Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ


Team Udayavani, Dec 16, 2024, 6:52 AM IST

MONEY (2)

ದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರ ಒಂದೇ ಸಮನೆ ಹೆಚ್ಚುತ್ತಲೇ ಸಾಗಿರುವುದರಿಂದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದೇ ವೇಳೆ ಪ್ರಸಕ್ತ ವರ್ಷ ಅಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿ  ಣಾಮ ಬೆಳೆ ಹಾನಿ ಸಂಭವಿಸಿ, ಕೃಷಿ ವಲಯ ನಷ್ಟ ಅನುಭವಿಸಿದೆ. ಉತ್ಪಾ  ದನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ದ್ದಾರೆ. ಹೀಗಾಗಿ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರು ಕೃಷಿ ಚಟುವಟಿಕೆಗಳ ಬಗೆಗೆ ನಿರಾಸಕ್ತಿ ತಾಳುವಂತಾಗಿದೆ. ಸಹಜವಾಗಿಯೇ ದೇಶದ ಆರ್ಥಿ ಕತೆಯ ಪ್ರಮುಖ ಆಧಾರಸ್ತಂಭವಾಗಿರುವ ಕೃಷಿ ವಲಯ ಹಿನ್ನಡೆ ಕಾಣು   ವಂತಾಗಿದ್ದು, ಇದರ ಪರಿಣಾಮ ದೇಶದ ಆರ್ಥಿಕ ಪ್ರಗತಿಯ ಮೇಲಾ ಗುತ್ತದೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ವಾರದ ಹಿಂದೆಯಷ್ಟೇ ರೈತರಿಗೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿತ್ತು. ಅದರಂತೆ ಈಗ ಭಾರತೀಯ ರಿಸರ್ವ್‌ ಬ್ಯಾಂಕ್‌ ರೈತರಿಗೆ ನೀಡ ಲಾಗುತ್ತಿರುವ ಅಡಮಾನ ರಹಿತ ಸಾಲದ ಮಿತಿಯನ್ನು 2 ಲಕ್ಷ ರೂ.ಗಳಿ ಗೇರಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ. ಕೃಷಿ ವಲಯದ ಚೇತರಿಕೆ ಯ ನಿಟ್ಟಿನಲ್ಲಿ ಉತ್ತೇಜನದಾಯಕ ಕ್ರಮವಾಗಿ ಆರ್‌ಬಿಐ ಈ ಘೋಷಣೆಯನ್ನು ಮಾಡಿದ್ದು ಹೊಸವರ್ಷದ ಮೊದಲ ದಿನ ಇದು ಜಾರಿಗೆ ಬರಲಿದೆ.

ಆರ್‌ಬಿಐ ನ ಈ ಘೋಷಣೆಯಿಂದ ಸಣ್ಣ ಮತ್ತು ಅತೀ ಸಣ್ಣ ಕೃಷಿಕರಿಗೆ ಅಗತ್ಯ ಹಣಕಾಸು ಸೌಲಭ್ಯ ಸುಲಭವಾಗಿ ಲಭ್ಯವಾಗಲಿದ್ದು ಅವರು ಮತ್ತಷ್ಟು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಕೃಷಿ ವಲಯದಲ್ಲಿ ಹೂಡಿಕೆ ಹೆಚ್ಚುವುದರಿಂದ ಉತ್ಪಾದನೆಯೂ ಏರಿಕೆಯಾಗ ಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಆದಾಯ ವೃದ್ಧಿಯಾಗು ವುದರ ಜತೆಯಲ್ಲಿ ಅವರ ಜೀವನಮಟ್ಟವು ಸುಧಾರಣೆಯಾಗಲಿದೆ. ತನ್ಮೂಲಕ ತಳಮಟ್ಟದಿಂದ ಅಂದರೆ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಬಲ ತುಂಬಿದಂತಾ ಗಲಿದೆ. ಇದರಿಂದ ಸಹಜವಾಗಿಯೇ ಕೃಷಿ ವಲಯ ಚೇತರಿಕೆ ಕಂಡು ದೇಶದ ಒಟ್ಟಾರೆ ಆರ್ಥಿಕತೆ ಸಹಜಸ್ಥಿತಿಗೆ ಮರಳಲಿದೆ ಎಂಬ ಲೆಕ್ಕಾಚಾರ ಆರ್‌ಬಿಐನದ್ದಾಗಿದೆ.

ಕೇಂದ್ರ ಸರಕಾರದ ಮಹತ್ತರ ಯೋಜನೆಯಾದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯ ಫ‌ಲಾನುಭವಿಗಳಿಗೆ ಶೇ.4ರ ಬಡ್ಡಿದರದಲ್ಲಿ 3 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಆರ್‌ಬಿಐನ ಈ ಘೋಷಣೆಯ ಬಳಿಕ ಇದರಲ್ಲಿ 2 ಲ. ರೂ.ವರೆಗೆ ಅಡಮಾನ ರಹಿತ ಸಾಲ ಸೌಲಭ್ಯ ಲಭಿಸಲಿದೆ. ಇದರಿಂದ ರೈತರು ಸಕಾಲ ದಲ್ಲಿ ಕೃಷಿ ಚಟುವಟಿಕೆಗಳಿಗನುಗುಣವಾಗಿ, ಕೃಷಿ ಸಾಧನ, ಸಲಕರಣೆಗಳ ಖರೀದಿ, ಬೀಜ ಬಿತ್ತನೆ, ರಸಗೊಬ್ಬರ ಖರೀದಿಗೆ ಈ ಸಾಲವನ್ನು ಪಡೆದುಕೊಳ್ಳಲು ನೆರವಾಗಲಿದೆ.

ದೇಶದ ಸದ್ಯದ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ ದಿನಗಳಲ್ಲಿ ಇದು ಕೃಷಿ ವಲಯದ ಚೇತರಿಕೆಗೆ ಶಕ್ತಿವರ್ಧಕವಾಗಲಿರುವುದು ನಿಶ್ಚಿತ. ಆದರೆ ಇದರ ಅನುಷ್ಠಾನದಲ್ಲಿ ಬ್ಯಾಂಕ್‌ಗಳು ತಮ್ಮ ಬದ್ಧತೆ ಮತ್ತು ಇಚ್ಛಾ ಶಕ್ತಿ ಯನ್ನು ಪ್ರದರ್ಶಿಸಬೇಕು. ರೈತರಿಗೆ ಸಾಲ ನೀಡುವಾಗಲೆಲ್ಲ ಯಾವುದಾದ  ರೊಂದು ಕುಂಟು ನೆಪವನ್ನು ಮುಂದೊಡ್ಡಿ ಸತಾಯಿಸುವ ಪ್ರವೃತ್ತಿಯನ್ನು ಮೈಗೂ ಡಿಸಿ ಕೊಂಡಿರುವ ಬ್ಯಾಂಕ್‌ಗಳು ತಮ್ಮ ಈ ಹಳೆ ಚಾಳಿಯನ್ನು ಇನ್ನಾ ದರೂ ಬಿಡಬೇಕು. ಸಾಲನೀಡಿಕೆ ಕುರಿತಾಗಿನ ಸರಕಾರದ ನೀತಿ, ನಿರೂಪಣೆಗಳು ಹಾಗೂ ಈ ಬಗೆಗಿನ ಆರ್‌ಬಿಐ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬ್ಯಾಂಕ್‌ಗಳು ಆದ್ಯತೆಯ ಮೇಲೆ ಪರಿಗಣಿಸಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಿದಲ್ಲಿ ನಿರೀಕ್ಷಿತ ಉದ್ದೇಶ ಮತ್ತು ಗುರಿ ತಲುಪಲು ಸಾಧ್ಯ.

ಟಾಪ್ ನ್ಯೂಸ್

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

ಶೈಕ್ಷಣಿಕ ಪ್ರವಾಸ: ಮಕ್ಕಳ ಸುರಕ್ಷೆಗಿರಲಿ ಮೊದಲ ಆದ್ಯತೆ

ಶೈಕ್ಷಣಿಕ ಪ್ರವಾಸ: ಮಕ್ಕಳ ಸುರಕ್ಷೆಗಿರಲಿ ಮೊದಲ ಆದ್ಯತೆ

ಚಿತ್ತಾಕರ್ಷಕ ವ್ಯಕ್ತಿತ್ವದ ನಾಯಕ ಎಸ್‌.ಎಂ.ಕೃಷ್ಣ

ಚಿತ್ತಾಕರ್ಷಕ ವ್ಯಕ್ತಿತ್ವದ ನಾಯಕ ಎಸ್‌.ಎಂ.ಕೃಷ್ಣ

Editorial: ಭಾರತದ ವಿರುದ್ಧ ಪಾಕ್‌ನ ಕುತಂತ್ರಗಳೆಲ್ಲ ನಿಷ್ಫಲವಾಗಲಿ

Editorial: ಭಾರತದ ವಿರುದ್ಧ ಪಾಕ್‌ನ ಕುತಂತ್ರಗಳೆಲ್ಲ ನಿಷ್ಫಲವಾಗಲಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.