Corridor project: ಮಣಿಪಾಲ-ಕೊಣಾಜೆ ಜ್ಞಾನ, ಆರೋಗ್ಯಪಥಕ್ಕೆ ಗ್ರಹಣ

2019-20ರ ಬಜೆಟ್‌ನಲ್ಲಿ ಘೋಷಣೆ, ಅನುಷ್ಠಾನಕ್ಕೆ ನಿರಾಸಕ್ತಿ, ಇಚ್ಛಾಶಕ್ತಿ ಕೊರತೆ

Team Udayavani, Dec 16, 2024, 7:15 AM IST

Arogyapath

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಐದು ವರ್ಷಗಳ ಹಿಂದೆ ರಾಜ್ಯ ಸರಕಾರವು ಘೋಷಿಸಿರುವ ಮಣಿಪಾಲ-ಕೊಣಾಜೆ “ಜ್ಞಾನ ಮತ್ತು ಆರೋಗ್ಯ ಪಥ’ (ನಾಲೆಜ್‌ ಆ್ಯಂಡ್‌ ಹೆಲ್ತ್‌ ಕಾರಿಡಾರ್‌) ಅನುಷ್ಠಾನಕ್ಕೆ ಬಾರದೆ ಕಡತದಲ್ಲೇ ಬಾಕಿಯಾಗಿದೆ.

ರಾಜ್ಯ ಸರಕಾರದ 2019-20ನೇ ಸಾಲಿನ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡು ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ ಯೋಜನೆ ಯನ್ನು ಘೋಷಿಸಲಾಗಿತ್ತು. ಈ ಬಗ್ಗೆ ಕಾರ್ಯಸಾಧ್ಯತೆ ವರದಿ ಸಿದ್ಧಪಡಿಸುವ ನಿಟ್ಟಿನಲ್ಲಿ 2020ರ ಜನವರಿಯಲ್ಲಿ ಭಾಗೀದಾರರ ಕಾರ್ಯಾಗಾರವನ್ನು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ವತಿಯಿಂದ ಆಯೋಜಿಸ ಲಾಗಿತ್ತು. ಆದರೆ ಮುಂದಿನ ಹಂತ ಗಳಲ್ಲಿ ಭಾಗೀದಾರಿ ಸಂಸ್ಥೆ ಗಳನ್ನು ಆಕರ್ಷಿಸುವಲ್ಲಿ ಸರಕಾರದ ನಿರಾಸಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಮುಂದುವರಿದಿಲ್ಲ.

ಈ ಯೋಜನೆ ಅನುಷ್ಠಾನಗೊಂಡರೆ ಶಿಕ್ಷಣ, ವೈದ್ಯಕೀಯ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟು ಅನೇಕ ಹೂಡಿಕೆಗಳು ಉಭಯ ಜಿಲ್ಲೆಗಳಿಗೆ ಹರಿದು ಬರಲಿದ್ದು, ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ ಯೋಜನೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಯಾಗಿದೆ. ಇದರ ಮಹತ್ವ ಹಾಗೂ ಅನುಷ್ಠಾನದಿಂದ ಉಭಯ ಜಿಲ್ಲೆಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ಜಿಲ್ಲೆಯ ಕೈಗಾರಿಕಾ ಸಂಘಟನೆಗಳ ಪರವಾಗಿ ಕೇಂದ್ರ ಉದ್ದಿಮೆಶೀಲತೆ ಹಾಗೂ ಕೌಶಲಾಭಿವೃದ್ಧಿ ಖಾತೆ ಸಚಿವರ ಗಮನಕ್ಕೆ ತಂದು, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಅನುಷ್ಠಾನಕ್ಕೆ ಒತ್ತಾಯಿ
ಸಲಾಗುವುದು ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ.

ಏನಿದು ಕಾರಿಡಾರ್‌ ಯೋಜನೆ?
ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ ಯೋಜನೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನ ಸಂಸ್ಥೆಗಳಿಗೆ, ಉತ್ಪಾದನ ಘಟಕಗಳಿಗೆ ಮತ್ತು ಆರೋಗ್ಯಸೇವೆ ಒದಗಿಸುವ ಸಂಸ್ಥೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ. ಸಾರ್ವಜನಿಕ – ಖಾಸಗಿ ವಲಯಗಳಿಂದ ಹೂಡಿಕೆಗಳನ್ನು ನಿರೀಕ್ಷಿಸಿ ಉತ್ತಮ ಭೌತಿಕ ಮತ್ತು ಪೂರಕ ಮೂಲ ಸೌಕರ್ಯ ಒಳಗೊಂಡು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದು ಈ ಕಾರಿಡಾರ್‌ ಯೋಜನೆಯ ಉದ್ದೇಶವಾಗಿತ್ತು.

ವೈದ್ಯಕೀಯ ಪ್ರವಾಸೋದ್ಯಮ, ಶೈಕ್ಷಣಿಕ ಮತ್ತು ಆರೋಗ್ಯ ವಲಯದಲ್ಲಿ ಪ್ರಸ್ತುತ ಹೊರಹೊಮ್ಮುವ ಅವಕಾಶಗಳನ್ನು ಯೋಜನೆ ಯಲ್ಲಿ ಬಳಸಿ ಉಭಯ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ ಯಾವುದೂ ಕೈಗೂಡಿಲ್ಲ.

ಟಾಪ್ ನ್ಯೂಸ್

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

Sagara: ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ

Koteshwara: ಸಂಭ್ರಮದ ಕೊಡಿಹಬ್ಬ…

Koteshwara: ಸಂಭ್ರಮದ ಕೊಡಿಹಬ್ಬ…

Adani: ಅದಾನಿ ಫೌಂಡೇಶನ್‌ 17 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ

Adani: ಅದಾನಿ ಫೌಂಡೇಶನ್‌ 17 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ

6

Udupi: ಬಚ್ಚಿಟ್ಟ ಮದುವೆ; ಗಂಡನ ಗುಟ್ಟು-ರಟ್ಟು; ಪತಿ ಸಹಿತ 6ಮಂದಿ ವಿರುದ್ಧ ಪ್ರಕರಣ ದಾಖಲು

15

Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

3

ಸಿನಿಮೀಯವಾಗಿ ಮೊಬೈಲ್‌ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್‌!

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

Sagara: ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

ಆಳ್ವಾಸ್‌ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ

ಆಳ್ವಾಸ್‌ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Bigg Boss Telugu 8: ಬಿಗ್‌ಬಾಸ್‌ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.