Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Team Udayavani, Dec 16, 2024, 7:18 AM IST
16-2-2024
ಮೇಷ: ದುಡಿಮೆಯಲ್ಲಿ ಮಹತ್ಸಾಧನೆಯ ಸಂಕಲ್ಪದೊಡನೆ ದಿನಾರಂಭ. ಅವಶ್ಯವುಳ್ಳವರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ಸೋದರ ಸಂಬಂಧಿಗೆ ವಿವಾಹ ಯೋಗ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹುರುಪು.
ವೃಷಭ: ಸದುದ್ದೇಶಕ್ಕಾಗಿ ಜನಸಂಘಟನೆಯಲ್ಲಿ ಆಸಕ್ತಿ. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ.
ಮಿಥುನ: ಜೀವನಸ್ನೇಹಿ ಪರಿಸರದಲ್ಲಿ ಬದುಕು. ತಾವಾಗಿ ಒಲಿದು ಬಂದ ಅವಕಾಶಗಳ ಸದುಪಯೋಗ. ಉದ್ಯೋಗಾನ್ವೇಷಿಗಳಿಗೆ ಉನ್ನತರ ಸಹಾಯ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ. ಸತ್ಕಾರ್ಯಕ್ಕೆ ಕೈಜೋಡಿಸಿ ಸಾರ್ಥಕ ಭಾವ.
ಕರ್ಕಾಟಕ: ಪಾಲಿಗೆ ಬಂದ ಹೊಣೆಗಾರಿಕೆ ಕೀರ್ತಿ ತರಲಿದೆ. ಕಠಿನ ಪರಿಶ್ರಮಕ್ಕೆ ಯೋಗ್ಯ ಪ್ರತಿಫಲ. ನೊಂದವರಲ್ಲಿ ಹೊಸ ಭರವಸೆ ತುಂಬುವ ಕ್ರಮಗಳು. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ. ಸಂಸಾರದಲ್ಲಿ ಸಾಮರಸ್ಯ, ಪ್ರೀತಿ ವೃದ್ಧಿ.
ಸಿಂಹ: ಎಲ್ಲ ಬಗೆಯ ಅಡಚಣೆಗಳಿಂದ ಬಿಡುಗಡೆ. ಉದ್ಯೋಗಸ್ಥರಿಗೆ, ಉದ್ಯಮಿಗಳಿಗೆ ಕಾರ್ಯದ ಒತ್ತಡ. ಹಿರಿಯರ, ಗೃಹಿಣಿಯರ ಆರೋಗ್ಯ ತೃಪ್ತಿಕರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ವ್ಯವಹಾರ ಸಂಬಂಧ ಪ್ರಯಾಣ ಸಂಭವ.
ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಸಮಯ ದೊಂದಿಗೆ ಸೆಣಸಾಟ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ತೀರ್ಥಯಾತ್ರೆ ಮುಗಿಸಿದ ಬಂಧುಗಳ ಆಗಮನ.
ತುಲಾ: ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆ. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ. ವಸ್ತ್ರ, ಆಭರಣ ಖರೀದಿ ಸಾಧ್ಯತೆ. ಗೃಹೋದ್ಯಮಗಳಿಗೆ ಅನುಕೂಲ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ.
ವೃಶ್ಚಿಕ: ಉದ್ಯೋಗಸ್ಥಾನದ ಹಿತಶತ್ರುಗಳಿಂದ ದೂರವಿರಿ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ.
ಧನು: ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಕೇಟರಿಂಗ್ ವ್ಯವಹಾರಸ್ಥರಿಗೆ ವಿಶೇಷ ಲಾಭ.
ಮಕರ: ನಿರೀಕ್ಷೆಗಿಂತ ಸುಲಭವಾಗಿ ಕಾರ್ಯ ಸಾಧನೆ. ದಿನಾರಂಭದಲ್ಲಿ ಇನ್ನಷ್ಟು ಕೆಲಸಗಳು. ಹೊಸ ಜವಾಬ್ದಾರಿಗಳು ಬರುವ ಸಂಭವ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ. ಹತ್ತಿರದ ಶಿವ ಕ್ಷೇತ್ರಕ್ಕೆ ಸಂದರ್ಶನ.
ಕುಂಭ: ಇನ್ನಷ್ಟು ಹೊಸ ಸಾಧನೆ ಮಾಡುವ ಹುರುಪು. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾ ವರಣ. ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಕಾರ್ಯಯೋಜನೆ.
ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಹೊಸ ಉದ್ಯಮಗಳಲ್ಲಿ ಸ್ಥಿರವಾದ ಪ್ರಗತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ
Daily Horoscope;ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಕಾರ್ಯಗಳು ಶೀಘ್ರ ಮುಕ್ತಾಯ
MUST WATCH
ಹೊಸ ಸೇರ್ಪಡೆ
Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
Sandalwood: ಪವನ್ ಒಡೆಯರ್ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.