Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
.223 ಕ್ಯಾಲಿಬರ್ ರೈಫಲ್ ಹಾಗೂ ಸ್ಫೋಟಕಗಳು ಪತ್ತೆಯಾಗಿದ್ದವು.
Team Udayavani, Dec 16, 2024, 2:52 PM IST
ಲಾಹೋರ್: ಮನೆಯಲ್ಲಿ ಅಕ್ರಮವಾಗಿ ಸಿಂಹದ ಮರಿಯನ್ನು ಸಾಕಿದ್ದ ಆರೋಪದಡಿ ಪಾಕಿಸ್ತಾನದ ಯೂಟ್ಯೂಬರ್ ರಜಾಬ್ ಬಟ್ ಎಂಬಾತನನ್ನು ಇತ್ತೀಚೆಗೆ ಲಾಹೋರ್ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ವಿವಾಹದ ಉಡುಗೊರೆಯಾಗಿ ರಜಾಬ್ ಈ ಸಿಂಹದ ಮರಿಯನ್ನು ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ರಜಾಬ್ ಹಲವಾರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಬಹಿರಂಗವಾಗಿತ್ತು.
ಮಾಧ್ಯಮದ ವರದಿ ಪ್ರಕಾರ, ಬಂಧಿತ ರಜಾಬ್ ನನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಜಾಬ್ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪಂಜಾಬ್ ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು.
ರಜಾಬ್ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ, .223 ಕ್ಯಾಲಿಬರ್ ರೈಫಲ್ ಹಾಗೂ ಸ್ಫೋಟಕಗಳು ಪತ್ತೆಯಾಗಿದ್ದವು. ಸಿಂಹದ ಮರಿ ಕೂಡಾ ಇದ್ದಿದ್ದು, ಇದು ಅಕ್ರಮವಾಗಿದೆ ಎಂದು ವರದಿ ತಿಳಿಸಿದೆ.
ಲಾಹೋರ್ ನಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯ ಗೆಳೆಯರು, ಕುಟುಂಬ ಸದಸ್ಯರು ಹಾಜರಾಗಿದ್ದು, ಈ ಸಂದರ್ಭದಲ್ಲಿ ಅತಿಥಿಗಳು ದೊಡ್ಡ ಪ್ರಮಾಣದಲ್ಲಿ ಹಣವನ್ನು ದಂಪತಿ ಮೇಲೆ ಎಸೆದು ಸಂಭ್ರಮಿಸುತ್ತಿದ್ದ ವಿಡಿಯೋಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
MUST WATCH
ಹೊಸ ಸೇರ್ಪಡೆ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.