Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

"ಈ ಹೋರಾಟ ನಮ್ಮ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟ" ಎಂದಿದ್ದರು

Team Udayavani, Dec 16, 2024, 12:04 PM IST

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

ಮೊಹಮ್ಮದ್ ಯೂನುಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರದ ಸಲಹೆಗಾರರಾಗಿರುವ, ಬಾಂಗ್ಲಾದೇಶ ವಿಮೋಚನಾ ಯುದ್ಧದ ಯೋಧ ಫಾರೂಕ್ ಇ ಆಜಂ ಅವರು ವಿಮೋಚನಾ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನದ ವಿರುದ್ಧದ ಬಾಂಗ್ಲಾದೇಶದ ಗೆಲುವಿನ ದಿನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುವಂತೆ ಕರೆ ನೀಡಿದ್ದಾರೆ. ಭಾರತದ ‘ಉಕ್ಕಿನ ಮಹಿಳೆ’, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಸಾಧಿಸಿದ ಆ ಗೆಲುವು ಪೂರ್ವ ಪಾಕಿಸ್ತಾನದ ಮೇಲೆ ಪಶ್ಚಿಮ ಪಾಕಿಸ್ತಾನದ ನಿಯಂತ್ರಣಕ್ಕೆ ಅಂತ್ಯ ಹಾಡಿತು.

ಆಜಂ ಅವರು ಬಾಂಗ್ಲಾದೇಶದ ಇತಿಹಾಸದಲ್ಲಿ ನಡೆದು ಬರುತ್ತಿದ್ದ ಡಿಸೆಂಬರ್ 16ರ ವಿಜಯ ಪಥಸಂಚಲನದ ಬದಲಿಗೆ ‘ಬಿಜೊಯ್ ಮೇಳ’ಗಳನ್ನು ನಡೆಸಲಾಗುವುದು ಎಂದಿದ್ದಾರೆ. ‘ಬಿಜೊಯ್ ದಿವಸ್’ ನಮ್ಮ ದೇಶಕ್ಕೆ ಅತ್ಯಂತ ಮಹತ್ವದ ದಿನವಾಗಿದೆ ಎಂದಿರುವ ಆಜಂ, ಆ ಗೆಲುವಿಗಾಗಿ ನಡೆಸಿದ ಒಂಬತ್ತು ತಿಂಗಳ ಸುದೀರ್ಘ ಹೋರಾಟವನ್ನು ನೆನೆಸಿದ್ದಾರೆ. ಆದರೆ, ಈ ವರ್ಷ ಡಿಸೆಂಬರ್ 16ರಂದು ಸಾಂಪ್ರದಾಯಿಕವಾದ ಮಿಲಿಟರಿ ಪಥಸಂಚಲನ ನಡೆಯುವುದಿಲ್ಲ ಎಂದಿದ್ದಾರೆ.

“ಮೊದಲು ಪ್ರತಿಯೊಂದು ಗ್ರಾಮಗಳೂ ವಿಜಯದ ಸಂಭ್ರಮಾಚರಣೆಗಳಲ್ಲಿ ಭಾಗವಹಿಸುತ್ತಿದ್ದವು. ಸಂಪೂರ್ಣ ದೇಶವೇ ಸಂಭ್ರಮದಲ್ಲಿ ಮುಳುಗಿರುತ್ತಿತ್ತು. ಆದರೆ ಕಾಲಕ್ರಮೇಣ ಈ ಸಂಭ್ರಮಾಚರಣೆಗಳು ಕಡಿಮೆಯಾದವು. ಈ ವರ್ಷ, ಪ್ರತಿಯೊಂದು ಜಿಲ್ಲೆ, ಉಪಜಿಲ್ಲೆಗಳು ‘ಬಿಜೊಯ್ ಮೇಳ’ ಆಯೋಜಿಸಲಿದ್ದು, ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ, ಔದ್ಯಮಿಕ ಪ್ರದರ್ಶನಗಳು, ಮತ್ತು ಕೃಷಿ ಮೇಳಗಳು ಇರಲಿವೆ” ಎಂದು ಆಜಂ ಹೇಳಿದ್ದಾರೆ.

“ಈ ವರ್ಷದ ವಿಜಯ ದಿನದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳ ಜೊತೆಗೆ ವ್ಯಾಪಾರ ವಸ್ತುಗಳೂ ಇರಲಿವೆ. ಎಲ್ಲ ವಯೋಮಾನದ ಜನರು ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ. ಶಾಲೆಗಳಲ್ಲೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ” ಎಂದು ಆಜಂ ಹೇಳಿದ್ದಾರೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧ: ಸ್ವಾತಂತ್ರ್ಯಾ ನಂತರದ ಸ್ಥಿತಿಗತಿ

ಇಂದಿಗೆ ಬಾಂಗ್ಲಾದೇಶ ಮತ್ತು ಅದರ ಮಾಜಿ ಸಹಯೋಗಿ ಪಾಕಿಸ್ತಾನಗಳೆರಡೂ ದಿವಾಳಿತನದ ಅಂಚಿನಲ್ಲಿದ್ದು, ಅವುಗಳ ಮುಂದೆ ಭಾರೀ ಸವಾಲು ಎದುರಾಗಿದೆ. ಅತಿಯಾದ ಹಣದುಬ್ಬರ, ಪಾವತಿಗಳ ಸಮತೋಲನದ ಕೊರತೆ, ದುರ್ಬಲ ಆರ್ಥಿಕ ವಲಯ, ಮಹಿಳೆಯರು ಮತ್ತು ಶಿಕ್ಷಿತ ಯುವ ಸಮುದಾಯಕ್ಕೆ ಸೀಮಿತ ಉದ್ಯೋಗಾವಕಾಶಗಳಿದ್ದು, ಇವೆಲ್ಲದರ ಪರಿಣಾಮವಾಗಿ ಕೋವಿಡ್ ಸಾಂಕ್ರಾಮಿಕದ ಬಳಿಕ ಬಾಂಗ್ಲಾದೇಶದ ಚೇತರಿಕೆ ಬಹಳ ನಿಧಾನವಾಗಿದೆ ಎಂದು ವಿಶ್ವ ಬ್ಯಾಂಕಿನ ಅಕ್ಟೋಬರ್ 15ರ ಮಾಹಿತಿ ತಿಳಿಸಿದೆ.

ಇತ್ತೀಚಿನ ಬಾಂಗ್ಲಾದೇಶ್ ಡೆವಲಪ್‌ಮೆಂಟ್ ಅಪ್‌ಡೇಟ್ ಮಾಹಿತಿ ಹೇಗೆ ಜಾಗತಿಕ ಮತ್ತು ಸ್ಥಳೀಯ ವಿಚಾರಗಳು ಆ ದೇಶಕ್ಕೆ ಕಠಿಣ ಆರ್ಥಿಕ ಸವಾಲುಗಳನ್ನು ಒಡ್ಡಿವೆ ಎಂದು ವಿವರಿಸಿದೆ.

ಸರಕು ಮತ್ತು ಸೇವೆಗಳ ಕನಿಷ್ಠ ಪ್ರಮಾಣದ ಬಳಕೆ ಮತ್ತು ರಫ್ತಿನ ಪರಿಣಾಮವಾಗಿ, 2024ರ ಆರ್ಥಿಕ ವರ್ಷದಲ್ಲಿ ಬಾಂಗ್ಲಾದೇಶದ ಜಿಡಿಪಿ ದರ 5.2%ಗೆ ಇಳಿದಿತ್ತು. ಕನಿಷ್ಠ ಪ್ರಮಾಣದ ಹೂಡಿಕೆ ಮತ್ತು ಜಡವಾದ ಔದ್ಯಮಿಕ ಚಟುವಟಿಕೆಗಳ ಪರಿಣಾಮವಾಗಿ, 2025ರ ಹಣಕಾಸು ವರ್ಷದಲ್ಲಿ ಬಾಂಗ್ಲಾದೇಶದ ಜಿಡಿಪಿ 4%ಗೆ ಕುಸಿಯುವ ನಿರೀಕ್ಷೆಗಳಿವೆ. 2026ರ ಹಣಕಾಸು ವರ್ಷದಲ್ಲಿ ಬಾಂಗ್ಲಾದೇಶದ ಜಿಡಿಪಿ ಚೇತರಿಕೆ ಕಂಡು, 5.5%ಗೆ ಏರುವ ಸಾಧ್ಯತೆಗಳಿವೆ.

2016ರಿಂದ 2022ರ ನಡುವೆ, ಒಟ್ಟಾರೆಯಾಗಿ ನಿರುದ್ಯೋಗದ ಪ್ರಮಾಣ ಕಡಿಮೆಯಾಗಿದೆ. ಆದರೆ, ನಗರ ಪ್ರದೇಶಗಳ ಯುವಜನತೆ ಇಂದಿಗೂ ಹೆಚ್ಚಿನ ನಿರುದ್ಯೋಗ ದರವನ್ನು ಎದುರಿಸುತ್ತಿದ್ದಾರೆ.ನಗರ ಪ್ರದೇಶಗಳ ಸುಶಿಕ್ಷಿತ ಯುವ ಜನರ ಮುಂದೆ ಕಡಿಮೆ ಉದ್ಯೋಗಾವಕಾಶಗಳಿವೆ. ಪ್ರಮುಖ ಉದ್ಯಮಗಳಾದ ಸಿದ್ಧ ಉಡುಪಿನಂತಹ ಉದ್ಯಮಗಳಲ್ಲೂ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತಿದೆ.

1971ರ ವಿಮೋಚನಾ ಯುದ್ಧದ ಆರಂಭ

ಆಗಸ್ಟ್ 15, 1975ರಂದು ಶೇಖ್ ಹಸೀನಾರ ತಂದೆ, ‘ಬಂಗಬಂಧು’ ಎಂದೇ ಹೆಸರಾದ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಬಾಂಗ್ಲಾದೇಶಿ ಸೇನೆಯ ಯೋಧರು ದಂಗೆಯೊಂದರಲ್ಲಿ ಗುಂಡಿಟ್ಟು ಹತ್ಯೆಗೈದರು.

ಅದಕ್ಕೆ ನಾಲ್ಕು ವರ್ಷಗಳ ಮುನ್ನ, ಮಾರ್ಚ್ 7, 1971ರಂದು ಢಾಕಾದ ರೇಸ್ ಕೋರ್ಸ್ ಮೈದಾನದಲ್ಲಿ ಮುಜಿಬುರ್ ರೆಹಮಾನ್ ಅವರು ಪ್ರಭಾವಿ ಭಾಷಣ ಮಾಡಿ, ಪೂರ್ವ ಪಾಕಿಸ್ತಾನದ ಜನರನ್ನು ಪಶ್ಚಿಮ ಪಾಕಿಸ್ತಾನದ ದಮನ ನೀತಿಯ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದರು.

ತನ್ನ ಭಾಷಣದಲ್ಲಿ ಅವರು “ಈ ಹೋರಾಟ ನಮ್ಮ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟ” ಎಂದಿದ್ದರು. ಅವರು ಪ್ರತಿಯೊಬ್ಬ ಬಂಗಾಳಿಗೂ ನಿಮ್ಮ ಮನೆಗಳನ್ನೇ ಕೋಟೆಗಳನ್ನಾಗಿಸಿ ಎಂದು ಕರೆ ನೀಡಿ, ನಮ್ಮನ್ನು ಯಾರೂ ನೆಲಕಚ್ಚಿಸಲು ಸಾಧ್ಯವೇ ಇಲ್ಲ ಎಂಬ ಶಕ್ತಿಶಾಲಿ ಮಾತುಗಳಿಂದ ಭಾಷಣ ಮುಗಿಸಿದ್ದರು.

ಆ ಭಾಷಣದ ಬಳಿಕ ನಡೆದ ಘಟನೆಗಳು ಇಂದು ಇತಿಹಾಸದ ಭಾಗವಾಗಿವೆ. ಬಂಗಬಂಧುವಿನ ಭಾಷಣದ ಹದಿನೆಂಟು ದಿನಗಳ ಬಳಿಕ, ಬಂಗಾಳಿ ನಾಗರಿಕರು, ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು ಮತ್ತು ಸೇನಾಧಿಕಾರಿಗಳನ್ನು ಗುರಿಯಾಗಿಸಿ ಪಾಕಿಸ್ತಾನಿ ಸೇನೆ ‘ಆಪರೇಶನ್ ಸರ್ಚ್‌ಲೈಟ್’ ಕಾರ್ಯಾಚರಣೆ ಆರಂಭಿಸಿತು. ಆಗ ಬಾಂಗ್ಲಾದೇಶ ವಿಮೋಚನಾ ಯುದ್ಧವೂ ಆರಂಭಗೊಂಡಿತು. ಮಾರ್ಚ್ 25ರ ರಾತ್ರಿ ಯುದ್ಧ ಆರಂಭಗೊಂಡಾಗ, ಬಂಗಬಂಧುವನ್ನು ಪಾಕಿಸ್ತಾನಿ ಯೋಧರು ಗೃಹ ಬಂಧನದಲ್ಲಿ ಇಟ್ಟಿದ್ದರು.

1971ರ ಭಾರತ – ಪಾಕಿಸ್ತಾನ ಯುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಹಾದಿ ಮಾಡಿಕೊಟ್ಟಿತು. ಈ ಯುದ್ಧ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಅಸಾಧಾರಣ ನಾಯಕತ್ವಕ್ಕೆ ಸಾಕ್ಷಿಯಾಗಿತ್ತು. ಬಾಂಗ್ಲಾದೇಶದ ಮುಕ್ತಿ ವಾಹಿನಿಗೆ ಭಾರತದ ನೆರವು ಮತ್ತು ಆ ಬಳಿಕದ ಜಾಗರೂಕ ರಾಜಕೀಯ ನಡೆಗಳು ಇತಿಹಾಸದ ಈ ಅಧ್ಯಾಯದ ಮುಖ್ಯಾಂಶಗಳಾಗಿವೆ.

ಮುಜಿಬುರ್ ರೆಹಮಾನ್: ರಾಜನಾಗಿ ಹೊರಹೊಮ್ಮಿದ ನಾಯಕ

1969ರಲ್ಲಿ, ಜನರಲ್ ಯಾಹ್ಯಾ ಖಾನ್ ಅವರು ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಅವರಿಂದ ಅಧಿಕಾರ ಪಡೆದುಕೊಂಡು, ಪಾಕಿಸ್ತಾನದ ಮೊದಲ ಚುನಾವಣೆಗಳನ್ನು ಘೋಷಿಸಿದರು.

1970ರಲ್ಲಿ ನಡೆದ ಚುನಾವಣೆಯಲ್ಲಿ, ಶೇಖ್ ಮುಜಿಬುರ್ ರೆಹಮಾನ್ ಅವರ ಆವಾಮಿ ಲೀಗ್ ಪಕ್ಷ ಪೂರ್ವ ಪಾಕಿಸ್ತಾನದ 162 ಸ್ಥಾನಗಳ ಪೈಕಿ 160ರಲ್ಲಿ ಗೆಲುವು ಸಾಧಿಸಿತು. ಜುಲ್ಫೀಕರ್ ಅಲಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಶ್ಚಿಮ ಪಾಕಿಸ್ತಾನದ 138 ಸ್ಥಾನಗಳಲ್ಲಿ 81 ಸ್ಥಾನಗಳನ್ನು ಗೆದ್ದಿತು.

ಬಹುಮತ ಪಡೆದಿದ್ದ ರೆಹಮಾನ್ ವಾಸ್ತವವಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಬೇಕಿತ್ತು. ಆದರೆ ಪಾಕಿಸ್ತಾನದ ಮಿಲಿಟರಿ ಸರ್ಕಾರ ಅದನ್ನು ತಡೆಯಿತು. ಮಾರ್ಚ್ 1971ರ ವೇಳೆಗೆ, ಆವಾಮಿ ಲೀಗ್ ಬೆಂಬಲಿಗರು ಪ್ರತಿಭಟನೆ, ಪ್ರದರ್ಶನಗಳು ಮತ್ತು ಧರಣಿಗಳನ್ನು ಆರಂಭಿಸಿದರು.

ಪಾಕಿಸ್ತಾನಿ ಸೇನೆ ಬಹಿರಂಗವಾಗಿಯೇ ಬಾಂಗ್ಲಾದೇಶವನ್ನು ನಾಶಗೊಳಿಸಲಾರಂಭಿಸಿತು. ಹಮೂದುರ್ ರೆಹಮಾನ್ ಸಮಿತಿ ಈ ಯುದ್ಧದಲ್ಲಿ 26,000 ಜನರು ಸಾವಿಗೀಡಾಗಿ, ಲಕ್ಷಾಂತರ ಜನರು ನಿರಾಶ್ರಿತರಾಗಿ ಭಾರತಕ್ಕೆ ಪಲಾಯನ ಮಾಡಿದರು ಎಂದು ವರದಿ ಮಾಡಿತ್ತು.

ಭಾರತ ಮುಜಿಬುರ್ ರೆಹಮಾನ್ ಅವರ ಆವಾಮಿ ಲೀಗಿಗೆ ಬೆಂಬಲ ಸೂಚಿಸಿದ್ದರೂ, ಪ್ರಧಾನಿ ಇಂದಿರಾ ಗಾಂಧಿ ನೇರವಾಗಿ ಪಾತ್ರ ವಹಿಸದಿರಲು ನಿರ್ಧರಿಸಿದರು.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟಾಪ್ ನ್ಯೂಸ್

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

Preetham-Gowda

Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ? 

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ

Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ

Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ

Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ

Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು

Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು

CKM-areca

ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Army Day 2025:ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

Karnatakaದಿಂದ ಕಕ್ಷೆಗೆ: ISRO ಸ್ಪೇಡೆಕ್ಸ್ ಜೊತೆ ನಭಕ್ಕೆ ಚಿಮ್ಮಲಿವೆ ಆದಿಚುಂಚನಗಿರಿ SJC

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

Preetham-Gowda

Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ? 

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ

Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ

Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ

Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.