾಯಿಲೆಗಳನ್ನು ಕೈಬಿಡಲಾಯಿತು. ಕೊನೆಗೆ ಒಟ್ಟಾರೆಯಾಗಿ ಆರ್ಥಿಕ ವೆಚ್ಚ ದುಬಾರಿ ಸೇರಿ ಇತರ ಮಾನದಂಡಗಳುನುಸಾರ 17 ಚಿಕಿತ್ಸಾ ವಿಧಾನಗಳಿಗೆ ಸಹಾ ಯ ಮಾಡಲು ಸರ್ಕಾರ ಮುಂದಾಗಿದೆ. ಭವಿಷ್ಯದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಇಡೀ ಜನಸಂಖ್ಯೆಗೆ ಅನ್ವಯವಾಗುವಂತೆ ಪ್ರಸ್ತಾಪಿತ 17 ಚಿಕಿತ್ಸಾ ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಸೇರಿಸಿದರೆ, ಅವುಗಳನ್ನು ಸದರಿ ಯೋಜನೆಯಡಿಯಿಂದ ಕೈ ಬಿಡಲು ಸರ್ಕಾರದ ಅನುಮೋದನೆ ಪಡೆಯತಕ್ಕದ್ದು ಎಂದು ತಿಳಿಸಲಾಗಿದೆ.
ವಿರಳ ಮತ್ತು ದುಬಾರಿ ವೆಚ್ಚದ ಕಾಯಿಲೆಗಳಿಗೆ ಹೆಚ್ಚುವರಿ ಕಾರ್ಯ ವಿಧಾನಗಳನ್ನು ಸೇರ್ಪಡೆ ಮಾಡಲು ಹಾಗೂ ಈಗಾಗಲೇ ಇರುವ ಕಾರ್ಯ ವಿಧಾನಗಳಿಗೆ ಮಾರ್ಗಸೂಚಿಗಳನ್ನು ನೀಡಲು ಅಸ್ಥಿತ್ವದಲ್ಲಿರುವ ತಾಂತ್ರಿಕ ಸಮಿತಿ ಕಾರ್ಪಸ್ ಫಂಡ್ ಯೋಜನೆಯಡಿಯಲ್ಲಿ ಮುಂದುವರಿಯತಕ್ಕದ್ದು ಎಂದು ಹೇಳಿದೆ.
ಯಾವ ಕಾಯಿಲೆಗೆ ಎಷ್ಟು ಹಣ?
ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಆಟೋಲೋಗೋಸ್- 7 ಲಕ್ಷ ರೂ.
ಪೆಟ್ (ಪಿಇಟಿ) ಸ್ಕ್ಯಾನ್- 10 ಸಾವಿರ ರೂ.
ಕೊರೊನರಿ ಆಂಜಿಯೋಗ್ರಾಂ / ಫೆರಿಫೆರಲ್ ಆಂಜಿಯೋಗ್ರಾಂ – 5 ಸಾವಿರ ರೂ.
ಇನ್ ಸ್ಟೆಂಟ್ ರೆಸ್ಟೆನೋಸಿಸ್‌ಗೆ ಬೇಕಾದ ಡ್ರಗ್ ಎಲುಟಿಂಗ್ ಬಲೂನ್ 35 ಸಾವಿರ ರೂ.
ಇಂಟ್ರಾವಾಸ್ಕಾಲರ್ ಲಿಥೊಟ್ರಿಪ್ಸಿ – 3.25 ಲಕ್ಷ ರೂ.
ಕಾರ್ಡಿಯೋವರ್ಟರ್ ಡಿಸಿಬ್ರಿಲೇಟರ್ (ಐಸಿಡಿ-ಸಿಂಗಲ್ ಚೇಂಬರ್) ಅಳವಡಿಸಲು – 46 ಸಾವಿರ ಹಾಗೂ ಐಸಿಡಿಗೆ 1.96 ಲಕ್ಷ ರೂ.
ಕಾರ್ಡಿಯೋವರ್ಟರ್ ಡಿಸಿಬ್ರಿಲೇಟರ್ (ಐಸಿಡಿ) ಅಳವಡಿಕೆಗೆ – 46 ಸಾವಿರ, ಐಸಿಡಿಗೆ 4.20 ಲಕ್ಷ ರೂ.
ಡಿಸಿಬಿ (ಔಷಧ ಲೇಪಿತ ಬಲೂನ್) ಜತೆ ಪೆರಿಫೆರಲ್ ಆಂಜಿಯೋಪ್ಲಾಸ್ಟಿ – 75 ಸಾವಿರ ರೂ.
ಕಾರ್ಡಿಯಾಕ್ ರಿಸಿಂಕ್ರೊನೈಸೇಶನ್ ಥೆರಪಿ ಪೇಸ್ ಮೇಕರ್ ಅಳವಡಿಕೆ (ಸಿಆರ್‌ಟಿ-ಪಿ) 46 ಸಾವಿರ, ಸಿಆರ್‌ಟಿ-ಪಿ ಗೆ 2.18 ಲಕ್ಷ ರೂ., ಕಾರ್ಡಿಯಾಕ್ ರಿಸಿಂ ಕ್ರೊನೈಸೇಶನ್ ಥೆರಪಿ ಡಿಫಿಬ್ರಿಲೇಟರ್ ಅಳವಡಿಕೆಗೆ (ಸಿಆರ್‌ಟಿ-ಡಿ) 46 ಸಾವಿರ,ಸಿಆರ್‌ಟಿ-ಡಿ 5.48 ಲಕ್ಷ
ವೆಂಟ್ರಿಕ್ಯುಲರ್ ಸೆಪ್ಟಲ್ ಛಿದ್ರ ದುರಸ್ತಿ – 95 ಸಾವಿರ ರೂ.
ಐವಿಯುಎಸ್- 35 ಸಾವಿರ ರೂ., ಒಸಿಟಿ- 60 ಸಾವಿರ ರೂ.
ಕೀಮೋಥೆರಪಿ – ಒಂದು ಬಾರಿಗೆ ಗರಿಷ್ಠ 2 ಲಕ್ಷ ರೂ. (ಒಂದು ವರ್ಷದಲ್ಲಿ 6 ಬಾರಿಗೆ ಮಾತ್ರ ಅವಕಾಶ)
ನಿರ್ದಿಷ್ಟಪಡಿಸದ ಕೀಮೋ ರಿಜಿಮೆನ್ (ದುಬಾರಿ ಔಷಧ)- ಪ್ರತಿ ದಾಖಲಾತಿಗೆ 20 ಸಾವಿರ ರೂ.ವರೆಗೆ.
ಮೂಳೆ, ನರರೋಗ, ಜನರಲ್ ಸರ್ಜರಿ ಸೇರಿ ಹೆಚ್ಚಿನ ವೆಚ್ಚದ ವಿಧಾನಗಳು- ಪ್ರತಿ ದಾಖಲಾತಿಗೆ 3 ಲಕ್ಷದ ವರೆಗೆ.
ಬ್ರಾಚಿಯಲ್ ಆರ್ಟೆರಿ ಆಕ್ಸಿಲರಿ ವೇನ್ ಗ್ರಾಫ್ಟ್ (ಡಯಾಲಿಸಿಸ್ ರೋಗಿಗಳು)- 65 ಸಾವಿರ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ
Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.