Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
17 ವರ್ಷ ಮೊದಲು ಶ್ರೋತೃಗಳ ಮನರಂಜಿಸಿದ್ದ ತಬಲಾ ವಾದಕ
Team Udayavani, Dec 15, 2024, 11:30 PM IST
ಮಂಗಳೂರು: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (Zakir Hussain) (73) ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ಕೊನೆಯುಸಿರೆಳೆದಿರುವ ಜಾಕೀರ್ ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರು.
ಜಾಕೀರ್ ಹುಸೇನ್ ಇಂದಿಗೆ 17 ವರ್ಷ ಮೊದಲು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ತೆರೆದ ಮೈದಾನದಲ್ಲಿ ನಡೆದ ಕಛೇರಿಯಲ್ಲಿ ಉಸ್ತಾದ್ ಜಾಕೀರ್ ಹುಸೇನ್ ತಮ್ಮ ಸುಮಧುರ ತಬಲ ವಾದನ ಮೂಲಕ ಶ್ರೋತೃಗಳ ಮನರಂಜಿಸಿದ್ದರು.
ಮಂಗಳೂರಿಗೆ ಅವರ ಮೂರನೇ ಭೇಟಿಯಾಗಿತ್ತು. ಅದಕ್ಕಿಂತ ಮೊದಲು 1960, 1975 ರಲ್ಲೂ ಭೇಟಿ ನೀಡಿದ್ದರು. 2007 ಡಿ. 16ರಂದು ಸಂಗೀತ ಭಾರತಿ ಪ್ರತಿಷ್ಠಾನ ಹಮ್ಮಿಕೊಂಡ ಕಛೇರಿಯಲ್ಲಿ ಅವರು ಒಂದೂವರೆ ಗಂಟೆ ಕಾಲ ತಬಲಾ ವಾದನ ಮೂಲಕ ಜನಮನರಂಜಿಸಿದ್ದರು. ಮಂಗಳೂರಿನ ಅಂಕುಶ್ ನಾಯಕ್ ಸಹಿತ ಹಲವು ಕಲಾವಿದರು ಆಗ ಜಾಕೀರ್ ಹುಸೇನ್ ರಿಗೆ ಸಾಥ್ ನೀಡಿದ್ದರು.
73 ವಯಸ್ಸಿನ ಜಾಕೀರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಜಾಕೀರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.