Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
ಕಣಬರ್ಗಿ ಗ್ರಾಮದಲ್ಲೊಂದು ಅಮಾನವೀಯ ಘಟನೆ, ತಾಯಿಯ ಬಂಧಿಸಿದ ಪೊಲೀಸರು
Team Udayavani, Dec 15, 2024, 5:36 PM IST
ಬೆಳಗಾವಿ: ಮಗುವಿಗೆ ಅಪಸ್ಮಾರ (ಪಿಡ್ಸ್) ಬರುತ್ತೆ ಎಂದು ಹೆತ್ತಿರುವ ಎರಡು ತಿಂಗಳ ಹೆಣ್ಣು ಹಸುಗೂಸನ್ನು ತಾಯಿ ಕೆರೆಗೆ ಎಸೆದಿರುವ ಮತ್ತೊಂದು ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದಲ್ಲಿ ನಡೆದಿದೆ. ತಾಯಿ ಮಗುವನ್ನು ಕೆರೆಗೆ ಎಸೆಯುವುದು ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗುವನ್ನು ರಕ್ಷಿಸಿದ್ದಾರೆ.
ಕಣಬರಗಿ ಗ್ರಾಮದ ನಿವಾಸಿ ರಾಬರ್ಟ್ ಕರವಿನಕೊಪ್ಪಿ ಎಂಬುವವರ ಪತ್ನಿ ಶಾಂತಾ (35) ಎಂಬುವವರು ಈ ಕೃತ್ಯವೆಸಗಿದ್ದಾರೆ. ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದ ತಾಯಿಯ ತಡೆದು ಸ್ಥಳೀಯರು ಬುದ್ದಿ ಹೇಳಿ ಮಗುವನ್ನು ರಕ್ಷಿಸಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಳಿಕ ಸ್ಥಳೀಯರು ಆ್ಯಂಬುಲೆನ್ಸ್ ಕರೆಸಿ ಮಗುವನ್ನ ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಾರನ್ನು ಬಂಧಿಸಲಾಗಿದೆ, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ
Assembly Session: ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.