Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ ಯಾನ
ಈ ಯಾನದ ಮೂಲಕ ಅದು 3 ಸಮುದ್ರಗಳನ್ನು ಸಂಪರ್ಕಿಸಲಿದೆ
Team Udayavani, Dec 16, 2024, 10:24 AM IST
ಲಂಡನ್: ಹುಲಿ, ಚಿರತೆಯಂಥ ಪ್ರಾಣಿಗಳು ಸಂಗಾತಿಯನ್ನು ಅರಸುತ್ತಾ ಕಿ.ಮೀ.ಗಟ್ಟಲೆ ಪ್ರಯಾಣಿಸುವುದನ್ನು
ನೋಡಿರುತ್ತೀರಿ. ಈಗ ತಿಮಿಂಗಿಲವೊಂದು ಇದೇ ರೀತಿ ಸುದೀರ್ಘ ಯಾನದ ಮೂಲಕ ದಾಖಲೆ ಬರೆದಿದೆ.
ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶದ ವಿಜ್ಞಾನಿ ಏಕಟೆರಿನಾ ಕಲಾಶ್ನಿಕೋವಾ ಈ ಅಪರೂಪದ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಿಸಿಎಸ್‌ಎಸ್ (ಬಝಾರುತೊ ವೈಜ್ಞಾನಿಕ ಅಧ್ಯಯನ ಕೇಂದ್ರ)ನಲ್ಲಿ ವಿಜ್ಞಾನಿಯಾಗಿರುವ ಕಲಾಶ್ನಿಕೊವಾ, ಹಂಪ್‌ಬ್ಯಾಕ್ ತಿಮಿಂಗಿಲವೊಂದು ಅತಿದೂರ ಕ್ರಮಿಸಿ ದಾಖಲೆ ನಿರ್ಮಿಸಿರುವುದನ್ನು ಪತ್ತೆಹಚ್ಚಿದ್ದಾರೆ.
ಮೆಗಾಪೆಟ್ರಾ ನೊವಾಂಗ್ಲಿಯಾಯೆ ತಳಿಗೆ ಸೇರಿದ ಈ ತಿಮಿಂಗಿಲ ಈಗಾಗಲೇ 13,046 ಕಿ.ಮೀ. ಸಂಚರಿಸಿ ದಾಖಲೆ ನಿರ್ಮಿಸಿದೆ. ಒಟ್ಟು 19,000 ಕಿ.ಮೀ.ವರೆಗೆ ಸಾಗುವ ನಿರೀಕ್ಷೆಯಿದೆ.
ಈ ಯಾನದ ಮೂಲಕ ಅದು 3 ಸಮುದ್ರಗಳನ್ನು ಸಂಪರ್ಕಿಸಲಿದೆ! ಕೊಲಂಬಿಯಾದ ಟ್ರಿಬುಗಾ ಕೊಲ್ಲಿಯಿಂದ ಪ್ರಾರಂಭವಾದ ಅದರ ಯಾನ, ತಾಂಜಾನಿ ಯಾದ ಝಾಂಜಿಬಾರ್ ಕರಾವಳಿವರೆಗೆ ಮುಂದುವರಿದಿದೆ.ಆಹಾರ, ಪರಿಸರ ಬದಲಾವಣೆ, ಸಂಗಾತಿಗಾಗಿ ಹುಡುಕಾಟ ಈ ಸಂಚಾರಕ್ಕೆ ಕಾರಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
MUST WATCH
ಹೊಸ ಸೇರ್ಪಡೆ
ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ
Sandalwood: ʼನೀ ನಂಗೆ ಅಲ್ಲವಾ’ ಚಿತ್ರಕ್ಕೆ ಮುರಳಿ ಸಾಥ್
Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.