WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
ಮುಂಬಯಿಯ ಲೆಗ್ ಸ್ಪಿನ್ನರ್ 1.9 ಕೋಟಿ ರೂ.ಗೆ ಗುಜರಾತ್ ಪಾಲು, 1.6 ಕೋಟಿ ರೂ.ಗೆ ಮುಂಬೈ ಸೇರಿದ ತ.ನಾ.ದ 16 ವರ್ಷದ ಕಮಲಿನಿ, ಉತ್ತರಖಂಡದ ಪ್ರೇಮಾ ರಾವತ್ 1.2 ಕೋಟಿ ರೂ.ಗೆ ಆರ್‌ಸಿಬಿ ತೆಕ್ಕೆಗೆ
Team Udayavani, Dec 16, 2024, 7:50 AM IST
ಬೆಂಗಳೂರು: ಇಲ್ಲಿನ ಐಟಿಸಿ ಗಾಡೇìನಿಯಾ ಹೊಟೇಲ್‌ನಲ್ಲಿ ರವಿವಾರ ನಡೆದ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಮುಂಬಯಿಯ ಲೆಗ್ ಸ್ಪಿನ್ನರ್ ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು 1.9 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ಪಾಲಾದರು. ಕಳೆದ ಆವೃತ್ತಿಯಲ್ಲಿ ಸಿಮ್ರಾನ್ ಯುಪಿ ವಾರಿಯರ್ ಪರ ಆಡಿದ್ದರು. ತಮಿಳುನಾಡಿನ 16 ವರ್ಷದ ಆಟಗಾರ್ತಿ ಜಿ. ಕಮಲಿನಿ, ಮುಂಬೈ ಇಂಡಿಯನ್ಸ್‌ಗೆ ಮಾರಾಟವಾಗಿ ಗಮನ ಸೆಳೆದರು.
ಹರಾಜಿನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ದುಬಾರಿ ಖರೀದಿಯೆಂದರೆ ಪ್ರೇಮಾ ರಾವತ್. ಉತ್ತರಖಂಡದ ಭರವಸೆಯ ಲೆಗ್ ಸ್ಪಿನ್ನರ್ ರಾವತ್ ಅವರನ್ನು ಹಾಲಿ ಚಾಂಪಿಯನ್ ಆರ್‌ಸಿಬಿ 1.2 ಕೋಟಿ ರೂ.ಗೆ ಖರೀದಿಸಿತು. ಅಗ್ರ ಐವರು ದುಬಾರಿ ಆಟಗಾರ್ತಿ ಯರ ಸಾಲಿನಲ್ಲಿ ಇರುವ ಇನ್ನಿಬ್ಬರೆಂದರೆ ವೆಸ್ಟ್ ಇಂಡೀಸ್‌ನ ಡೀಂಡ್ರ ಡೊಟಿನ್ (1.7 ಕೋಟಿ ರೂ. – ಗುಜರಾತ್) ಮತ್ತು ಆಂಧ್ರಪ್ರದೇಶದ ಎನ್. ಚಾರಣಿ (55 ಲಕ್ಷ, ಡೆಲ್ಲಿ ಕ್ಯಾಪಿಟಲ್ಸ್).
ಹರಾಜು ಕಣದಲ್ಲಿ ಒಟ್ಟು 120ರಷ್ಟು ಆಟಗಾರ್ತಿಯರಿದ್ದು, ಅವರಲ್ಲಿ 19 ಆಟಗಾರ್ತಿಯರನ್ನು ಹರಾಜಿನ ಮೂಲಕ ಆರಿಸಿದ 5 ತಂಡಗಳು ತಮ್ಮ ಖಾಲಿ ಸ್ಥಾನಗಳನ್ನು ಭರ್ತಿ ಮಾಡಿಕೊಂಡಿವೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪುರುಷರ ಐಪಿಎಲ್ ಹರಾಜು ನಡೆಸಿ ಕೊಟ್ಟ ಹರಾಜುದಾರೆ, 49 ವರ್ಷದ ಮಲ್ಲಿಕಾ ಸಾಗರ್ ಅವರೇ ಈ ಹರಾಜು ಕೂಡ ನಡೆಸಿಕೊಟ್ಟರು.
ದುಬಾರಿ ಆಟಗಾರ್ತಿ: ಸ್ಮೃತಿಗೆ ಅಗ್ರಸ್ಥಾನ
ಈ ಬಾರಿಯ ಮಿನಿ ಹರಾಜಿನಲ್ಲಿ ಸಿಮ್ರಾನ್ ದುಬಾರಿ ಆಟಗಾರ್ತಿಯಾಗಿ ಎನಿಸಿಕೊಂಡ ರಾದರೂ, ಮಹಿಳಾ ಐಪಿಎಲ್ ಇತಿಹಾಸದಲ್ಲಿ ಸ್ಮತಿ ಮಂಧಾನ ಅವರೇ ತುಟ್ಟಿ ಆಟಗಾರ್ತಿಯ ಸ್ಥಾನ ಉಳಿಸಿಕೊಂಡಿದ್ದಾರೆ. 2023ರಲ್ಲಿ ಸ್ಮತಿ ಅವರನ್ನು ಆರ್‌ಸಿಬಿ 3.4 ಕೋಟಿ ರೂ.ಗೆ ಖರೀದಿಸಿತ್ತು.
ಹರಾಜಿನ ಬಳಿಕ ಸಂಪೂರ್ಣ ತಂಡ
ಗುಜರಾತ್ ಜೈಂಟ್ಸ್
ಉಳಿಕೆ: ಆ್ಯಶ್ಲಿ ಗಾಡ್ನರ್, ಬೆತ್ ಮೂನಿ, ಭಾರ್ತಿ ಫುಲ್ಮಲಿ, ದಯಾಲನ್ ಹೇಮಲತಾ, ಹಲೀನ್ ಡಿಯೋಲ್, ಕಾಶ್ವಿ ಗೌತಮ್, ಲಾರಾ ವೋಲ್ವಾರ್ಟ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್, ಫೋಬೆ ಲಿಚ್‌ಫೀಲ್ಡ್, ಪ್ರಿಯಾ ಮಿಶ್ರಾ, ಸಯಾಲಿ ಸತಾ^ರೆ, ಶಬ್ನಮ್ ಶಕೀಲ್, ತನುಜಾ ಕನ್ವರ್.
ಹರಾಜು: ಸಿಮ್ರಾನ್ ಶೇಖ್ (1.9 ಕೋಟಿ ರೂ.), ಡೀಂಡ್ರ ಡೊಟಿನ್ (1.7 ಕೋಟಿ ರೂ.), ಡೇನಿಯಲ್ ಗಿಬ್ಸನ್ (30 ಲ. ರೂ.), ಪ್ರಕಾಶಿಕಾ ನಾಯ್ಕ (10 ಲ. ರೂ.).
ಮುಂಬೈ ಇಂಡಿಯನ್ಸ್
ಉಳಿಕೆ: ಅಮನ್‌ದೀಪ್ ಕೌರ್, ಅಮನ್‌ಜಿàತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಜಿಂತಿಮಣಿ ಕಾಳಿತಾ, ಕೀರ್ತನಾ ಬಾಲಕೃಷ್ಣನ್, ನಟಾಲಿ ಶೀವರ್, ಪೂಜಾ ವಸ್ತ್ರಾಕರ್, ಎಸ್. ಸಜನಾ, ಸೈಕಾ ಇಶಾಕ್, ಶಬಿಮ್ ಇಸ್ಮಾಯಿಲ್, ಯಸ್ತಿಕಾ ಬಾಟಿಯಾ.
ಹರಾಜು: ಜಿ. ಕಮಲಿನಿ (1.6 ಕೋಟಿ ರೂ.), ನಡೈನ್ ಡೆ ಕ್ಲಾರ್ಕ್ (30 ಲ.ರೂ.), ಅಕ್ಷಿತಾ ಮಹೇಶ್ವರಿ (20 ಲ. ರೂ.),
ಸಂಕೀರ್ತಿ ಗುಪ್ತಾ (10 ಲ. ರೂ.).
ಆರ್‌ಸಿಬಿ
ಉಳಿಕೆ: ಆಶಾ ಶೋಭನಾ, ಡೇನಿಯಲ್ ವ್ಯಾಟ್, ಏಕ್ತಾ ಬಿಸ್ತ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ಕಣಿಕಾ ಅಹುಜಾ, ಕೇಟ್ ಕ್ರಾಸ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಶ್ರೇಯಾಂಕಾ ಪಾಟೀಲ್, ಸ್ಮತಿ ಮಂಧನಾ, ಸೊಫಿ ಡಿವೈನ್, ಸೋಫಿ ಮೊಲಿನೆಕ್ಸ್.
ಹರಾಜು: ಪ್ರೇಮಾ ರಾವತ್ (1.2 ಕೋಟಿ ರೂ.), ರಾಬಿಸ್ತ್ (10 ಲಕ್ಷ ರೂ.), ಜಾಗ್ರವಿ ಪವಾರ್ (10 ಲಕ್ಷ ರೂ.), ವಿ.ಜೆ.ಜೋಶಿತಾ (10 ಲಕ್ಷ ರೂ.).
ಡೆಲ್ಲಿ ಕ್ಯಾಪಿಲಲ್ಸ್
ಉಳಿಕೆ: ಆ್ಯಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೋನಾಸನ್, ಮರಿಜಾನ್ ಕಾಪ್, ಮೆಗ್ ಲ್ಯಾನಿಂಗ್, ಮಿನ್ನುಮಣಿ, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ ಭಾಟಿಯಾ, ಟೈಟಸ್ ಸಾಧು.
ಹರಾಜು: ಎನ್. ಚಾರಣಿ (55 ಲಕ್ಷ ರೂ.), ನಂದಿನಿ ಕಶ್ಯಪ್ (10 ಲಕ್ಷ ರೂ.), ನಿಕಿ ಪ್ರಸಾದ್ (10 ಲಕ್ಷ ರೂ. ), ಸಾರಾ ಬ್ರೈಸ್ (10 ಲಕ್ಷ ರೂ.).
ಯುಪಿ ವಾರಿಯರ್
ಉಳಿಕೆ: ಅಲಿಸಾ ಹೀಲಿ, ಅಂಜಲಿ ಸರ್ವಾಣಿ, ಚಾಮರಿ ಅತ್ತಪಟು, ದೀಪ್ತಿ ಶರ್ಮಾ, ಗೌರ್ ಸುಲ್ತಾನ, ಗ್ರೇಸ್ ಹ್ಯಾರಿಸ್, ಕಿರಣ್ ನವಿYರೆ, ಪೂನಮ್ ಖೆಮ್ನರ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಥಾಕೂರ್, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್, ಉಮಾ ಚೆಟ್ರಿ, ವೃಂದಾ ದಿನೇಶ್.
ಹರಾಜು: ಅಲಾನಾ ಕಿಂಗ್ (30 ಲಕ್ಷ ರೂ.), ಕೃಷಿ ಗೋಯಲ್ (10 ಲಕ್ಷ ರೂ. ), ಕ್ರಾಂತಿ ಗೌಡ (10 ಲಕ್ಷ ರೂ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
England vs Newzeland Test: ನ್ಯೂಜಿಲ್ಯಾಂಡ್ ಹಿಡಿತದಲ್ಲಿ ಹ್ಯಾಮಿಲ್ಟನ್ ಟೆಸ್ಟ್
Womens T20 Cricket: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
Ali Trophy: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ
MUST WATCH
ಹೊಸ ಸೇರ್ಪಡೆ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
Sandalwood: ಪವನ್ ಒಡೆಯರ್ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.