ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ

Team Udayavani, Dec 16, 2024, 3:54 PM IST

ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ

ಮಧ್ಯಪ್ರದೇಶ: ಮದುವೆಯ ಮೊದಲ ರಾತ್ರಿಯೇ ಪತ್ನಿ ತನ್ನ ಪತಿಗೆ ಹಾಲಿನಲ್ಲಿ ಮತ್ತು ಭರಿಸುವ ಔಷಧ ಹಾಕಿ ನೀಡಿ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ನಗನಗದು ದೋಚಿ ಪರಾರಿಯಾಗಿರುವ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬೆಳಕಿಗೆ ಬಂದಿದೆ.

ಇದೀಗ ಮದುವೆಗಾಗಿ ಸಾಲಸೋಲ ಮಾಡಿ ಮಾಡಿಟ್ಟ ಚಿನ್ನಾಭರಣ ಮತ್ತು ಲಕ್ಷಾಂತರ ಹಣವನ್ನು ಒಂದೇ ರಾತ್ರಿಯಲ್ಲಿ ಮದುಮಗಳು ದೋಚಿದ್ದು ವರನ ಮನೆಯವರನ್ನು ದಿಗ್ಭ್ರಮೆಗೊಳಿಸಿದೆ.

ಏನಿದು ಪ್ರಕರಣ:
ಮಧ್ಯಪ್ರದೇಶದ ಛತ್ತರ್‌ಪುರದ ಕುಲವಾರ ಗ್ರಾಮದ ರಾಜ್‌ದೀಪ್ ರಾವತ್ ಅವರ ವಿವಾಹವು ಚರಖಾರಿ ಗ್ರಾಮದ ಖುಷಿ ತಿವಾರಿ ಅವರೊಂದಿಗೆ ಡಿಸೆಂಬರ್ 12 ರಂದು ಧನುಷ್ಧಾರಿ ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿತು. ಎರಡೂ ಕಡೆಯ ಕುಟುಂಬ ಸದಸ್ಯರು ಮದುವೆಯ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ಭಾಗಿಯಾಗಿದ್ದರು ಅಂತೂ ದೇವಸ್ಥಾನದಲ್ಲಿ ಮದುವೆ ಕಾರ್ಯಗಳು ಒಳ್ಳೆ ರೀತಿಯಲ್ಲಿ ನಡೆದಿತ್ತು ಕೊನೆಗೆ ಹೆಣ್ಣಿನ ಕಡೆಯವರು ತನ್ನ ಮಗಳನ್ನು ಅಳಿಯನ ಕೈಗೆ ಕೊಟ್ಟು ಸಂತೋಷವಾಗಿ ಬಾಳಿ ಎಂದು ಆಶೀರ್ವದಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಇತ್ತ ಮದುವೆ ಮೊದಲ ರಾತ್ರಿ ಮದುಮಗಳು ತನ್ನ ಪತಿಗೆ ಕುಡಿಯಲು ಹಾಲು ನೀಡಿದ್ದಾಳೆ ಪತಿಯು ಖುಷಿಯಲ್ಲೇ ಕುಡಿದಿದ್ದಾನೆ ಇಷ್ಟಾದ ಕೆಲವೇ ಹೊತ್ತಿನಲ್ಲಿ ಪತಿ ನಿದ್ರೆಗೆ ಜಾರಿದ್ದಾನೆ ಅಷ್ಟೋತ್ತಿಗಾಗಲೇ ಮಧ್ಯರಾತ್ರಿಯಾಗಿತ್ತು, ಕೂಡಲೇ ವದು ಮದುಮಗನ ಮನೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಒಟ್ಟುಮಾಡಿ ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿದ್ದಾಳೆ. ಇತ್ತ ಬೆಳಿಗ್ಗೆ ವರನ ತಾಯಿ ಕೋಣೆಗೆ ಬಂದು ಎಬ್ಬಿಸಲು ಬಂದಾಗ ಕೊನೆಯ ಬಾಗಿಲು ತೆರೆದಿತ್ತು ಕೊನೆಯ ಒಳಗೆ ಹೋಗಿ ನೋಡಿದಾಗ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ತಾಯಿ ಮನೆಯಲ್ಲಿದ್ದ ಇತರ ಸದಸ್ಯರನ್ನು ಕರೆದು ಮದುಮಗಳನ್ನು ಹುಡುಕಿದಾಗ ಮದುಮಗಳು ನಾಪತ್ತೆಯಾಗಿದ್ದಳು, ಇತ್ತ ಮನೆಯಲ್ಲಿದ್ದ ಚಿನ್ನಾಭರಣ, ನಗದು ಸೇರಿ ಎಲ್ಲವೂ ನಾಪತ್ತೆಯಾಗಿತ್ತು.

ಆಸ್ಪತ್ರೆಗೆ ದಾಖಲಾದ ಮದುಮಗ:
ಮದುವೆಯ ರಾತ್ರಿ ಮದುಮಗಳು ಹಾಲಿನಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದನ್ನು ಕುಡಿದ ಮದುಮಗ ಪ್ರಜ್ಞಾಹೀನನಾಗಿದ್ದ ಅಲ್ಲದೆ ಬೆಳಿಗ್ಗೆವರೆಗೂ ಆತನಿಗೆ ಪ್ರಜ್ಞೆಯೇ ಬರಲಿಲ್ಲ ಇದರಿಂದ ಗಾಬರಿಗೊಂಡ ಮನೆಮಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಸದ್ಯ ಮದುಮಗ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ಮಧ್ಯವರ್ತಿಗೆ ಒಂದೂವರೆ ಲಕ್ಷ ರೂ. ನೀಡಿದ್ದ ವರನ ಕುಟುಂಬ:
ವರ ರಾಜದೀಪ್ ಅವರ ತಂದೆ ಅಶೋಕ್ ರಾವತ್ ಅವರು ಮಧ್ಯವರ್ತಿ ಪಪ್ಪು ರಜಪೂತ್ ಅವರಿಗೆ ಹೆಣ್ಣು ಹುಡುಕಿ ಕೊಟ್ಟ ವಿಚಾರಕ್ಕೆ ಅಲ್ಲದೆ ಎರಡೂ ಕಡೆಯ ಸಂಬಂಧ ಸೆಟ್ ಮಾಡಿದ್ದಕ್ಕಾಗಿ 1.5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ.

ಇದೀಗ ವರನ ತಂದೆ ಅಶೋಕ್ ರಾವತ್ ಅವರು ವದು ಖುಷಿ ತಿವಾರಿ, ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ್ ತಿವಾರಿ ಮತ್ತು ಮಧ್ಯವರ್ತಿ ಪಪ್ಪು ರಜಪೂತ್ ವಿರುದ್ಧ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಬಳಿಕ ವದು ಆಕೆಯ ಸಹೋದರ,ಸ್ನೇಹಿತ ಹಾಗೂ ಮಧ್ಯವರ್ತಿ ಎಲ್ಲರೂ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್‌ ಬಂಧನ

ಟಾಪ್ ನ್ಯೂಸ್

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

Vishwanath-Rao

Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sonia

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

Priyank-Gandhi

Parliament: ʼಪ್ಯಾಲೆಸ್ತೀನ್‌ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

highcourt

Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ

Anura Kumara Dissanayake

Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

Vishwanath-Rao

Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.